ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 19: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ವಾರ ಕಳೆದಿದೆ. ಐದಾರು ದಿನಗಳ ಸಮರದ ಬಳಿಕ ನಿನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ನೇಮಕ ಮಾಡಲಾಗಿದೆ. ಈ ಮಧ್ಯೆ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಕಸರತ್ತು ಶುಕ್ರವಾರ ಆರಂಭವಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ತಮ್ಮ ತಮ್ಮ ಬೆಂಬಲಿಗರನ್ನು ಮಂತ್ರಿ ಮಾಡಬೇಕು ಎಂಬ ಪಟ್ಟಿಯಿಂದೊಗೆ ನವದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಜೊತೆ ಚರ್ಚೆಯಲ್ಲಿ ತೊಡಗಿದ್ದಾರೆ. ಇಂದು ತಡರಾತ್ರಿ ವೇಳೆಗೆ ಸುಮಾರು 20 ಸಚಿವರ ಪಟ್ಟಿ ಮೊದಲ ಹಂತದಲ್ಲಿ ಅಂತಿಮಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜೊತೆ ಇನ್ನೂ 20 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈ ಮಧ್ಯೆ ಸಚಿವಾಕಾಂಕ್ಷಿಗಳು ಸಹ ನವದೆಹಲಿಗೆ ತೆರಳಿ ತಮಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ತಮ್ಮ ತಮ್ಮ ನಾಯಕರ ಮೇಲೆ ಒತ್ತಡ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಸಚಿವರಾಗುವ ಸಾಧ್ಯತೆ ಇರುವ ಶಾಸಕರ ಪಟ್ಟಿ:
ದಿನೇಶ್ ಗುಂಡೂರಾವ್
ಜಮೀರ್ ಅಹ್ಮದ್ ಖಾನ್
ಕೃಷ್ಣ ಭೈರೇಗೌಡ
ಕೆ.ಜೆ.ಜಾರ್ಜ್
ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮಣ ಸವದಿ
ಎಂ.ಬಿ.ಪಾಟೀಲ್
ಪ್ರಿಯಾಂಕ್ ಖರ್ಗೆ
ಈಶ್ವರ್ ಖಂಡ್ರೆ
ಸತೀಶ್ ಜಾರಕಿಹೊಳಿ
ಆರ್.ವಿ.ದೇಶಪಾಂಡೆ
ಬಿ.ಕೆ.ಹರಿಪ್ರಸಾದ್
ಕೆ.ಎಚ್.ಮುನಿಯಪ್ಪ
ಎಚ್.ಸಿ.ಮಹದೇವಪ್ಪ
ಡಾ.ಪರಮೇಶ್ವರ್
ಎಸ್.ಎಸ್.ಮಲ್ಲಿಕಾರ್ಜುನ್
ಶಿವಲಿಂಗೇಗೌಡ
ಚೆಲುವರಾಯಸ್ವಾಮಿ
ಯುಟಿ ಖಾದರ್
ಎಚ್. ಕೆ. ಪಾಟೀಲ್
ಅಜಯ್ ಸಿಂಗ್
ಬಿ. ನಾಗೇಂದ್ರ