ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.20: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮೊದಲು ಈ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬುದನ್ನು ತಿಳಿದುಕೊಳ್ಳಲಿ. ನಾವು 135 ಸೀಟ್ ಗೆದ್ದಿದ್ದೀವಿ. ಈ ರಾಜ್ಯದಲ್ಲಿ ಜನರು ನಮಗೆ ಬಹುಮತ ನೀಡಿದ್ದಾರೆ. ನಮ್ಮ ಪಕ್ಷದ ಆಂತರಿಕ ನಮ್ಮ ಪಕ್ಷದ ನಾಯಕರಿಗೆ ಗೊತ್ತು
ಇವರೇನು ಭವಿಷ್ಯ ಹೇಳೋದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈಗ ಸದ್ಯ ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅದು ಮುಂದುವರೆಯುತ್ತದೆ. ಪಕ್ಷದಲ್ಲಿ ಯಾರು ಸಿಎಂ ಮಾಡಬೇಕು ಎಂದು ಹೇಳುವಷ್ಟು ನಾನು ದೊಡ್ಡವನಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಈಗ ಮಂತ್ರಿಸ್ಥಾನ ನೀಡಿದೆ ಅದನ್ನು ಮಾಡುತ್ತಿದ್ದೇನೆ ಎಂದರು.
ಬಿಜೆಪಿಯವರಿಗೆ ಸ್ವಲ್ಪ ತಲೆ ಸರಿ ಇದೆಯೋ ಇಲ್ಲವೋ ಕೇಳಿರಿ. ಅಕ್ಕಿ ದಾಸ್ತಾನು ಇದೆ ಎಂದು ಎಫ್ಸಿಐದವರು ಹೇಳಿದರು. ಈಗ ಬಡವರಿಗೆ ಅಕ್ಕಿ ಕೊಡಬಾರದು, ಕಾಂಗ್ರೆಸ್ ಪಕ್ಷಕ್ಕೆ ಹೆಸರು ಬರುತ್ತದೆ ಎಂದು ಅಕ್ಕಿ ಕೊಡುತ್ತಿಲ್ಲ. ಅಕ್ಕಿ ಕೊಡುವ ವಿಷಯದಲ್ಲಿ ಬಿಜೆಪಿ ಸರಕಾರ ರಾಜಕಾರಣ ಮಾಡುತ್ತಿದೆ. ಇದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ಬಡವರು ಬೇಕಿಲ್ಲ, ಕಾರ್ಪೋರೇಟರ್ಸ್ನ್ನು ಮಾತ್ರ ಬದುಕಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಬಣವಿಲ್ಲ. ಕಾಂಗ್ರೆಸ್ ಬಣ ಅಷ್ಟೆ. ನಾನು ನಳೀನ್ ಕುಮಾರ್ ಅವರನ್ನು ಕೇಳುತ್ತೇನೆ. ಅವರಲ್ಲಿ 101 ಬಣವಿದೆ. ವಿರೋಧ ಪಕ್ಷದ ನಾಯಕನ ಹೆಸರು ಹೇಳಲು ಯೋಗ್ಯತೆ ಇಲ್ಲ. ಇನ್ನು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂದು ಟೀಕಿಸಿದರು.
ರಾಜ್ಯದ ಲೋಕಸಭಾ ಸದಸ್ಯರು ಕೇಂದ್ರ ಸರಕಾರವನ್ನು ಯಾಕೆ ಕೇಳಬಾರದು. ನಾವು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಅಕ್ಕಿ ಕೊಡುತ್ತಿಲ್ಲ. ಎಲ್ಲ ಬಡವರಿಗೆ ಕೊಡುತ್ತೇವೆ. 10 ಕೆಜಿ ಅಕ್ಕಿಯನ್ನು ನಾವು ಕೊಟ್ಟೇ ಕೊಡುತ್ತೇವೆ. ಬೇರೆ ರಾಜ್ಯದೊಂದಿಗೆ ಸಿಎಂ ಅವರು ಮಾತನಾಡುತ್ತಿದ್ದಾರೆ. 10 ಕೆಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ ಎಂದರು.
ಬಿಜೆಪಿಯವರ ಬಜೆಟ್ ಕೇವಲ ಪಟಾಕಿ ಬಜೆಟ್ ಆಗಿದೆ. ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಪಾರ್ಕ್ ಸಂಬಂಧಿಸಿದಂತೆ ನಾನು ಮಾಹಿತಿ ತರಿಸಿಕೊಂಡಿದ್ದೇನೆ ಸೂಕ್ತವಾದ ಸ್ಥಳದಲ್ಲಿ ತೋಟಗಾರಿಕೆ ಪಾರ್ಕ್ ಮಾಡುತ್ತೇವೆ.
ಕನಕಗಿರಿಯಲ್ಲಿ ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ. ಅಧಿಕಾರಿಗಳು ವರದಿ ನೀಡಿದ್ದಾರೆ. ನಾನು ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.