ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.22:
ಸಮೀಪದ ಚಿಕ್ಕ ಕಡಬೂರು ಗ್ರಾಾಮದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆ ಯಲ್ಲಿ ಎಲ್ ಕೆ ಜಿ ತರಗತಿ ಪ್ರಾಾರಂಭೋತ್ಸವ ಜರುಗಿತು. ಎಲ್ ಕೆ ಜಿ ತರಗತಿಯ ಮಕ್ಕಳಿಗೆ ಪುಷ್ಪ ಕೊಡುವುದರ ಮೂಲಕ ಉದ್ಬಾಾಳ ಯು ಗ್ರಾಾ.ಪಂ ಮಾಜಿ ಅಧ್ಯಕ್ಷೆೆ ಕರಿಯಮ್ಮ ಮಕ್ಕಳನ್ನು ಸ್ವಾಾಗತಿಸಿದರು.
ನಿಮಿತ್ತ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಮುಖ್ಯ ಗುರು ಹುಸೇನಸಾಬ ಗುರಿಕಾರ ಕಾರ್ಯಕ್ರಮ ಕುರಿತಾಗಿ ಮಾತನಾಡಿ ತಂತ್ರಜ್ಞಾನ ಯುಗದಲ್ಲಿ ಆಂಗ್ಲ ಭಾಷೆಗೆ ಹೆಚ್ಚಿಿನ ಆದ್ಯತೆ ಇದೆ ಎಂದು ಕನ್ನಡವನ್ನು ಎಂದಿಗೂ ಮರೆಯಬಾರದು ಎಂದರು. ಕಾರ್ಯಕ್ರಮ ಕುರಿತು ಶಿಕ್ಷಕಿಯರಾದ ಲೈಲಾ, ರೇಖಾ, ಬಸ್ಸಮ್ಮ, ಮಹಾಂತಮ್ಮ ಮಾತನಾಡಿದರು.
ಎಸ್ಡಿಎಂಸಿ ಸದಸ್ಯ ಬಸವರಾಜ ಗುಂಜಳ್ಳಿಿ, ಪಾಲಕ ಪ್ರತಿನಿಧಿಗಳು, ಗ್ರಾಾಮಸ್ಥರು, ಅಡುಗೆ ಸಿಬ್ಬಂದಿಯವರು ಪಾಲ್ಗೊೊಂಡಿದ್ದರು.
ಚಿಕ್ಕ ಕಡಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ತರಗತಿ ಪ್ರಾರಂಭೋತ್ಸವ

