ಸುದ್ದಿಮೂಲ ವಾರ್ತೆ ರಾಯಚೂರು, ನ.23:
ರಾಯಚೂರು ಮಹಾನಗರ ಪಾಲಿಕೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸೂಕ್ತ ಪ್ರಸ್ತಾಾವನೆ ಸಲ್ಲಿಸುವಂತೆ ನಗರಾಭಿವೃದ್ಧಿಿ ಇಲಾಖೆ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ನೇಮಕದ ಬಗ್ಗೆೆ ಚುನಾಯಿತ ಸದಸ್ಯರ ಆಕ್ಷೇಪಣೆಯ ವಿಚಾರಣೆ ಕಲಬುರ್ಗಿ ನ್ಯಾಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿರುವ ಮಧ್ಯೆೆ ನಗರಾಭಿವೃದ್ಧಿಿ ಇಲಾಖೆಯ ಕಾರ್ಯದರ್ಶಿಗಳು ನ.21ರಂದು ಹೊರಡಿಸಿದ ಈ ಅಧಿಸೂಚನೆ ಕುತೂಹಲ ಮೂಡಿಸಿದೆ.
ಈಗಾಗಲೇ ಚುನಾಯಿತ ಸಮಿತಿಯ ಅವಧಿ ಮುಕ್ತಾಾಯ ಘೋಷಿಸಿ, ಆಡಳಿತಾಧಿಕಾರಿ ನೇಮಕಗೊಳಿಸಿದ ಬೆನ್ನಲ್ಲೆೆ ಸರ್ಕಾರದ ಅಧೀನ ಕಾರ್ಯದರ್ಶಿಗಳಾಗಿ ಟಿ.ಮಂಜುನಾಥ ಅವರು ಈ ಆದೇಶ ಹೊರಡಿಸಿರುವುದು ಪಾಲಿಕೆಯ ಚುನಾವಣಾ ಪ್ರಕ್ರಿಿಯೆ ಆರಂಭಿಸುವ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ರಾಯಚೂರು ಮಹಾನಗರ ಪಾಲಿಕೆಯನ್ನಾಾಗಿ ರಚಿಸಲಾಗಿದ್ದು ಪ್ರಸ್ತುತ ರಾಯಚೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿಯ ಅವಧಿಯು ಮುಕ್ತಾಾಯಗೊಂಡಿರುವುದರಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ಹಾಗಾಗಿ, ವಾರ್ಡುವಾರು ಕ್ಷೇತ್ರ ಪುನರ್ವಿಂಗಡಣೆ ಕೈಗೊಳ್ಳುವ ಸಂಬಂಧ 2014ರ ಮಾರ್ಗಸೂಚಿಗೆ ಸಂಬಂಧ ಪಟ್ಟಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಕ್ಷೇತ್ರ ಪುನರ್ ವಿಂಗಡಣೆ ಪ್ರಸ್ತಾಾವನೆ ಸಿದ್ದಪಡಿಸಿ ವಾರ್ಡ್ವಾರು ಮತದಾರರ, ಜನಸಂಖ್ಯೆೆವಾರು, ಎಸ್ಸಿ, ಎಸ್ಟಿ, ವಾರ್ಡ್ ಚೆಕ್ಬಂದಿ ಗುರುತಿಸಿ ಕರಡು ಅಧಿಸೂಚನೆ ಪ್ರಕಟಿಸಿ ಸರ್ಕಾರಕ್ಕೆೆ ಸಲ್ಲಿಸಲು ಪತ್ರದ ಮೂಲಕ ಸೂಚಿಸಲಾಗಿದೆ.
ರಾಯಚೂರು ಮಹಾನಗರ ಪಾಲಿಕೆಗೆ 2011 ರ ಜನಗಣತಿಯನ್ನು ಆಧರಿಸಿ, ಕ್ಷೇತ್ರ ಪುನರ್ವಿಂಗಡಣೆ ಕೈಗೊಳ್ಳಲು ಸೂಚಿಸಲಾಗಿದೆ. ಸದ್ಯದ ಅಂದಾಜು ಜನಸಂಖ್ಯೆೆಘಿ, ಮತದಾರರ ಪರಿಗಣಿಸಿದರೆ ಈಗಿರುವ 35 ವಾರ್ಡ್ಗಳ ಸಂಖ್ಯೆೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಯಾವ ವಾರ್ಡ್, ಯಾರ ವ್ಯಾಾಪ್ತಿಿಗೆ ಹೋಗಲಿದೆ, ವಿಂಗಡಿಸಿದಾಗ ಹಳೆಯ ವಾರ್ಡ್ ಹೊಸ ವಾರ್ಡ್ಗೆ ಮತದಾರರು ಸ್ಥಳಾಂತರವಾಗುವರೆ ಎಂಬುದರ ಚರ್ಚೆ ಸದ್ಯ ಶುರುವಾಗಿದೆ.
ಈ ಪ್ರಕ್ರಿಿಯೆ ಆರಂಭವಾಗುವ ಮಧ್ಯೆೆ ಚುನಾಯಿತ ಸದಸ್ಯರು ಕಲಬುರ್ಗಿ ಹೈಕೋರ್ಟನಲ್ಲಿ ಆಡಳಿತಾಧಿಕಾರಿ ನೇಮಿಸಲು ಆಕ್ಷೇಪಿಸಿ ದ್ದಲ್ಲದೆ, ಒಮ್ಮೆೆ ವಾದ ಸಮರ್ಥವಾಗಿ ಮಂಡಿಸಲಾಗಿದೆ. ಸರ್ಕಾರದ ಪರ ವಕೀಲರಿಗೆ ನ.25ರಂದು ವಾದ ಮಂಡಿಸಲು ಅವಕಾಶ ಸಿಗಲಿದ್ದು ಅಂತಿಮ ಆದೇಶ ಪ್ರಕಟವಾಗುವುದೊ ಅಥವಾ ವಿಳಂಬವಾದರೂ ಈ ಪ್ರಕ್ರಿಿಯೆ ನಡೆಯಲಿದೆಯೇ ಎಂಬ ಪ್ರಶ್ನೆೆಯೂ ತಲೆ ದೂರಿದೆ.

