ಸುದ್ದಿಮೂಲ ವಾರ್ತೆ ಬೆಂಗಳೂರು, ನ.11:
ಅಭಿವೃದ್ಧಿಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆೆಲೆ ಲೋಕಾಯುಕ್ತ ಪೊಲೀಸರು 9 ಮಂದಿ ಸರ್ಕಾರಿ ಅಧಿಕಾರಿಗಳ ಕಚೇರಿ, ಮನೆ ಹಾಗೂ ಇತರ ಸ್ಥಳಗಳ ಮೇಲೆ ಮಂಗಳವಾರ ದಾಳಿ ನಡೆಸಿದರು.
2019-2021ರ ವರೆಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ 6 ವಾರ್ಡ್ಗಳಲ್ಲಿ ರಸ್ತೆೆ, ಪಾದಚಾರಿ ಮಾರ್ಗ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿಿ ಕಾಮಗಾರಿಗಳಲ್ಲಿ ಅಂದಾಜು 250 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಂಗಳೂರು ಗ್ರಾಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಲೋಕಾಯುಕ್ತಕ್ಕೆೆ ದೂರು ನೀಡಿದ್ದರು.
ಅಕ್ರಮ ನಡೆದಿದೆ ಎಂಬ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಿದ್ದ ಪಾಲಿಕೆಯ ತಾಂತ್ರಿಿಕ ಭದ್ರತಾ ಕೋಶ ಆಯುಕ್ತಾಾಲಯ ವಿಭಾಗದ ಮುಖ್ಯ ಇಂಜಿನಿಯರ್ ದೊಡ್ಡಯ್ಯ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್, ಶಿಲ್ಪಾಾ, ಭಾರತಿ, ಬಸವರಾಜ್, ಸಿದ್ದರಾಮಯ್ಯ, ಉಮೇಶ್ ಸೇರಿದಂತೆ ಒಟ್ಟು 9 ಅಧಿಕಾರಿಗಳ ಕಚೇರಿ, ಮನೆಗಳಲ್ಲಿ ಶೋಧ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿಿದ್ದಾರೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನೀಡಿದ್ದ ದೂರಿನನ್ವಯ ನವೆಂಬರ್ 6 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನ್ಯಾಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಆರೋಪಿತ ಅಧಿಕಾರಿಗಳ ನಿವಾಸಗಳು, ಗ್ರಾಾಮೀಣಾಭಿವೃದ್ಧಿಿ ನಿಗಮ ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿಿದೆ. ಕೆಲವು ಟೆಂಡರ್ ದಾಖಲೆಗಳು ಲಭ್ಯವಾಗಿದ್ದು, ಪರಿಶೀಲನೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಎಸ್.ಪಿ. ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

