ಎಲ್ಲಾ ಊ
ರಿನ್ಯಾಾಗ ಜಾತ್ರಿಿ ನಡೆಯುತಾವು. ಆದ್ರ ಕೊಪ್ಳ ಜಾತ್ರಿಿ ನೋಡಬೇಕು. ಏನ ಕೆಲಸ ಇದ್ರೂ ಈ ಜಾತ್ರಿಿಗೆ ಹೋಗಿ ಬರಬೇಕ್ರಿಿ ಎನ್ನುವುದು ಈ ಭಾಗದ ಜನರ ಅನಿಸಿಕೆ.
ಐತಿಹಾಸಿಕ ನಗರ ಕೊಪ್ಪಳವು ಒಂದು ಕಾಲದಲ್ಲಿ ಜೈನರ ಕಾಶಿಯಾಗಿತ್ತು. ಇಲ್ಲಿ 777 ಜೈನ ಬಸದಿಗಳಿದ್ದವು. ಕೊಪ್ಪಳವು ಜೈನರಿಗೆ ಪವಿತ್ರ ಸ್ಥಳವಾಗಿತ್ತು. ಇದೇ ಕಾರಣಕ್ಕೆೆ ಅತ್ತಿಿಮಬ್ಬೆೆ ಕಾವ್ಯವನ್ನು ಕೊಪಣದಷ್ಟೆೆ ಪವಿತ್ರ ಎಂದು ವರ್ಣಿಸಲಾಗಿದೆ. ಇದೇ ವೇಳೆ ಇದು ಬೌದ್ಧ ಧರ್ಮದ ಕೇಂದ್ರವೂ ಆಗಿತ್ತು ಎನ್ನುವದಕ್ಕೆೆ ಇಲ್ಲಿ ಸಾಮ್ರಾಾಟ ಅಶೋಕನ ಎರಡು ಶಾಸನಗಳು ಸಿಕ್ಕಿಿವೆ.
ಇಂತಹ ಇತಿಹಾಸವುಳ್ಳ ಕೊಪ್ಪಳವನ್ನು ಈಗ ಗುರುತಿಸುವುದು ಗವಿಮಠದಿಂದ… ಅದರ ಧಾರ್ಮಿಕ ಮಾತ್ರವಲ್ಲ , ಸಾಮಾಜಿಕ ಕಾರ್ಯಗಳಿಂದಲೂ ವಿಶೇಷವಾಗಿದೆ.
ಕಾಶಿ ಚರವರ ಪೀಠದಿಂದ ರುದ್ರಮುನಿ ಎಂಬ ಯತಿಯೊಬ್ಬರು ಇಲ್ಲಿಗೆ ಬಂದು ಗವಿಯಲ್ಲಿ ವಾಸವಾಗಿದ್ದರು. ಗವಿಮಠದ 11 ನೆಯ ಪೀಠಾಧಿಪತಿಗಳಾಗಿರುವ ಮಂಗಳಾಪುರದಲ್ಲಿ ಹುಟ್ಟಿಿರುವ ಗುಡದಯ್ಯ ಗವಿಸಿದ್ದೇಶ್ವರ ಸ್ವಾಾಮಿಯಾದರು. ಈಗಿನ ಪೀಠಾಧಿಪತಿಗಳು 18ನೆಯವರು.
ಗವಿಮಠದ ಜಾತ್ರೆೆಯು ಈ ಹಿಂದಿನಿಂದ ಅದ್ದೂರಿಯಾಗಿ ನಡೆಯುತ್ತಾಾ ಬಂದಿದೆ. ಈ ಜಾತ್ರೆೆಗೆ ಅಧುನಿಕ ಸ್ಪರ್ಷ ನೀಡಿ, ಜಾತ್ರೆೆಯನ್ನು ವೈವಿಧ್ಯಮಯವಾಗಿ ಮಾಡಿದ್ದು ಈಗಿನ ಸ್ವಾಾಮೀಜಿಗಳಾದ ಶ್ರೀಗವಿಸಿದ್ದೇಶ್ವರ ಸ್ವಾಾಮಿಗಳು.
2002 ರಲ್ಲಿ ಗವಿಮಠಕ್ಕೆೆ ಅಭಿನವ ಶ್ರೀಗವಿಸಿದ್ದೇಶ್ವರ ಸ್ವಾಾಮಿಗಳು ಪೀಠಕ್ಕೆೆ ಬಂದರು. ಆಗಿನಿಂದ ವರ್ಷದಿಂದ ವರ್ಷಕ್ಕೆೆ ಜಾತ್ರೆೆಯ ವೈಭವ ಏರುತ್ತಾಾ ಸಾಗಿದೆ. ಜಾತ್ರೆೆಯ ಅಚ್ಚುಕಟ್ಟುತನ ನಿಬ್ಬೆೆರಗಾಗುವಂತೆ ಮಾಡಿದೆ.
ತ್ರಿಿವಿಧ ದಾಸೋಹಕ್ಕೆೆ ಹೆಸರುವಾಸಿಯಾಗಿರುವ ಕೊಪ್ಪಳ ಗವಿಮಠದ ಜಾತ್ರೆೆಯು ಪ್ರತಿ ವರ್ಷ ಬನದ ಹುಣ್ಣಿಿಮೆಯಾದ ಮೂರನೆಯ ದಿನಕ್ಕೆೆ ಬರುತ್ತದೆ. ಇಲ್ಲಿಯ ಜಾತ್ರೆೆ ತೇರಿಗೆ ಉತ್ತತ್ತಿಿ ಎಸೆದು ಬೆಂಡು, ಬತ್ತಾಾಸು. ಳಾರ ತಿಂದು ಹೋಗುವ ಜಾತ್ರೆೆಯಾಗಿರದೆ ಇದು ಅರಿವಿನ ಜಾತ್ರೆೆಯಾಗಿರುತ್ತದೆ. ಇಲ್ಲಿಯ ದಾಸೋಹವು ರಾಜ್ಯದಲ್ಲಿಯೇ ಮಾದರಿಯಾಗಿದೆ.
ಒಂದು ಕಡೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹ ಅಚ್ಚುಕಟ್ಟುತನವಿದೆ. ಬಸವಪಟ ಆರೋಹಣ, ತೆಪ್ಪೋೋತ್ಸವ, ಗಂಗಾರತಿ, ಮಹಿಳೆಯರು ಉಡಿ ತುಂಬುವ ಕಾರ್ಯಕ್ರಮ, ಶ್ರೀ ಗವಿಸಿದ್ದೇಶ್ವರರ ಮೂರ್ತಿ ಮೆರವಣಿಗೆ, ಹಲಗೇರಿಯಿಂದ ಬರುವ ಕಳಸ, ಉಚ್ಚಾಾಯ, ತೇರು, ಪಲ್ಲಕ್ಕಿಿ ಮೆರವಣಿಗೆ ನಡೆಯುತ್ತಿಿವೆ. ಇವುಗಳು ಮೊದಲಿನಿಂದಲೂ ನಡೆಯುತ್ತವೆ. ಇವುಗಳಿಗೆ ಈಗ ಸಾಂಸ್ಕೃತಿಕ ಹಾಗೂ ಭಕ್ತರ ಹಿತಚಿಂತನಾ ಸಭೆ ನಡೆಯುತ್ತಿಿರುವುದು ವಿಶೇಷ.
ದಾಸೋಹ: ಮಠದಲ್ಲಿ ನಿತ್ಯ ದಾಸೋಹ ನಡೆಯುತ್ತಿಿದೆ. ಜಾತ್ರೆೆಯ ಸಂದರ್ಭದಲ್ಲಿ ಮಹಾದಾಸೋಹವು ನಡೆಯುತ್ತಿಿದೆ. ದಾಸೋಹವು ಆಯುರ್ವೇದ ವನದಲ್ಲಿ 100ಕ್ಕೂ ಹೆಚ್ಚು ಕೌಂಟರ್ ಗಳಲ್ಲಿ ಊಟ ಬಡಿಸುವ ವ್ಯವಸ್ಥೆೆ ಇದೆ. ದಾಸೋಹದಲ್ಲಿ ಸರಿಸುಮಾರು 25 ಲಕ್ಷ ಜನ ಊಟ ಮಾಡುತ್ತಾಾರೆ. ಬಂದವರಿಗೆ ರುಚಿ, ಶುಚಿ ಹಾಗೂ ವೈವಿಧ್ಯ್ಯಮಯ ಊಟ ಬಡಿಸಲಾಗುತ್ತಿಿದೆ.
ದಾಸೋಹಕ್ಕಾಾಗಿ ಭಕ್ತರು ಸರಿಸುಮಾರು 20 ಲಕ್ಷ ರೊಟ್ಟಿಿ, 25 ಟನ್ ಮಾದಲಿ, ಈ ಬಾರಿ ಸಿಂಧನೂರು ಗೆಳೆಯರ ಬಳಗದಿಂದ ಮೈಸೂರು ಪಾಕ, ಓತಗೇರಿ ಸೇರಿದಂತೆ ವಿವಿಧ ಗ್ರಾಾಮದವರಿಂದ 2.50 ಲಕ್ಷ ರವೆ ಉಂಡಿ, ಕೊಪ್ಪಳದ ಗೆಳೆಯರ ಬಳಗದಿಂದ ಮಿರ್ಚಿ, ಬೇರೆ ಬೇರೆ ಗ್ರಾಾಮದವರು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ನೀಡುತ್ತಾಾರೆ. ಈ ತಿಂಡಿ ತಿನಿಸುಗಳು ಲಕ್ಷಾಂತರ ಜನರಿಗೆ ಸಮರ್ಪಣೆಯಾಗುತ್ತದೆ.
ದಾಸೋಹಕ್ಕಾಾಗಿ ಸುಮಾರು 800 ಕ್ವಿಿಂಟಾಲ್ ಅಕ್ಕಿಿ, ಈ ಬಾರಿ ಮಹಾಲಿಂಗಪುರದಿಂದ 24 ಕ್ವಿಿಂಟಾಲ್ ಬೆಲ್ಲ, ಬ್ಯಾಾಡಗಿಯಿಂದ ಮೆಣಸಿನಕಾಯಿ., ಹನುಮನಾಳದವರಿಂದ ಹುಣಸೆಚಟ್ನಿಿ, ತಾವರಗೇರಿ ಗ್ರಾಾಮದವರು ಹಸಿ ಖಾರದ ಚಟ್ನಿಿ, ಹೀಗೆ ಹಲವಾರು ಪದಾರ್ಥಗಳು ಊಟಕ್ಕಾಾಗಿ ಸಮರ್ಪಣೆಯಾಗುತ್ತವೆ. ಆಯಾ ಪದಾರ್ಥಗಳು ಗ್ರಾಾಮಗಳಿಂದ ಬಗೆಬಗೆಯ ದವಸ ಧಾನ್ಯಗಳು ಮಠಕ್ಕೆೆ ಸಮರ್ಪಣೆಯಾಗುತ್ತವೆ. ಇನ್ನೂ ತರಕಾರಿ, ಕಟ್ಟಿಿಗೆ ಸೇರಿ ಎಲ್ಲವೂ ಭಕ್ತರಿಂದ ಮಠಕ್ಕೆೆ ಸಮರ್ಪಣೆಯಾಗುತ್ತದೆ.
ದಾಸೋಹದಲ್ಲಿ ಸ್ವಯಂಸೇವಕರ ದಂಡು ಇರುತ್ತದೆ. ಇಲ್ಲಿ ಬೇರೆ ಬೇರೆ ಗ್ರಾಾಮಗಳಿಂದ ಸ್ವಯಂಪ್ರೇೇರಿತರಾಗಿ ಬಂದು ಊಟದ ವ್ಯವಸ್ಥೆೆ, ಸ್ವಚ್ಛತೆ ಮಾಡಿ ತಮ್ಮ ಸೇವೆ ಸಲ್ಲಿಸುತ್ತಾಾರೆ.
ಕಾರ್ಯಕ್ರಮ: ಜಾತ್ರೆೆಯಲ್ಲಿ ಕೈಲಾಸ ಮಂಟಪದಲ್ಲಿ ಮೂರು ದಿನ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ ನಾಡಿನ ಗಣ್ಯರು, ಸ್ವಾಾಮೀಜಿಗಳಿಂದ ಭಕ್ತರ ಹಿತಚಿಂತನಾ ಗೋಷ್ಠಿಿಯಾಗಿರುತ್ತದೆ. ಇದರೊಂದಿ ಗೆ ಖ್ಯಾಾತನಾಮರ ಸಂಗೀತ ಕಾರ್ಯಕ್ರಮ, ನಾಡಿನಲ್ಲಿ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿದವರಿಗೆ ಸನ್ಮಾಾನ ಕಾರ್ಯಕ್ರಮ ನಡೆಯುತ್ತದೆ.
ತೇರು: ಈ ವರ್ಷ ಜನವರಿ 5 ರಂದು ಮಹಾರಥೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ಸುಮಾರು 5 ಲಕ್ಷ ಜನ ಸೇರುತ್ತಾಾರೆ. ಇದರಿಂದಾಗಿ ಇದನ್ನು ದಕ್ಷಿಣ ಭಾರತದ ಮಹಾಕುಂಬಭಮೇಳ ಎಂದು ಕರೆಯುತ್ತಾಾರೆ. ಇದೇ ಪ್ರಮಾಣದ ಜನರು ಮರುದಿನ ನಡೆಯುವ ಮದ್ದು ಸುಡುವ ಕಾರ್ಯಕ್ರಮದಲ್ಲಿಯೂ ಸೇರುತ್ತಾಾರೆ.
ಜಿಲ್ಲಾಾಡಳಿತದ ಪ್ರದರ್ಶನ: ಜಾತ್ರೆೆಯ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಲಪುಷ್ಪ ಪ್ರದರ್ಶನ, ಕೃಷಿ ಮೇಳ ನಡೆಯುತ್ತವೆ. ಮೇಳದಲ್ಲಿ ಗ್ರಾಾಮೀಣ ಭಾಗದ ಸೊಗಡು, ಜಿಲ್ಲೆೆಯ ಬೆಳಗಾರರನ್ನು ಪ್ರೋೋತ್ಸಾಾಹಿಸುವ ಉದ್ದೇಶ ಹೊಂದಲಾಗಿದೆ.
ಜಾತ್ರೆೆ: ಮಠದ ಆವರಣದಲ್ಲಿಯ 12 ಎಕರೆ ಜಾಗೆಯಲ್ಲಿ ಜಾತ್ರೆೆಯ ಮಾರಾಟ ಮಳಿಗೆ ನಿರ್ಮಾಣವಾಗಿವೆ. ಇಲ್ಲಿ ಮಿಠಾಯಿ, ಬಳೆ, ಹೊಟೆಲ್, ಮಕ್ಕಳಿಗೆ ಆಟಿಕೆ, ಮನೆಗೆ ಹಾಗೂ ಕೃಷಿಗೆ ಬೇಕಾಗುವ ವಸ್ತುಗಳ ಮಾರಾಟ ಒಂದು ಕಡೆ. ಇನ್ನೊೊಂದು ಕಡೆ ಮನೋರಂಜನೆ ಜೇಂಟ್ ವ್ಹೀಲ್. ಮೋಜಿನ ಆಟ, ಹೀಗೆ ಎಲ್ಲವೂ ಇವೆ. ಎಲ್ಲಾಾ ಅಂಗಡಿಗಳು ಪ್ರತ್ಯೇಕವಾಗಿದ್ದು ಒಂದೊಂದು ಸಾಲಿನಲ್ಲಿ ಒಂದೊಂದು ಇರುತ್ತವೆ.
ಅಚ್ಚುಕಟ್ಟುತನ, ಅದ್ದೂರಿತನದಿಂದಾಗಿ ಕೊಪ್ಪಳದ ಗವಿಮಠದ ಜಾತ್ರೆೆಯು ಪ್ರತಿ ವರ್ಷವು ಜನಾಕರ್ಷಣೆಯ ಕೇಂದ್ರವಾಗಿದೆ. ಇದರಿಂದಾಗಿಯೇ ನಾಡಿನಾದ್ಯಂತ ಜನರು ಈಗ ಕೊಪ್ಪಳದ ಗವಿಮಠದ ಜಾತ್ರೆೆಗೆ ಹೋಗಿ ಬರೋಣ ಎನ್ನುತ್ತಾಾರೆ.
– ಶರಣಪ್ಪ ಬಾಚಲಾಪುರ
ಕೊಪ್ಪಳ

