ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಅ.09:
ತಾಲೂಕಿನ ತಹಸೀಲ್ದಾಾರ್ ಕಚೇರಿಯಲ್ಲಿ ಭೂಹಿಡುವಳಿ ಪ್ರಮಾಣ ಪತ್ರಗಳನ್ನು ನಕಲಿ ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ರೈತರಿಗೆ ಖಾಸಗಿ ಬ್ಯಾಾಂಕುಗಳಲ್ಲಿ ಸಾಲ ಮಾಡಲು ತಹಸೀಲ್ದಾಾರ್ ಅವರ ಸಹಿ ಹಾಗೂ ಅಧಿಕೃತ ಮೊಹರು ನಕಲಿ ಮಾಡಿ ಪೋರ್ಜರಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಐಸಿಐಸಿಐ ಬ್ಯಾಾಂಕ್ ಮತ್ತು ಆಕ್ಸಿಿಸ್ ಬ್ಯಾಾಂಕ್, ಮದಗಲ್, ನಾಗರಾಳ, ಹಟ್ಟಿಿ ಸೇರಿ ಹಲವು ಖಾಸಗಿ ಬ್ಯಾಾಂಕುಗಳು ಈ ನಕಲಿ ದಾಖಲೆ ಆಧಾರದಲ್ಲಿ ರೈತರಿಗೆ ಸಾಲ ವಿತರಿಸಿವೆ. ದಾಖಲೆಗಳು ನಕಲಿ ಎಂಬುದು ಬಹಿರಂಗವಾಗುತ್ತಿಿದ್ದಂತೆ, ಸಂಬಂಧಿತ ರೈತರೂ ಸಂಕಷ್ಟಕ್ಕೆೆ ಸಿಲುಕಿದ್ದಾಾರೆ. ಒಂದು ಮೂಲದ ಪ್ರಕಾರ ತಹಶಿಲ್ದಾಾರ ಪೋರ್ಜರಿ ಸಹಿ ಪ್ರಮಾಣ ಪತ್ರಗಳನ್ನು ಝರಾಕ್ಸ ಡಬ್ಬಾಾ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿಿದೆ ಈ ವ್ಯವಹಾರದಲ್ಲಿ ಬ್ಯಾಾಂಕನವರು, ಲಾನುಭವಿಗಳು ಶಾಮೀಲಾಗಿರುವರು ಎಂದು ಹೇಳಲಾಗುತ್ತಿಿದೆ.
ಇದೇ ವೇಳೆ, ಕೈಬರಹದಲ್ಲಿ ನೀಡುತ್ತಿಿದ್ದ ಭೂ ಹಿಡುವಳಿ ಪ್ರಮಾಣ ಪತ್ರಗಳನ್ನು ಕಳೆದ ಎರಡು ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ನೂರಾರು ರೈತರು ಸರ್ಕಾರಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದೆ, ಬ್ಯಾಾಂಕುಗಳಲ್ಲಿ ಸಾಲ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿಿದ್ದಾಾರೆ. ಗ್ರಾಾಮೀಣ ರೈತರು ಮತ್ತು ಸಾರ್ವಜನಿಕರು ಈ ಕುರಿತು ಆಕ್ರೋೋಶ ವ್ಯಕ್ತಪಡಿಸಿ, ನಕಲಿ ದಾಖಲೆ ಸಿದ್ಧಪಡಿಸಿ ಬ್ಯಾಾಂಕುಗಳಲ್ಲಿ ಸಾಲ ವಿತರಣೆ ಮಾಡಿರುವುದು ಕಾನೂನು ಬಾಹಿರ. ಇದರ ಹಿಂದೆ ಯಾರು ಇದ್ದರೂ ಅವರನ್ನು ಪತ್ತೆೆಹಚ್ಚಿಿ ಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾಾರೆ.
ಭೂಹಿಡುವಳಿ ಪ್ರಮಾಣಪತ್ರ ಕೊಡುವದು ಕಛೇರಿಯ ಗ್ರೇೇಡ್ ತಹಸೀಲ್ದಾಾರವರಿಗೆ ಅಧಿಕಾರವಿರುತ್ತದೆ ಕಂದಾಯ ನಿರೀಕ್ಷಕರು, ಗ್ರಾಾಮ ಲೆಕ್ಕಿಿಗರು ದೃಢಪಡಿಸಬೇಕಾಗುತ್ತದೆ ಈಗ ಕೈಬರಹ ರದ್ದಾಾಗಿ ಎರಡು ವರ್ಷವಾಗಿದೆ. ಆನ್ಲೈನ್ ಮುಖಾಂತರ ನಡೆಯುತ್ತದೆ ಇದಕೆ ಪ್ರಮಾಣ ಪತ್ರಕ್ಕೆೆ ಆರ್.ಡಿ ನಂಬರ ಬರುತ್ತದೆ ಪೋರ್ಜರಿ ನಮ್ಮ ಗಮನಕ್ಕೆೆ ಬಂದಿದ್ದು ಸಂಬಂಧಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.
– ಸತ್ಯಮ್ಮ ತಹಸೀಲ್ದಾಾರ ಲಿಂಗಸುಗೂರ