ಸುದ್ದಿಮೂಲ ವಾರ್ತೆ ರಾಯಚೂರುು, ಡಿ.23:
ಜಿಲ್ಲೆೆಯ ಸಿಂಧನೂರು ತಾಲೂಕಿನ ಗ್ರಾಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ವಿಜಯಲಕ್ಷ್ಮೀ ಅವರ ನಿವಾಸ, ಕಚೇರಿ ಸೇರಿ ಇತರ ಕಡೆ ಮಂಗಳವಾರ ಬೆಳ್ಳಂ ಬೆಳಿಗ್ಗೆೆ ಲೋಕಾಯುಕ್ತ ತಂಡ ದಾಳಿ ನಡೆಸಿ ಮಹತ್ವದ ದಾಖಲೆಗಳ ಕಲೆ ಹಾಕಿದೆ.
ಇಂದು ಬೆಳಿಗ್ಗೆೆ ಕೊಪ್ಪಳದ ಲೋಕಾಯುಕ್ತ ಅಧಿಕಾರಿ ಶೈಲಾ ಪ್ಯಾಾಟೆ ಶೆಟ್ಟರ್ ನೇತೃತ್ವ ಒಂದು ತಂಡ ಹಾಗೂ ಮತ್ತೊೊಬ್ಬ ಹಿರಿಯ ಅಧಿಕಾರಿ ನೇತೃತ್ವದ ತಂಡ ಪ್ರತ್ಯೇಕವಾಗಿ ಎರಡ್ಮೂರು ಕಡೆ ದಾಳಿ ಮಾಡಿದೆ.
ಆದಾಯಕ್ಕಿಿಂತ ಅಧಿಕ ಆಸ್ತಿಿ ಸಂಪಾದನೆ ದೂರುಗಳ ಹಿನ್ನೆೆಲೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಆರ್ಡಬ್ಲ್ಯೂಎಸ್ ವಿಭಾಗದ ಎಇಇ ಆಗಿರುವ ವಿಜಯಲಕ್ಷ್ಮೀ ಅವರ ರಾಯಚೂರಿನಲ್ಲಿರುವ ಐಡಿಎಸ್ಎಮ್ಟಿ ಹಾಗೂ ಗಂಗಾಪರಮೇಶ್ವರಿ ಬಡಾವಣೆಗಳಲ್ಲಿನ ಮನೆಗಳ ಮೇಲೆ, ದೇವದುರ್ಗ ತಾಲೂಕಿನ ಜೋಳದೆಡಗಿಯಲ್ಲಿನ ಅವರ ಸಹೋದರಿಯ ಮನೆ, ಸಿಂಧನೂರಿನ ಕಚೇರಿ ಹಾಗೂ ಯಾದಗಿರಿಯಲ್ಲೂ ದಾಳಿ ಮಾಡಿ ಮಾಹಿತಿ ಕಲೆ ಹಾಕಿತು.
ದಾಳಿ ಮಾಡಿದ ಯಾವುದೆ ಕಡೆ ಎಇಇ ವಿಜಯಲಕ್ಷ್ಮಿಿ ಇರಲಿಲ್ಲಘಿ. ಅವರು ಖಾಸಗಿ ಕೆಲಸದ ನಿಮಿತ್ತ ಹುಬ್ಬಳ್ಳಿಿಯಲ್ಲಿದ್ದರು ಎಂದು ಗೊತ್ತಾಾಗಿದೆ.
ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳಿಗೆ ಮನೆ, ನಿವೇಶನ, ಬ್ಯಾಾಂಕ್ ದಾಖಲೆ, ಚಿನ್ನಾಾಭರಣ, ಯಾದಗಿರಿಯಲ್ಲಿ ಸುಮಾರು ಭೂಮಿ ಖರೀದಿ ಮಾಡಿದ್ದಾಾರಲ್ಲದೆ, ಚಂದ್ರಬಂಡಾ ಸೀಮಾಂತರದಲ್ಲಿ ಆಸ್ತಿಿ ಖರೀದಿಯ ಬಗ್ಗೆೆಯೂ ಮಾಹಿತಿ ಕಲೆ ಹಾಕಿದ್ದಾಾರೆ ಎನ್ನಲಾಗಿದೆ.
ಆದರೆ, ಮನೆಯ ಬೆಡ್ ರೂಮ್ ಲಾಕರ್ ಕೀಲಿ ವಿಜಯಲಕ್ಷ್ಮೀ ಅವರಲ್ಲಿರುವುದರಿಂದ ಹುಬ್ಬಳ್ಳಿಿಯಿಂದ ರಾಯಚೂರಿಗೆ ಸಂಜೆ ವೇಳೆಗೆ ಕರೆಯಿಸಿಕೊಂಡ ಅಧಿಕಾರಿಗಳು ಕೊನೆಗೂ ಲಾಕರ್ ತೆಗೆಯಿಸಿದ್ದಾಾರೆ ಎಂದು ಮಾಹಿತಿ ಲಭ್ಯವಾಯಿತು. ಬೆಡ್ ರೂಂ ಓಪನ್ ಮಾಡಿಸಿ ದಾಖಲೆಗಳು,ಕೋಣೆ ಪರಿಶೀಲನೆ ಮಾಡುತ್ತಿಿದ್ದಾಾರೆ ಎಂದು ಗೊತ್ತಾಗಿದೆ.
ಇನ್ನೂ ಪರಿಶೀಲನೆ ಪ್ರಗತಿಯಲ್ಲಿರುವುದರಿಂದ ಆದಾಯ ಮೀರಿ ಎಷ್ಟು ಆಸ್ತಿಸಂಪಾದಿಸಿದ್ದಾಾರೆ, ಚಿನ್ನಾಭರಣಗಳೆಷ್ಟು ಎಂಬುದರ ನಿಖರ ಮಾಹಿತಿ ಲಭ್ಯವಾಗಿಲ್ಲಘಿ. ರಾಜ್ಯ ಲೋಕಾಯುಕ್ತರು ನಿಖರ ಮಾಹಿತಿ ಮಾಧ್ಯಮಗಳಿಗೆ ಒದಗಿಸಲಿದ್ದಾಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೃಷಿ ಅಧಿಕಾರಿಯ ಲಾಕರ್ನಲ್ಲಿ 29.42 ಲಕ್ಷ ನಗದು ಪತ್ತೆೆ
ಲೋಕಾಯುಕ್ತ ದಾಳಿ: ಸರ್ಕಾರಿ ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಚಿನ್ನ, ನಗದು ಪತ್ತೆೆ
ಧಿ ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.23:
ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಾಚಾರ ಆರೋಪ ಕೇಳಿ ಬಂದ ಹಿನ್ನೆೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಮತ್ತು ರಾಯಚೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಗಳ ಬಂಗಲೆ, ಮನೆ, ಕಚೇರಿ, ಾರ್ಮ್ಹೌಸ್, ಸಂಬಂಧಿಕರ ಮನೆಗಳನ್ನು ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿಿದ್ದಾರೆ.
ದಾಳಿ ವೇಳೆ ದಾಳಿ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಾಭರಣ, ಕೃಷಿ ಜಮೀನು, ನಿವೇಶನ, ಐಷಾರಾಮಿ ವಾಹನಗಳು, ಾರ್ಮ್ ಹೌಸ್, ಆಸ್ತಿಿ ಪತ್ರಗಳು ಪತ್ತೆೆಯಾಗಿವೆ. ಕೆಲವು ಅಧಿಕಾರಿಗಳು ಲಾಕರ್ ಹೊಂದಿದ್ದು ಲೋಕಾಯುಕ್ತ ಅಧಿಕಾರಿಗಳು ಲಾಕರ್ ತೆಗೆದು ಶೋಧ ನಡೆಸುತ್ತಿಿದ್ದಾರೆ.
ಬಸವನಬಾಗೇವಾಡಿ ಕೃಷಿ ಅಧಿಕಾರಿ ಮನೆಯಲ್ಲಿ 2.5 ಕೋಟಿ ರೂ ಅಕ್ರಮ ಆಸ್ತಿಿ ಪತ್ತೆೆ
ಬಸವನಬಾಗೇವಾಡಿ ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಯರಝರಿ ಮನೆ, ಾರ್ಮ್ಹೌಸ್ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ 2.5 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಿ ಪತ್ತೆೆಯಾಗಿದೆ.
ಕಣಕಾಸ ಗ್ರಾಾಮದ ಾರ್ಮ್ಹೌಸ್, ಮುದ್ದೇಬಿಹಾಳದಲ್ಲಿರುವ ಮಾವನ ಮನೆ ಮತ್ತು ವಿಜಯಪುರದ ನವರಸಪುರದಲ್ಲಿರುವ ಮನೆ, ಬ್ಯಾಾಂಕ್ ಲಾಕರ್ನಲ್ಲಿ ಶೋಧ ನಡೆಸಿದಾಗ 29.42 ಲಕ್ಷ ನಗದು ಚಿನ್ನಾಾಭರಣ ಪತ್ತೆೆ ಆಗಿದೆ.
ಜಿ.ಪಂ. ಯೋಜನಾ ನಿರ್ದೇಶಕರ ಮನೆಯಲ್ಲಿ ಅಧಿಕ ಚಿನ್ನ ಪತ್ತೆೆ
ಬಾಗಲಕೋಟೆ ಜಿಲ್ಲೆ ಜಿ.ಪಂ. ಯೋಜನಾ ನಿರ್ದೇಶಕರು ಹಾಗೂ ಅಧಿಕಾರಿ ಆಗಿರುವ ಶ್ಯಾಾಂ ಸುಂದರ್ ಕಾಂಬಳೆ ಅವರ ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ನರಗುಂದದ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅಪಾರ ಪ್ರಮಾಣ ಚಿನ್ನಾಾಭರಣ, ನಗದು, ಹಲವು ಕಡೆ ನಿವೇಶನ ಹೊಂದಿರುವುದು ಪತ್ತೆೆಯಾಗಿದೆ.
ಇದೇ ಜಿಲ್ಲೆಯ ಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ಮನೆಯ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದರು. ಇವರ ಬಳಿ 10 ಎಕರೆಗೂ ಅಧಿಕ ಕೃಷಿ ಭೂಮಿ, ಹಲವು ವಾಹನ, ಾರ್ಮ್ ಹೌಸ್ ಹೊಂದಿರುವುದು ಪತ್ತೆೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಮಾರುತಿ ಯಶವಂತ ಮಾಳವಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು.
10ಕ್ಕೂ ಹೆಚ್ಚು ನಿವೇಶನ ಪತ್ತೆೆ
ಹಳಿಯಾಳ ನಿವಾಸಿಯಾಗಿರುವ ಸಿದ್ದಾಪುರ ಕೋಲ್ ಸಿರ್ಸಿ ಗ್ರೂಪ್ ಗ್ರಾಾಮ ಸೇವಾ ಸಹಕಾರಿ ಸಂಘದ ಸಿಇಒ ಮಾರುತಿ ಯಶ್ವಂತ ಮಾಲ್ಟಿಿ ಅವರ ಮನೆಗಳು ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 10ಕ್ಕೂ ಹೆಚ್ಚು ನಿವೇಶನಗಳು ಇರುವುದು ಪತ್ತೆೆಯಾಗಿದೆ.
ಸಿದ್ದಾಪುರದಲ್ಲಿ ಲೋಕಾಯುಕ್ತ ಸಿಪಿಐ ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಎರಡು ಕಡೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ತೀವ್ರವಾಗಿ ನಡೆಯಿತು.
ಹಳಿಯಾಳದಲ್ಲಿ ಕಾರವಾರ ಲೋಕಾಯುಕ್ತ ಡಿವೈಎಸ್ಪಿಿ ಧನ್ಯಾಾ ನಾಯಕ ಅವರ ನೇತೃತ್ವದ ತಂಡವು ಮಾರುತಿ ಯಶ್ವಂತ ಮಾಲ್ಟಿಿ ಅವರಿಗೆ ಸೇರಿದ ನಿವಾಸ ಹಾಗೂ ಬಟ್ಟೆೆ ಅಂಗಡಿಗಳ ಮೇಲೆ ದಾಳಿ ನಡೆಸಿ ಶೋಧನಾ ಕಾರ್ಯ ನಡೆಸಿತು. ಮನೆಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಕ್ರಮ ಆಸ್ತಿಿ, ನಗದು ಹಣ ಹಾಗೂ ಆಸ್ತಿಿ ಸಂಬಂಧಿತ ಮಹತ್ವದ ದಾಖಲೆಗಳಿಗಾಗಿ ತಪಾಸಣೆ ನಡೆಸಲಾಗಿದೆ.
ದಾಳಿಗೆ ತುತ್ತಾಾದ ಅಧಿಕಾರಿಗಳು ಯಾರು
ದಾಳಿಗೊಳಗಾದ ಅಧಿಕಾರಿಗಳೆಂದರೆ ಬಾಗಲಕೋಟೆಯ ಜಿಲ್ಲಾ ಪಂಚಾಯತ್ನ ಸಹಾಯಕ ಕಾರ್ಯದರ್ಶಿ ಶ್ಯಾಾಮಸುಂದರ್ ಕಾಂಬ್ಳೆೆ. ವಿಜಯಪುರದ ಬಾಗೇವಾಡಿಯ ಸಹಾಯಕ ಕೃಷಿ ನಿರ್ದೇಶಕ ಮಾಳಪ್ಪ. ಕಾರವಾರದ ಸಿದ್ದಾಪುರ ಕೋಲಾ ಶಿರಸಿ ಸಮೂಹ ಗ್ರಾಾಮ ಸೇವಾ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರುತಿ ಯಶವಂತ್ ಮಾಳವಿ ಹಾಗೂ ರಾಯಚೂರಿನ ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಲಕ್ಷ್ಮಿಿ.

