ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.02:
ತಾಲ್ಲೂಕಿನ ಗೋಮರ್ಸಿ ಗ್ರಾಾಮದ ಜಾಮೀಯ ಮಸ್ಜಿಿದ್ (ಸುನ್ನಿಿ) ವಕ್ಫ್ ಆಸ್ತಿಿಗಳ ಮಾರಾಟ ದೇಣಿಗೆ, ವಿನಿಮಯ, ಅಡಮಾನ, ಹಸ್ತಾಾಂತರ ಮತ್ತು ವರ್ಗಾವಣೆಗೆ ತಡೆ ಬಿದ್ದಿದ್ದು, ಜಿಲ್ಲಾಾ ವಕ್ಫ್ ಅಧಿಕಾರಿಗಳು ಉಪನೊಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾಾರೆ.
ತಾಲ್ಲೂಕಿನ ಗೋಮರ್ಸಿ ಗ್ರಾಾಮದ ಜಾಮೀಯ ಮಸ್ಜಿಿದ್ (ಸುನ್ನಿಿ) ವಕ್ಫ್ ಸಂಸ್ಥೆೆಯು ವಕ್ಫ್ ಮಂಡಳಿಯ ಗೆಜೆಟ್ ಕ್ರಮ ಸಂ.26ರಲ್ಲಿ ನೊಂದಾಯಿತ ವಕ್ಫ್ ಸಂಸ್ಥೆೆಯಾಗಿದೆ. ವಕ್ಫ್ ಆಸ್ತಿಿಗಳ ಸರ್ವೆ ನಂ.105ರ ವಿಸ್ತೀರ್ಣ 21ಎಕರೆ, ಸರ್ವೆ ನಂ.113ರ ವಿಸ್ತೀರ್ಣ 19ಎಕರೆ ಹಾಗೂ ಸರ್ವೆ ನಂ.144ರ ವಿಸ್ತೀರ್ಣ 7ಎಕರೆ 9 ಗುಂಟೆ ಒಟ್ಟು 47 ಎಕರೆ 9ಗುಂಟೆ ಜಮೀನು ವಕ್ಫ್ ಮಂಡಳಿಯಲ್ಲಿ ನೊಂದಾಯಿತ ವಕ್ಫ್ ಆಸ್ತಿಿಯಾಗಿದೆ. ಈ ಆಸ್ತಿಿಗಳು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡುತ್ತಿಿರುವದಾಗಿ ದೂರು ಬಂದಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಾರೆ.
ವಕ್ಫ್ ಕಾಯ್ದೆೆ 1995 ವಿಧಿ(51()-ಎರ ಪ್ರಕಾರ ಅಧಿಸೂಚಿತ ಯಾವುದೇ ವಕ್ಫ್ ಆಸ್ತಿಿಯ ಮಾರಾಟ ದೇಣಿಗೆ, ವಿನಿಮಯ, ಅಡಮಾನ, ಹಸ್ತಾಾಂತರ ಮತ್ತು ವರ್ಗಾವಣೆ ನಿರಾರ್ಥಕವಾಗಿರುತ್ತದೆ. ಸರ್ವೋಚ್ಛ ನ್ಯಾಾಯಲಯದ ಆದೇಶದಂತೆ ವಕ್ಫ್ ಆಸ್ತಿಿಗಳು ಎಂದೆಂದಿಗೂ ವಕ್ಫ್ ಆಸ್ತಿಿಗಳೇ ಆಗಿರುತ್ತವೆ ಎಂದು ಜಿಲ್ಲಾಾ ವಕ್ಫ್ ಅಧಿಕಾರಿಗಳು ಉಪನೊಂದಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾಾರೆ.
ಗೋಮರ್ಸಿ ಗ್ರಾಾಮದ ಜಾಮೀಯ ಮಸ್ಜಿಿದ್ (ಸುನ್ನಿಿ) ವಕ್ಫ್ ಸಂಸ್ಥೆೆಯ 47 ಎಕರೆ 9ಗುಂಟೆ ಜಮೀನು ವಕ್ಫ್ ಮಂಡಳಿಯಲ್ಲಿ ನೊಂದಾಯಿತ ವಕ್ಫ್ ಆಸ್ತಿಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದಾಗಿದ್ದು, ಯಾವುದೇ ತರಹ ವರ್ಗಾವಣೆ, ಮುಟೇಷನ್ ಅಥವಾ ಹಸ್ತಾಾಂತರ ಮಾಡದಂತೆ ಮತ್ತು ಪಹಣಿ ಕಾಲಂ 11ರಲ್ಲಿ ವಕ್ಫ್ ಆಸ್ತಿಿ ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿ ಪತ್ರದ ಮೂಲಕ ತಿಳಿಸಿದ್ದಾಾರೆ.

