ಸುದ್ದಿಮೂಲ ವಾರ್ತೆ
ನೆಲಮಂಗಲ,ಅ.31: ಪಾಶ್ಚಾತ್ಯ ಸಂಸ್ಕೃತಿಯಿಂದ ನಿರ್ವಹಿಸುತ್ತಿರುವ ಇಂದಿನ ಯುಗದಲ್ಲಿ ಸೇವೆಯನ್ನು ಕರ್ತವ್ಯದಂತೆ ಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಡಾ.ಶ್ರೀಶ್ರೀಶ್ರೀ ಬಸವರ ರಮಾನಂದ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ವಾಣಿಜ್ಯ, ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಶೀಲಾದೇವಿ ಎಸ್ ಮಳೀಮಠ ಇವರು ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ಸೇವಾ ಯೊಜನೆ ಯ ವಿಶೇಷ ಶಿಬಿರಗನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷ ” ಸ್ವಚ್ಛ ಕಾಯಕದತ್ತ ಯುವ ಜನತೆ ” ಎಂಬ ವಿಶೇಷ ಶೀರ್ಷಿಕೆಯಡಿ ಶಿಬಿರ ನಡೆಸಲು ಬಹಳ ಉತ್ಸುಕಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿರು.
ಅರ್ಚನ ಆರ್ ಮಾತನಾಡಿ ಕೇವಲ ಕಾಲೇಜಿನಲ್ಲಿ ಓದ-ಬರಹದಲ್ಲಿ ನಿರತರಾದ ನಮಗೆ ಈ NSS ಶಿಬಿರವು ಅದರಲ್ಲೂ ಸ್ವಚ್ಛ ಕಾಯಕದತ್ತ ಯುವ ಜನತೆ ಶೀರ್ಷಿಕೆ ಯಡಿ ಯಲ್ಲಿ ಪಾಲ್ಗೊಂಡಿರುವುದರಿಂದ ಬಹಳ ಸಂತೋಷವಾಗಿದೆ. ಹಾಗೂ ಇದರಿಂದ ನಮ್ಮ ಜೀವನ ಮೌಲ್ಯಗಳು ಸಹ ವೃದ್ಧಿಗೊಳ್ಳುವಲ್ಲಿ ಸಹಕಾರಿಯಾಗಿದೆ.
ಅರ್ಚನಾ, ಆರ್ ( ಅಂತಿಮ ಬಿ ಕಾಂ ವಿದ್ಯಾರ್ಥಿನಿ ಹಾಗು ಶಿಬಿರಾರ್ಥಿ )
ಸಂದರ್ಭದಲ್ಲಿ ಶಿಬಿರದ ಸಲಹಗಾರ ಡಾ.ಗೋವಿಂದೇಗೌಡ. ಹೆಚ್ ಜಿ, ಶ್ರೀ ಎಸ್ ಎಸ್ ದೊಡ್ಡಣ್ಣವರ್, ಮಂಜುನಾಥ್, ಶಿಬಿರಾಧಿಕಾರಿ ಗಿರೀಶ್ ವೈ, ಗಿರೀಶ್,ಪಿ ಹೆಚ್, ಶ್ರೀಮತಿ ರಮ್ಯ ಪಿ , ಮಠದ ವ್ಯವಸ್ಥಾಪಕ ಕೃಷ್ಣ ಆಚಾರ್ಯ ಉಪಸ್ಥಿತರಿದ್ಧರು..