ಡಾ.ಅಂಬೇಡ್ಕರ್ 132ನೇ ಜಯಂತೋತ್ಸ ಆಚರಣೆ
ಒಗ್ಗಟ್ಟಾಗಿ ಚುನಾವಣೆ ಎದರಿಸೋಣ ಬಿಜೆಪಿ ಗೆಲುವು ನಿಚ್ಚಿತ ; ಶಶೀಲ ಜಿ.ನಮೋಶಿ
ಜೇವರ್ಗಿ : ಭಾರತ ರತ್ನ, ಸಂವಿದಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ 132ನೇ ಜಯಂತಿಯನ್ನು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಜೇವರ್ಗಿ : ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಜೇವರ್ಗಿಯಲ್ಲಿ ಕಮಲ ಅರಳುವದು ನಿಚ್ಚಿತ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಮಾಡಿ ಎಂದು ಕರೆ ಕೊಟ್ಟರು.
ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಎಂದು ನಾವು ಎಲ್ಲರು ಸೇರಿ ಬಿಜೆಪಿ ಪಕ್ಷ ಜೇವರ್ಗಿಯಲ್ಲಿ ಅರಳಲು ಶ್ರಮಿಸೋಣ ಎಂದು ಹೇಳಿದರು.
ಬಿಜೆಪಿ ಪಕ್ಷದ ಸಿದ್ದಂತ ಪ್ರತಿಯೊಂದು ಹಳ್ಳಿ, ಗ್ರಾಮ, ತಾಲೂಕು ಅಭಿವೃದ್ಧಿ ಆಗಬೇಕು ಇಲ್ಲಿ ಪಕ್ಷ ಸಂಘಟನೆ ಮಾಡುವದು ನಮ್ಮ ಜವಾಬ್ದಾರಿ ನಮಗೆ ಪಕ್ಷದಿಂದ ಅಪೇಕ್ಷೆ ಇಲ್ಲದೆ ಕ್ಷೇತ್ರದ ಅಭಿವೃದ್ಧಿ ಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಈ ಚುನಾವಣೆ ಒಂದು ಹೊಸ ನಾಯಕನನ್ನು ಗುರುತಿಸಿರೋ ಕಾರಣ ಅವರಿಗೆ ಜವಾಬ್ದಾರಿ ನೀಡಬೇಕು ತಾಲೂಕಿನ ಪ್ರತಿ ಗ್ರಾಮಗಳಿಗೆ ಸೌಲಭ್ಯ ದೊರಕುವಂತೆ ಮಾಡಬೇಕು ಎಂದರು.
ಚುನಾವಣೆಗೆ ಮಾತ್ರ ಸೀಮಿತವಾಗದೆ ಪ್ರತಿ ಒಬ್ಬ ಕಾರ್ಯಕರ್ತರು ಕೇಂದ್ರದ ಮತ್ತು ರಾಜ್ಯದ ಪ್ರಗತಿ ಜೊತೆಗೆ ಬಿಜೆಪಿ ಸರ್ಕಾರದ ಕೊಡುಗೆ ಬಗ್ಗೆ ಪ್ರತಿ ಒಬ್ಬರಿಗೂ ತಿಳಿಸಬೇಕು ಎಂದರು.
ಶಿವರಾಜ ಪಾಟೀಲ ರಡ್ಡೇವಾಡ್ಗಿ ಮಾತನಾಡಿ ಈ ಚುನಾವಣೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಮತ್ತು ಸರ್ಕಾರದ ಸೌಲಭ್ಯ ವಂಚಿತರ ಪಕ್ಷ ನಮ್ಮದು ಈ ಬಾರಿ ಹೊಸ ಅಭ್ಯರ್ಥಿಯಾಗಿ ಬಿಜೆಪಿ ನನ್ನನು ಗುರುತಿಸಿ ಟಿಕೆಟ್ ನೀಡಿದೆ ಹೊರತು ನಾನು ಯಾರೊಬ್ಬರಿಗೆ ದ್ರೋಹ ಮಾಡಿ ಗಿಟ್ಟಿಸಿ ಕೋಡಿಲ್ಲ ಎಂದು ಹೇಳಿದರು.
ನಮ್ಮ ಪಕ್ಷದ ಗುರಿ ಒಂದೇ ಅಭಿವೃದ್ಧಿ ಈ ಭಾಗದಲ್ಲಿ ಮುಖ್ಯಮಂತ್ರಿ ಹಿಂದ ಎಲ್ಲಾ ಸಚಿವ ಸ್ಥಾನ ಪಡೆದು ಕೊಂಡರು ಅಭಿವೃದ್ಧಿ ಶೂನ್ಯವಾಗಿದೆ ಈ ಬಾರಿ ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ ಗೆಲುವು ಶತ ಸಿದ್ದ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ
ಲಕ್ಮಿಪುರ ಎಂಪಿ ರೇಖಾ ವರ್ಮಾ,
ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡಮನಿ, ಮಲ್ಲಿನಾಥಗೌಡ ಯಲಗೋಡ, ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೆರೆಪ್ಪ ಬಡಿಗೇರ್, ಶೋಭಾಬಾನಿ, ಭೀಮರಾವ ಗುಜಗುಂಡ್, ಷಣ್ಮುಖ ಸಾಹು ಗೋಗಿ, ಸಂಗನಗೌಡ ಪಾಟೀಲ ರದ್ದೇವಾಡ್ಗಿ, ಸಂತೋಷ ಮಲ್ಲಾಬಾದ್, ಈಶ್ವರ್ ಹಿಪ್ಪರಗಿ, ಸುರೇಶ ನೆದಲಗಿ, ಸಾಗರ ಬಡಿಗೇರ, ಅನಿಲ್ ದೊಡಮನಿ, ಸುರೇಶ ಹಿಪ್ಪರಗಿ, ಮರೆಪ್ಪ ಅಳಲ್ಕರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.