ಸುದ್ದಿಮೂಲ ವಾರ್ತೆ ಮುದಗಲ್ , ೆ.11:
2024-25 ನೇ ಸಾಲಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಎಸ್ ಸಿಪಿ, ಟಿಎಸ್ಪಿಯ ಅನುದಾನದಡಿಯಲ್ಲಿ ನಿರ್ಮಿಸಲಾದ ನೂತನ ಗ್ರಂಥಾಲಯ ಕಟ್ಟಡ ಶಾಸಕ ಮಾನಪ್ಪ ವಜ್ಜಲ್ ಸರಸ್ವತಿ ಪೂಜೆ ನೆರವೇರಿಸಿದರು.
ಗ್ರಂಥಾಲಯದಲ್ಲಿ ದೈನಂದಿನ ಪತ್ರಿಿಕೆ, ಕಥೆ ಕಾದಂಬರಿ, ಸಾಹಿತ್ಯದ ಉತ್ತಮ ಪುಸ್ತಕಗಳಿದ್ದು ಸಾರ್ವಜನಿಕರು ಹಾಗೂ ವಿದ್ಯಾಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮುಖಂಡರಾದ ಗಿರಿಮಲ್ಲನಗೌಡ, ಕೆ ನಾಗಭೂಷಣ, ಅಯ್ಯಪ್ಪ ಮಾಳೂರು, ಕರಿಯಪ್ಪ ಯಾದವ್, ಪರಶುರಾಮ ಕೆಂಭಾವಿ, ಸಣ್ಣ ಸಿದ್ದಯ್ಯ, ಮಲ್ಲಿಕಾರ್ಜುನ ಮಾಟೂರು, ಮಲ್ಲಪ್ಪ ಹೂಗಾರ್ ಇತರರು ಇದ್ದರು.
ಗ್ರಂಥಾಲಯ ಕಟ್ಟಡ ಶಾಸಕರಿಂದ ಲೋಕಾರ್ಪಣೆ

