ಸುದ್ದಿಮೂಲವಾರ್ತೆ
ಕೊಪ್ಪಳ ಆ 17: ಇಂದು ಬೆಳ್ಳಂಬೆಳಿಗ್ಗೆ ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ್ ಬನ್ನಿಕೊಪ್ಪ ಮನೆ ಮೇಲೆ ದಾಳಿ ಮಾಡಲಾಗಿದೆ.
ಮಂಜುನಾಥ ವಾಸವಾಗಿರುವ ನಗರದ ಮಂಗಲಾ ಆಸ್ಪತ್ರೆ ಹಿಂಭಾಗದ ಮನೆ, ನಿರ್ಮಿತಿ ಕೇಂದ್ರ,ಮನೆ, ಹುಲಗಿಯಲ್ಲಿನ ಲಾಡ್ಜ್ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಹುಲಿಗಿ ಮೂಲದ ಮಂಜುನಾಥ ಸ್ನೇಹತನೊಂದಿಗೆ ಬೃಹತ್ ಲಾಡ್ಜ್ ನಿರ್ಮಿಸಿದ್ದಾರೆ.
ಮೂರು ಸ್ಥಳಗಳಲ್ಲಿ ಐದು ತಂಡಗಳಿಂದ ದಾಳಿ ಮಾಡಲಾಗುತ್ತಿದೆ. ರಾಯಚೂರು ಲೋಕಾಯುಕ್ತ ಎಸ್ಪಿ ಆರ್ ಎಲ್ ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ನಡೆದಿರುವ ದಾಳಿ ನಡೆಸಲಾಗುತ್ತಿದೆ.