ಸುದ್ದಿಮೂಲ ವಾರ್ತೆ ಹರಪನಹಳ್ಳಿ, ನ.27:
ಸಂವಿಧಾನ ಭಾರತದ ಆತ್ಮವಿದ್ದಂತೆ ಸಂವಿಧಾನಕ್ಕೆೆ ಧಕ್ಕೆೆ ಆದರೆ ಭಾರತಕ್ಕೆೆ ಧಕ್ಕೆೆಯಾದಂತೆ ಭಾರತದ ಪ್ರಜೆಗಳು ಸಂವಿಧಾನದ ಆಶಯಗಳನ್ನು ಎತ್ತಿಿ ಹಿಡಿಯೋಣ ಎಂದು ಶಾಸಕ ಲತಾ ಮಲ್ಲಿಕಾರ್ಜುನ್ ಅಭಿಪ್ರಾಾಯ ಪಟ್ಟರು
ರಾಷ್ಟ್ರೀಯ ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಸಮಾಜ ಕಲ್ಯಾಾಣ ಇಲಾಖೆ ಹಾಗೂ ತಾಲೂಕಾ ಆಡಳಿತ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಆಚರಿಸಲಾಯಿತು
ಪಟ್ಟಣದ ರಾಜ ಸೋಮಶೇಖರ ನಾಯಕ (ಹರಿಹರ ವೃತ್ತ) ವೃತ್ತದಲ್ಲಿ ನಡೆದ ದಿನಾಚರಣೆಯಲ್ಲಿ ಪಾಲ್ಗೊೊಂಡ ಶಾಸಕರು, ಸಂವಿಧಾನ ಶಿಲ್ಪಿಿ ಡಾ. ಅಂಬೇಡ್ಕರ್ ರವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸುವ ಮೂಲಕ ಜಾಥಾಕ್ಕೆೆ ಚಾಲನೆ ನೀಡಿದರು.
ನಮ್ಮ ಸಂವಿಧಾನ ಭಾರತದ ಪ್ರಜೆಗಳನ್ನು ಸಮಾನ ರೀತಿಯಲ್ಲಿ ಜೀವಿಸುವುದಕ್ಕೆೆ ಅವಕಾಶ ಮಾಡಿಕೊಟ್ಟಿಿದೆ. ಸಂವಿಧಾನ ಆತ್ಮವಿದ್ದಂತೆ ಆತ್ಮಕ್ಕೆೆ ಧಕ್ಕೆೆ ಆದರೆ ಹಾನಿಯಾಗುತ್ತದೆ ಅದೇ ರೀತಿ ಸಂವಿಧಾನಕ್ಕೆೆ ಚ್ಯುತಿ ಬಂದರೆ ದೇಶದ ಪ್ರಜೆಗಳಿಗೆ ಹಾನಿಯಾಗುತ್ತದೆ ಎಂದರು. ಸಂವಿಧಾನವನ್ನು ಗೌರವಿಸಿ ಆಶಯಗಳನ್ನು ಭವಿಷ್ಯದ ಭಾರತಕ್ಕೆೆ ತಿಳಿಸೋಣ ಎಂದರು.
ವಿವಿಧ ಶಾಲೆಯ ಮಕ್ಕಳೊಂದಿಗೆ ಸಂವಿಧಾನದ ಪೀಠಿಕೆ ಹಾಗೂ ಅಂಬೇಡ್ಕರ್ ಅವರ ಚಿತ್ರಪಟಗಳ ಮುಖಾಂತರ ಐವಿ ಸರ್ಕಲ್ ವರೆಗೂ ಜಾಥ ನಡೆಯಿತು.
ಈ ಸಂದರ್ಭದಲ್ಲಿ ತಹಸಿಲ್ದಾಾರ್ ಗಿರೀಶ್ ಬಾಬು, ನಗರಸಭಾ ಪ್ರಭಾರಿ ಆಯುಕ್ತ ರೇಣುಕಾ ದೇಸಾಯಿ ಸಮಾಜ ಕಲ್ಯಾಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಆರ್ ಗಂಗಪ್ಪ, ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಹಿಂದುಳಿದ ವರ್ಗಗಳ ಅಧಿಕಾರಿ ಭೀಮಪ್ಪ, ಪರಿಶಿಷ್ಟ ಪಂಗಡ ಇಲಾಖೆಯ ಇಬ್ರಾಾಹಿಂ ಸಾಬ್, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
ಸಂವಿಧಾನದ ಆಶಯಗಳಿಗೆ ಧಕ್ಕೆ ಆಗದಂತೆ ಉತ್ತಮ ಪ್ರಜೆಗಳಾಗಿ ಬಾಳೋಣ : ಎಂಪಿ ಲತಾ ಮಲ್ಲಿಕಾರ್ಜುನ್

