ಸುದ್ದಿಮೂಲ ವಾರ್ತೆ ಹರಪನಹಳ್ಳಿ, ನ.21:
ತಾಲೂಕಿನ ಗುಂಡಗತ್ತಿಯಲ್ಲಿ ಗ್ರಂಥಾಲಯ ಸಪ್ತಾಹವನ್ನು ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಿದ್ಯಾರ್ಥಿನಿಯರಿಂದ ನೆರವೇರಿಸಲಾಯಿತು.
ಗುಂಡಗತ್ತಿ ಗ್ರಾಮದ ವೆಂಕಟೇಶ್ವರ ಪ್ರೌೌಢಶಾಲೆಯ ಮುಖ್ಯ ಶಿಕ್ಷಕರಾದ ಎಚ್.ನಾಗರಾಜ್ ಮಾತನಾಡಿ, ಬದುಕು ಸುಲಭಗೊಳಿಸುವ ಶಕ್ತಿ ಮೊಬೈಲ್ಗಿದೆ. ಅನಿಯಮಿತ ಮೊಬೈಲ್ ಬಳಕೆ ಗೀಳಿನಿಂದ ಸುವರ್ಣವಾದ ಸಮಯ ವ್ಯರ್ಥವಾಗಲಿದೆ. ಮಾನಸಿಕ ಕ್ಷೋಭೆ, ಆರೋಗ್ಯ ಸಮಸ್ಯೆ ಉಂಟುಮಾಡುವ ಅಪಾಯವೂ ಇದೆ. ಮೊಬೈಲ್ ನಮ್ಮನ್ನು ನಿಯಂತ್ರಿಸುವ ಬದಲು ನಾವು ಅದನ್ನು ನಿಯಂತ್ರಿಸುವಂತೆ ಆಗಬೇಕು ಎಂದು ಆಶಿಸಿದರು.
ದೈಹಿಕ ಶಿಕ್ಷಕರಾದ ಕುಮಾರ್ ಮಾತನಾಡಿ, ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವ ಸಾರ್ವಜನಿಕರಿಗೆ ತಿಳಿಸಿಕೊಡುವುದು ಇದರ ಉದ್ದೇಶ. ವಿವಿಧ ವಯೋಮಾನದ ಮತ್ತು ಹಿನ್ನೆಲೆಯ ಓದುಗರು ಭೇಟಿ ನೀಡುವ ಈ ತಾಣಗಳಲ್ಲಿ, ಗ್ರಂಥಾಲಯ ಸಪ್ತಾಾಹದ ಆಚರಣೆಗೆ ಹೆಚ್ಚು ಮಹತ್ವವಿದೆ ಎಂದರು.
ಗ್ರಂಥಾಪಾಲಕ ಕೆ.ನಾಗರಾಜ್ ಮಾತನಾಡಿ, ಅಗತ್ಯವಿರುವ ಪುಸ್ತಕಗಳನ್ನು ವೈಯಕ್ತಿಕವಾಗಿ ಖರೀದಿಸಿ ಓದುವುದು ಆರ್ಥಿಕವಾಗಿ ಕಷ್ಟಸಾಧ್ಯವಾದ ಕೆಲಸ. ಅದಕ್ಕೆೆಂದೇ ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪುಸ್ತಕಗಳು ದೊರೆಯುವ ವ್ಯವಸ್ಥೆ ಗ್ರಂಥಾಲಯಗಳಲ್ಲಿ ಮಾಡಲಾಗಿದೆ ಎಂದರು.
ಈ ವೇಳೆ ಕೆ.ಸಿದ್ದಪ್ಪ, ಚಂದ್ರಪ್ಪ ಎಂ, ಕೆ.ಚಂದ್ರಪ್ಪ, ಎಂ.ಬಸವರಾಜ್, ಮಂಜಪ್ಪ, ಅಂಜಿನಪ್ಪ, ಎಚ್.ವಿ.ಮಲ್ಲಿಕಾರ್ಜುನ, ಕೆ.ಮಂಜಪ್ಪ, ಓಬಣ್ಣ, ನಾಗರಾಜಪ್ಪ, ನೀಲಪ್ಪರ ಮಂಜಪ್ಪ ಸೇರಿದಂತೆ ಆನೇಕರು ಇದ್ದರು.ಸ್ವಾಾಗತಿಸಿದರು.
ಗ್ರಂಥಾಲಯ ಸಪ್ತಾಾಹ ‘ಮೊಬೈಲ್ ದೂರವಿರಿಸಿ, ಪುಸ್ತಕ ಓದಿ’

