ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.26: ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ 2 ಸಾವಿರ ರೂ. ದಂಡ ವಿಧಿಸಿದೆ.
ಪತಿ ರಾಜೇಶ್, ತನ್ನ ಪತ್ನಿ ಶಾರದಾ ಎಂಬುವವರನ್ನ 2013 ರಲ್ಲಿ ಕೊಲೆ ಮಾಡಿದ್ದ. ಇದೀಗ 10 ವರ್ಷದ ಬಳಿಕ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣವನ್ನು ಕುಮಾರಸ್ವಾಮಿ ಲೇಔಟ್ ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ದಾಖಲೆಗಳನ್ನು ಸಲ್ಲಿಸಿದ್ದರು.
ಈ ಹಿಂದೆ ರಾಜೇಶ್ ಹಾಗೂ ಶಾರದಾಗೆ ಕೋರ್ಟ್ ವಿಚ್ಛೇದನ ನೀಡಿತ್ತು. ಬಳಿಕ ಪತ್ನಿಗೆ ಜೀವನಾಂಶ ನೀಡುವಂತೆ ಕೋರ್ಟ್ ರಾಜೇಶ್ನಿಗೆ ಆದೇಶಿಸಿತ್ತು. ಜೀವನಾಂಶ ನೀಡದ ಕಾರಣ ಕೋರ್ಟ್ ರಾಜೇಶ್ನನ್ನು ಜೈಲಿ ಪಾಲು ಮಾಡಲಾಗಿತ್ತು, ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ಪತ್ನಿ ಶಾರದಾಳನ್ನು ಚಾಕುವಿನಿಂದ 52 ಬಾರಿ ಇರಿದು ಕೊಲೆ ಮಾಡಿದ್ದ ಹಿನ್ನೆಲೆ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.