ಸುದ್ದಿಮೂಲ ವಾರ್ತೆ ಮಂಡ್ಯ, ನ.18:
ಜಿಲ್ಲೆಯ ಮಳವಳ್ಳಿಿ ತಾಲೂಕಿನ ಶಿವನಸಮುದ್ರದ ಬಳಿ ಖಾಸಗಿ ವಿದ್ಯುತ್ ಉತ್ಪಾಾದನಾ ಕೇಂದ್ರದ 70 ಅಡಿ ಆಳದ ಕಾವೇರಿ ನದಿಯ ನಾಲೆಯಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಸತತ ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.
ಕಳೆದ ಶನಿವಾರ (ನ.15) ಈ ಆನೆ ನೀರು ಕುಡಿಯಲು ಕಾವೇರಿ ನದಿಗೆ ಇಳಿದಾಗ ನೀರಿನ ರಭಸಕ್ಕೆೆ ನಾಲೆ ಒಳಗೆ ಸಿಲುಕಿಕೊಂಡಿತ್ತು. ಆನೆ ಬಂದ ದಾರಿಯಲ್ಲೆ ವಾಪಸ್ ಆಗಬಹುದು ಅಂತ ಒಂದು ದಿನ ಕಾಯ್ದ ವಿದ್ಯುತ್ ಉತ್ಪಾಾದನಾ ಕೇಂದ್ರದ ಸಿಬ್ಬಂದಿ ಆನೆ ವಾಪಸ್ ತೆರಳದಿದ್ದಾಗ, ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಅಂದೂ ಆನೆ ವಾಪಸ್ ಬರದ ಕಾರಣ ಅರಣ್ಯಾಾಧಿಕಾರಿ ಸಿಬ್ಬಂದಿ ಸೋಮವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಮಟ್ಟದ ಕ್ರೇೇನ್ ಬಳಸಿ ಆನೆ ಮೇಲೆತ್ತಲು ಪ್ರಯತ್ನಿಿಸಿದ್ದರು. ಆದರೆ, ವಿಲವಾಗಿತ್ತು. ಕತ್ತಲಾದ ಹಿನ್ನೆೆಲೆ ಮಂಗಳವಾರ ಬೆಳಗ್ಗೆೆ ಮತ್ತೆೆ ಕಾರ್ಯಾಚರಣೆ ಆರಂಭಿಸಿದರು.
ಬೆಂಗಳೂರಿನಿಂದ ಹೈಡ್ರಾಾಲಿಕ್ ಕ್ರೇೇನ್ ತರಿಸಿ, ಕಂಟೇನರ್ ಸಹಾಯದ ಮೂಲಕ ಅನೆ ಮೇಲೆತ್ತಲು ಪ್ಲಾಾನ್ ರೂಪಿಸಿದರು. ಅದರಂತೆ ಪಶು ವೈದ್ಯ ರಮೇಶ್ ಹಾಗೂ ವೈದ್ಯ ಆದರ್ಶ್ ಜಂಟಿ ಕಾರ್ಯಾಚರಣೆಯಲ್ಲಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಎರಡನೇ ಚುಚ್ಚು ಮದ್ದಿಗೆ ಕೆಳಕ್ಕುರುಳಿದ ಆನೆಯನ್ನು ಕಂಟೇರ್ನಲ್ಲಿ ಇರಿಸಿ ಮೇಲೆತ್ತಲಾಯ್ತು.
ನಾಲ್ಕು ದಿನಗಳ ಕಾಲ ನೀರಿನಲ್ಲಿದ್ದ ಆನೆಗೆ ಸೊಂಡಿಲು ಹಾಗೂ ಕಾಲುಗಳಲ್ಲಿ ಸೋಂಕು ತಗುಲಿದ್ದ ಕಾರಣ ಅರಿಶಿನ ಹಾಗೂ ನೀಲಗಿರಿ ತೈಲದ ಲೇಪನ ಮಾಡಿ ಪ್ರಥಮ ಚಿಕಿತ್ಸೆೆ ನೀಡಲಾಯಿತು. ನಂತರ, ಆನೆಗೆ ಸಹಜ ಸ್ಥಿಿತಿಗೆ ಬರುವಂತೆ ಚುಚ್ಚುಮದ್ದು ನೀಡಿ ನಂತರ, ಧನಗೂರು ಅರಣ್ಯ ಪ್ರದೇಶಕ್ಕೆೆ ಬಿಡಲಾಯಿತು.
ಅರಣ್ಯ ಇಲಾಖೆ ನಡೆಸಿದ ಈ ಕಾರ್ಯಾಚರಣೆಗೆ ಸ್ಥಳೀಯರು ಹಾಗೂ ಪರಿಸರ ಪ್ರೇೇಮಿಗಳು ಶ್ಲಾಾಘನೆ ವ್ಯಕ್ತಪಡಿಸಿದ್ದಾರೆ.
’ಆನೆ ನಿರಂತರ ನೀರಲ್ಲಿದ್ದ ಹಿನ್ನೆೆಲೆ ಸೊಂಡಿಲು, ಕಾಲುಗಳು ಬಿಳಿ ಬಣ್ಣಕ್ಕೆೆ ತಿರುಗಿತ್ತು.ಬಿಸಿಲಿನಲ್ಲಿ ಆನೆ ಓಡಾಡುತ್ತಿಿದ್ದಂತೆ ಮತ್ತೆೆ ಯಥಾಸ್ಥಿಿತಿಗೆ ಬರಲಿದೆ. ಅದನ್ನು ಹೊರತುಪಡಿಸಿ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಾಸವಾಗಿಲ್ಲ. ಕೆಲದಿನಗಳ ಕಾಲ ಆನೆಯನ್ನು ಡ್ರೋೋನ್ ಮೂಲಕ ಮಾನಿರ್ಟ ಮಾಡಲಾಗುತ್ತದೆ,’ ಎಂದು ಜಿಲ್ಲಾ ಅರಣ್ಯಸಂರಕ್ಷಣಾಧಿಕಾರಿ ಡಾ.ರಘು ಹೇಳಿದ್ದಾರೆ.
ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ: ಈಶ್ವರ ಖಂಡ್ರೆೆ
ಶಿವನಸಮುದ್ರದ ಕಾಲುವೆಗೆ ಇಳಿದಿದ್ದ ಗಂಡಾನೆಯನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ಪಾಲ್ಗೊೊಂಡ ಎಲ್ಲ ಅಧಿಕಾರಿ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆೆ ತಿಳಿಸಿದ್ದಾರೆ.
ನೀರು ಕುಡಿಯಲು ಕಾಲುವೆಗೆ ಇಳಿದ ಆನೆ ಕಳೆದ ಮೂರು ದಿನಗಳಿಂದ ಮೇಲೆ ಬರಲಾರದೆ, ಆಹಾರವೂ ಸಿಗದೆ ನಿತ್ರಾಾಣವಾಗಿತ್ತು. ಅರಣ್ಯ ಸಿಬ್ಬಂದಿ ಕಠಿಣ ಪರಿಸ್ಥಿಿತಿಯಲ್ಲಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ಮೇಲೆತ್ತಿಿರುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದರು.
12 ವರ್ಷದ ಆನೆಯನ್ನು 50 ಅಡಿ ಆಳದಿಂದ ಮೇಲೆತ್ತಲಾಗಿದೆ. ನೀರಿನ ಹರಿವು ಹೆಚ್ಚಿಿದ್ದ ಕಾರಣ ಕಾರ್ಯಚರಣೆಗೆ ಅಡ್ಡಿಿಯಾಗಿತ್ತು. ರಕ್ಷಿಸಲಾದ ಆನೆ ಯಶಸ್ವಿಿಯಾಗಿ ಹತ್ತಿಿರದ ಅರಣ್ಯದತ್ತ ಹೆಜ್ಜೆೆ ಹಾಕಿದೆ ಎಂದು ತಿಳಿಸಿದ್ದಾರೆ.

