ಸುದ್ದಿಮೂಲ ವಾರ್ತೆ ಕಲಬುರಗಿ, ನ.20:
ಸೇಡಂ ಬಿ.ಇ.ಓ ಕಚೇರಿಯ ಎ್.ಡಿ.ಸಿ ಶಿವಲಿಂಗಪ್ಪ 25 ಸಾವಿರ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಜಾಕ್ ಬೇಗಮ್ ಎಂಬುವರು ವಯೋನಿವೃತ್ತಿಿ ಹೊಂದಿದ ಬಳಿಕ ಅವರಿಗೆ ಸಂಬಂಧಿಸಿದ ಪೆನ್ಷನ್ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳ ಬೆನಿಫಿಟ್ ಗಳನ್ನು ಲೆಕ್ಕಚಾರವನ್ನು ಮಾಡಿ ೈಲ್ ಮೂವ್ ಮಾಡಲು ಸೇಡಂ ಬಿ.ಇ.ಓ ಕಚೇರಿಯ ಎ್.ಡಿ.ಸಿ. ಶಿವಲಿಂಗಪ್ಪ ಅವರು ರಜಾಕ್ ಬೇಗಮ್ ಅವರ ಪುತ್ರ ಆಫ್ರೀೀದಿ ಅವರಿಗೆ 28,500 ರೂಪಾಯಿ ಬೇಡಿಕೆ ಇಟ್ಟಿಿದ್ದರು. ಈ ಕುರಿಜತು ಆಫ್ರೀೀದಿ ಅವರು ಲೋಕಾಯುಕ್ತ ದೂರು ನೀಡಿದರು.
ದೂರಿನ ಬೆನ್ನಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಶಿವಲಿಂಗಪ್ಪ ೆನ್ ಪೇ ಮೂಲಕ 25 ಸಾವಿರ ರೂ ಲಂಚ ಪಡೆಯುವಾಗ ವಶಕ್ಕೆೆ ಪಡೆದಿದ್ದಾರೆ. ತನಿಖೆ ಚುರುಕಾಗಿ ನಡೆಯುತ್ತಿಿದ್ದು ನಂತರ ಅವರನ್ನು ನ್ಯಾಾಯಾಂಗ ಬಂಧನಕ್ಕೆೆ ಒಪ್ಪಿಿಸಲಾಗುವುದು ಎಂದು ತಿಳಿದು ಬಂದಿದೆ.
ಕಲಬುರಗಿ ಲೋಕಾಯುಕ್ತ ಎಸ್ಪಿಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

