ಸುದ್ದಿಮೂಲ ವಾರ್ತೆ ಬೆಂಗಳೂರು, ಅ.05:
ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮತ್ತೊೊಮ್ಮೆೆ ಮುನ್ನೆೆಲೆಗೆ ಬಂದಿದ್ದು, ಬೇಡಿಕೆ ಈಡೇರುವವರಿಗೂ ಹೋರಾಟ ಮುಂದುವರೆಯಬೇಕೆಂಬ ಒಕ್ಕೊೊರಲ ಸಲಹೆ ಕೇಳಿ ಬಂದಿತು.
‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ‘ಧರ್ಮ’ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದೂ ಸೇರಿ ಪಂಚ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ನಿವೃತ್ತ ನ್ಯಾಾ. ನಾಗಮೋಹನ ದಾಸ್ ಸಭೆಯಲ್ಲಿ ಮಾತನಾಡಿ, ಈ ಹಿಂದೆ ತಮ್ಮ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಮಿತಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆೆ ಶಿಾರಸು ಮಾಡಿತ್ತು. ಅದನ್ನು ಆಧರಿಸಿ, ರಾಜ್ಯ ಸರ್ಕಾರ ಕೇಂದ್ರಕ್ಕೆೆ ಶಿಾರಸು ಮಾಡಿತ್ತು. ಕೇಂದ್ರ ಸರ್ಕಾರ ಯಾವುದೇ ಸಕಾರಣ ನೀಡದೆ ಪ್ರಸ್ತಾಾವನೆಯನ್ನು ವಾಪಸ್ ಕಳುಹಿಸಿದೆ. ರಾಜ್ಯ ಸರ್ಕಾರ ಮತ್ತೊೊಮ್ಮೆೆ ವಿವರಣೆ ಹಾಗೂ ಸ್ಪಷ್ಟನೆಗಳೊಂದಿಗೆ ಕೇಂದ್ರಕ್ಕೆೆ ಶಿಾರಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ಲಿಂಗಾಯತ ಧರ್ಮಕ್ಕೆೆ ಧಾರ್ಮಿಕ ಅಲ್ಪ ಸಂಖ್ಯಾಾತ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ಮುಂದುವರೆಯಬೇಕು. ಈ ಹೋರಾಟದಲ್ಲಿ ಮಿತ್ರರು ಯಾರು, ಶತ್ರುಗಳು ಯಾರು ಎಂದು ಗುರುತಿಸಲು ಸಾಧ್ಯವಾಗಬೇಕು. ಶತ್ರುಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋರಾಟ ನಡೆಸಿದರೆ ಅದು ಯಶಸ್ವಿಿಯಾಗುವುದಿಲ್ಲ. ಶತ್ರುಗಳನ್ನು ಹೊರಗಿಟ್ಟು ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, ಸಮಾನ ಮನಸ್ಕರ ಜೊತೆಗೂಡಿ ಸೈದ್ಧಾಾಂತಿಕವಾಗಿ ಹೋರಾಟ ನಡೆಸಿದರೆ, ಖಂಡಿತ ಯಶಸ್ಸು ಸಿಗುತ್ತದೆ ಎಂದು ನಾಗಮೋಹನ್ದಾಸ್ ಅಭಿಪ್ರಾಾಯಪಟ್ಟರು.
ಇದಕ್ಕೂ ಮುನ್ನ ಪ್ರಾಾಸ್ತಾಾವಿಕವಾಗಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್, ಲಿಂಗಾಯತ ಧರ್ಮದ ಅಲ್ಪಸಂಖ್ಯಾಾತ ಸ್ಥಾಾನಮಾನ ಹೋರಾಟ ಸರಿಸಿಕೊಂಡರು. ಸಿದ್ದರಾಮಯ್ಯ ಸರ್ಕಾರ ಹಿಂದೆ ಈ ಪ್ರಸ್ತಾಾವನೆಯನ್ನು ಕೇಂದ್ರ ಸರ್ಕಾರಕ್ಕೆೆ ಕಳುಹಿಸಿತ್ತು ಎಂದು ಹೇಳಿದರು.
ಸ್ವಾಾಮೀಜಿಗಳಿಂದ ಧರ್ಮದ ಮಾನ್ಯತೆಗೆ ಒತ್ತಾಾಯ:
ಭಾಲ್ಕಿಿ ಮಠದ ಬಸವಲಿಂಗ ಪಟ್ಟದೇವರು ಸ್ವಾಾಮೀಜಿ, ಮಾತನಾಡಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆೆ ಅನುಭವ ಮಂಟಪದಲ್ಲಿ ಮುದ್ರೆೆ ಬಿದ್ದಿತ್ತು. ಅದಾದ ನಂತರ ಸರ್ಕಾರದಲ್ಲಿ ಬಸವ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆೆ ಒತ್ತಿಿದವರು ಸಿದ್ದರಾಮಯ್ಯ. ಬಸವಣ್ಣನ ಚರಿತ್ರೆೆ ಎಲ್ಲಿವರೆಗೆ ಇರುತ್ತೋೋ ಅಲ್ಲಿವರೆಗೂ ಸಿದ್ದರಾಮಯ್ಯ ಹೆಸರು ಅಜರಾಮರ. ನಾಗಮೋಹನ್ದಾಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವಚನ ಸ್ವತಂತ್ರ ಧರ್ಮದ ಮುದ್ರೆೆ ಒತ್ತಿಿ ಕೇಂದ್ರಕ್ಕೆೆ ಕಳುಹಿಸಿದ್ದಾರೆ. ಅದು ಇಂದಲ್ಲಾ ನಾಳೆ ಅಂಗೀಕಾರ ಆಗೇ ಆಗುತ್ತದೆ ಎಂದು ವಿಶ್ವಾಾಸ ವ್ಯಕ್ತಪಡಿಸಿದರು.
ನಿಜಲಿಂಗಪ್ಪನವರ ರೀತಿ ಸಿದ್ದರಾಮಯ್ಯ ಕಳಂಕರಹಿತ ರಾಜಕಾರಣಿ. ಅನುಭವ ಮಂಟಪ ಸ್ಥಾಾವರ, ಅಲ್ಲಿ ಜಂಗಮತ್ವ ಬೆಳೆಯಬೇಕು ಅಂದರೆ ವಚನ ವಿವಿ ಆರಂಭಿಸಬೇಕು. ಜನಪದ, ಸಂಸ್ಕೃತ, ಸಂಗೀತ ವಿವಿಗಳ ಮಾದರಿಯಲ್ಲಿ ವಚನ ವಿವಿ ಸ್ಥಾಾಪಿಸಿ ಅಲ್ಲಿ ಸಂಶೋಧನೆ, ಚಿಂತನೆ ನಡೆಯಬೇಕು. ವಚನ ವಿವಿ ಸ್ಥಾಾಪಿಸಿದರೆ ಇನ್ನೊೊಂದು ಇತಿಹಾಸ ಸೃಷ್ಟಿಿಯಾಗುತ್ತದೆ. ಶರಣರನ್ನು ಪುರೋಹಿತ ಶಾಹಿಗಳು ಕೊಲೆ ಮಾಡಿದ್ದಾರೆ. ಅವರ ತ್ಯಾಾಗ ಬಲಿದಾನಕ್ಕೆೆ ಬೆಲೆ ತರಬೇಕಾದರೆ ವಚನ ವಿವಿ ಸ್ಥಾಾಪಿಸಬೇಕು ಎಂದು ಆಗ್ರಹಿಸಿದರು.
ನಿಜಗುಣಾನಂದ ಸ್ವಾಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆೆ ಜಯವಾಗಬೇಕು. ಬಸವ ಸಂಸ್ಕೃತಿ ಅಭಿಯಾನಕ್ಕೆೆ ಮುಳ್ಳಾಾಗಿದ್ದವರು ನಮ್ಮ ಸಮಾಜದಲ್ಲಿಯೇ ಹುಟ್ಟಿಿದ ಮಠಾಧಿಪತಿಗಳು. ಬಸವಣ್ಣನವರನ್ನು ನಂಬಿದವರು ಕೆಟ್ಟಿಿಲ್ಲ. ಕೆಟ್ಟವರು ಬಸವಣ್ಣನ ನಂಬಿಲ್ಲ. ಯಂತ್ರ ತಂತ್ರ ಮಂತ್ರ ಮೂಢನಂಬಿಕೆ ಬೆಳೆಸುವ ಮಠಾಧಿಪತಿಗಳಿಗಾಗಿ ಬಸವಣ್ಣ ಹುಟ್ಟಿಿದ್ದಲ್ಲ. 21ನೇ ಶತಮಾನದಲ್ಲಿಯೇ ಬಸವ ತತ್ವಕ್ಕೆೆ ಇಷ್ಟು ತೊಂದರೆ ಇರುವಾಗ ಅವತ್ತು ಬಸವಣ್ಣನಿಗೆ ಎಷ್ಟು ತೊಂದರೆ ಆಗಿರಬಹುದು. ಬಹಳ ಜನರಿಗೆ ಬಸವಣ್ಣ ಅಂದರೆ ಅಲರ್ಜಿ. ಬಸವಣ್ಣನವರನ್ನು ಕೆಲವರು ಕರಿಬೇವು ಸೊಪ್ಪುು ಮಾಡಿಕೊಂಡಿದ್ದಾರೆ. ಮಠಾಧಿಪತಿಗಳು ಬಸವಣ್ಣನ ಒಪ್ಪದಿದ್ದರೆ ಭಕ್ತರೇ ಮಠಾಧಿಪತಿಗಳ ದೂರ ಇಡುತ್ತಾಾರೆ. ಭಾರತೀಯ ಸಂಸ್ಕೃತಿಯ ಒಳಗೆ ಬಸವ ಸಂಸ್ಕೃತಿ ಭಿನ್ನವಾಗಿದೆ. ಮಠಾಧಿಪತಿಗಳ ಒಕ್ಕೂಟವನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮ ಧರ್ಮಗುರು ಬಸವಣ್ಣ, ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ, ಕಲ್ಯಾಾಣ ರಾಜ್ಯವೇ ನಮ್ಮ ಗುರಿ ಎಂದರು.
ಜಯಮೃತ್ಯುಂಜಯ ಸ್ವಾಾಮೀಜಿ, ಕಲಬುರಗಿ ವಿವಿಗೆ ಬಸವಣ್ಣನ ಹೆಸರು, ಕಲಬುರಗಿ ಕೇಂದ್ರೀೀಯ ವಿವಿಗೆ ಅಂಬೇಡ್ಕರ್ ಹೆಸರು ಇಡಬೇಕು. ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರಲ್ಲಿ ಏರ್ಪೋರ್ಟ್, ಸಂಗೊಳ್ಳಿಿ ರಾಯಣ್ಣ ಹೆಸರಲ್ಲಿ ರೈಲು ನಿಲ್ದಾಾಣ ಇದೆ. ಬಸವಣ್ಣನ ಹೆಸರನ್ನು ನಮ್ಮ ಮೆಟ್ರೋೋಗೆ ಇಡಬೇಕು. ಬೆಂಗಳೂರಿನಲ್ಲಿ ಬಸವಣ್ಣ ಹೆಸರು ಸ್ಮರಿಸಲು ಇದು ಅಗತ್ಯ ಎಂದು ಮನವಿ ಮಾಡಿದರು.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಕೈಗೊಂಡ ಪಂಚ ನಿರ್ಣಯಗಳು:
* ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.
* ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.
* ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಿಕೊಂಡು, ಅವರ ಅಭ್ಯುದಯಕ್ಕಾಾಗಿ ಶ್ರಮಿಸುತ್ತಾಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆೆ ವೈವಾಹಿಕ ಸಂಬಂಧ ಬೆಳೆಸಬೇಕು.
* ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.
* ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.
ಲಿಂಗಾಯತ ಧರ್ಮ ಕನ್ನಡದ ಧರ್ಮ ಎಂದು ಘೋಷಿಸಲು, ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿ ಪಂಚ ನಿರ್ಣಯ ಅಂಗೀಕಾರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಂದುವರಿಕೆಗೆ ಒಕ್ಕೊೊರಲ ನಿರ್ಧಾರ

