ತುಮಕೂರು,ಅ.26: ನಿವೃತ್ತ ಸರ್ಕಾರಿ ನೌಕರರ ಸಾಹಿತ್ಯ ಜಿಲ್ಲಾಮಟ್ಟದ ಸಮಾವೇಶ ಅ.31ರಂದು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷೆ ಬಾ.ಹ. ರಮಾಕುಮಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ರಾಜ್ಯದಲ್ಲಿಯೇ ಪ್ರಪ್ರಥಮ. ವಿವಿಧ ಇಲಾಖೆ, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವ ಅನೇಕ ನೌಕರರು ತಮ್ಮಲ್ಲಿರುವ ವೈವಿಧ್ಯ ರೀತಿಯ
ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ಸಿಗದೇ ಮೂಲೆಗುಂಪಾಗಿ ಬಿಡುವುದು ಹೆಚ್ಚು ಸದಾ ಚಟುವಟಿಕೆಯಿಂದ ಕ್ರಿಯಾಶೀಲವಾಗಿದ್ದರೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಶಾಖೆಯಿಂದ ಇಂತಹುದೊಂದು ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
ಅ.31 ರಂದು ಬೆಳಗ್ಗೆ 10.30 ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎಲ್. ಭೈರಪ್ಪ, ತುಮಕೂರು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ಧಲಿಂಗಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಸಂಘದ ಬಾ.ಹ. ರಮಾಕುಮಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ನಿವೃತ್ತ ಸರ್ಕಾರಿ ನೌಕರ ಸಾಹಿತಿಗಳು” ಎಂಬ ವಿಷಯ ಕುರಿತು ಬಾ.ಹ. ರಮಾಕುಮಾರಿ ಅವರು ಉಪನ್ಯಾಸ ನೀಡಲಿದ್ದಾರೆ. ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಒಬ್ಬೊಬ್ಬರು ನಿವೃತ್ತ ನೌಕರ ಸಾಹಿತಿಗಳನ್ನು ಸನ್ಮಾನಿಸಲಾಗುವುದು. ನಿವೃತ್ತ ಪ್ರಾಂಶುಪಾಲರೂ ಸಾಹಿತಿಯೂ ಆದ ಎನ್. ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಸುಮಾರು 35 ಜನ ಕವನವಾಚನ ಮಾಡಲಿರುವರು,ಖ್ಯಾತ ಲೇಖಕಿ ಹಾಗೂ ಚಿಂತಕಿಯಾದ ಡಾ. ಬಿ.ಸಿ. ಶೈಲಾನಾಗರಾಜ್ ಆಶಯ ನುಡಿಗಳನ್ನಾಡುವರು.
ನಿವೃತ್ತ ಡಿಡಿಪಿಐ ಪಿ. ಹುಚ್ಚಯ್ಯ, ಹೇಮಾವತಿ ನೀರಾವರಿಇಲಾಖೆಯ ನಿವೃತ್ತ ಕ್ಯಾಶಿಯರ್ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟು ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕರಾದ ಗುರುಮಲ್ಲಪ್ಪ ಮತ್ತು ಮಲ್ಲಿಕಾರ್ಜುನ