ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.28:
ಪಟ್ಟಣದ ಬಸವ ಸಾಗರ ವೃತ್ತದಲ್ಲಿ ಇತ್ತೀಚೆಗೆ ನಿಧನರಾದ ಜಂಬಣ್ಣ ಕರಡಕಲ್ ಶ್ರದ್ಧಾಾಂಜಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರ ಅಗಲಿಕೆಯಿಂದ ಹಡಪದ ಸಮಾಜಕ್ಕೆೆ ತುಂಬಲಾರದ ನಷ್ಟವಾಗಿದೆ ಎಂದು ತಾಲುಕು ಹಡಪದ ಸಮಾಜದ ಅಧ್ಯಕ್ಷ ಜಗನ್ನಾಾಥ ಚಿತ್ತಾಾಪುರ ಹೇಳಿದರು.
ಪಟ್ಟಣದ ಬಸವ ಸಾಗರ ವೃತ್ತದಲ್ಲಿ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸಿ ಅವರು ಜಂಬಣ್ಣ ಕರಡಕಲ್ ರವರು ತಮ್ಮ ಶಿಕ್ಷಣ ಇಲಾಖೆಯ ನಿವೃತ್ತಿಿ ನಂತರ ಸಮಾಜದ ಅಧ್ಯಕ್ಷರಾಗಿ ಸಂಘಟನೆ ಹಾಗೂ ಏಳಿಗೆಗಾಗಿ ಹಗಲಿರುಳು ಶ್ರಮಿಸಿ,ಸಮುದಾಯದ ಜನರಿಗಾಗಿ ಕಡಿಮೆ ಮೊತ್ತದಲ್ಲಿ 5ಎಕರೆ ಭೂಮಿ ಖರೀದಿಸಿ ನಿವೇಶನ ನೀಡುವ ಜತೆಗೆ ಹಡಪದ ಅಪ್ಪಣ್ಣನವರ ಸಮುದಾಯ ಭವನ ನಿರ್ಮಿಸಿ ಸಂಘಟನೆಗೆ ಭದ್ರ ಬುನಾದಿ ಹಾಕಿ, ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆೆ ವಿಶೇಷ ಕೊಡುಗೆ ನೀಡಿದ್ದರೆಂದು ಸ್ಮರಿಸಿದರು.
ಹಡಪದ ಸಮಾಜದ ಜಿಲ್ಲಾಾ ಅಧ್ಯಕ್ಷ ಗದ್ದೆೆಪ್ಪ ಜಕ್ಕೆೆರಮಡು,ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಉಪಾಧ್ಯಕ್ಷ ಮುತ್ತಣ್ಣ ಗುಡಿಹಾಳ, ಗೌರವಾಧ್ಯಕ್ಷ ವೈದ್ಯ, ಕುಮಾರಸ್ವಾಾಮಿ, ಖಜಾಂಚಿ ಅಮರೇಶ ಗುರುಗುಂಟಾ, ಗುಂಡಪ್ಪ ಮುದಗಲ್, ಆದೇಶ ಗುರುಗುಂಟಾ, ಬಸವರಾಜ ಯಲಗಟ್ಟಾಾ, ಅಮರೇಶ ಮಟ್ಟೂರು,ಆದಪ್ಪ ಮೇದನಾಪುರ, ಮಲ್ಲಿಕಾರ್ಜುನ ಕಾರಟಗಿ, ಆದೇಶ ಕಸಬಾಲಿಂಗಸುಗೂರು, ಚಂದ್ರು ಸೇರಿ ಇತರರಿದ್ದರು.
ಲಿಂಗಸುಗೂರು : ಜಂಬಣ್ಣ ಕರಡಕಲ್ ಸ್ಮರಣೆ

