ಸುದ್ದಿಮೂಲ ವಾರ್ತೆ
ನ. 21 : ತಾಲೂಕಿನ ಭೂದಾಖಲೆಗಳಿಗೆ ಸಂಬಂದಿಸಿದಂತೆ ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ದೇವನಹಳ್ಳಿ ಸರ್ವೆ ಇಲಾಖೆಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ 11 ಕಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜಮೀನು ಸರ್ವೆ, ಪೋಡಿ, ದರಕಾಸ್ತು, ಅರ್ಜಿಗಳ ಅಸಮರ್ಪಕ ವಿಲೇವಾರಿ, ಅಧಿಕಾರಿಗಳ ವಿಳಂಬನೀತಿ ಭ್ರಷ್ಟಾಚಾರ, ಸೇರಿ ಹಲವು ವಿಷಯಗಳ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತರಿಗೆ ದೂರು ಬಂದ ಹಿನ್ನೆಲೆ ಲೋಕಯುಕ್ತರು ವಿವಿದೆಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ದೇವನಹಳ್ಳಿ ತಾಲ್ಲೂಕು ಎಡಿಎಲ್ಆರ್ ಸಿದ್ದರಾಮಯ್ಯ ಅಧಿಕಾರಿಗಳನ್ನು ವಿಚಾರಣೆ ಮಾಡಿ ಮಾಹಿತಿ ಪಡೆದರು.
ಎಲ್ಲೆಲ್ಲಿ ದಾಳಿ: ಎಡಿಎಲ್ಆರ್ ದೊಡ್ಡಬಳ್ಳಾಪುರ, ಡಿಡಿಎಲ್ಆರ್ ಬೆಂಗಳೂರು ಗ್ರಾಮಾಂತರ ಡಿಡಿ ಕಚೇರಿ, ಎಡಿಎಲ್ಆರ್ ಆನೇಕಲ್, ಎಡಿಎಲ್ಆರ್ ಕೆ.ಆರ್.ಪುರಂ, ಎಡಿಎಲ್ಆರ್ ಕಂದಾಯಭವನ ಉತ್ತರ, ಎಡಿಎಲ್ಆರ್ ಎಡಿಎಲ್ಆರ್ ಕಂದಾಯ ಭವನ ಡಿ.ಸಿ.ನಗರ, ಎಡಿಎಲ್ಆರ್ ನೆಲಮಂಗಲ, ಎಡಿಎಲ್ಆರ್ ಹೊಸಕೋಟೆ, ಎಡಿಎಲ್ಆರ್ ಕಂದಾಯ ಭವನ ದಕ್ಷಿಣ, ಎಡಿಎಲ್ಆರ್ಯಲಹಂಕ