ಸುದ್ದಿಮೂಲ ವಾರ್ತೆ
ತಿಪಟೂರು, ಮಾ.30: ಭಾರತದಲ್ಲಿ ಕ್ರೀಡಾಲೋಕವು ಬದಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್ ಅಧ್ಯಕ್ಷ ಲೋಕೇಶ್ವರ ಹೇಳಿದರು. ಇಲ್ಲಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಇಂಟರ್ ಕೋಲಿಗೇಟ್ ಸ್ಟೇಟ್ಲೆವೆಲ್ ಖೊ-ಖೊ ಪುರುಷರ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುವ ಕ್ರೀಡಾಪಟುಗಳಿಗೆ ಸಿಗುವ ಸರ್ಕಾರೀ ಸವಲತ್ತುಗಳ ಬಗ್ಗೆ ಸವಿವರವಾಗಿ ವಿಸ್ತರಿಸುತ್ತಾ, ಕ್ರೀಡೆ ಈಗ ಬರೀ ಮನರಂಜನೆಯಾಗಿ ಉಳಿಯದೇ ಅದೂ ಕೂಡ ಉದ್ಯಮವಾಗಿ ಬೆಳೆಯುತ್ತಿದೆ. ಹಾಗೆಯೇ ತಾವು ಖೋ-ಖೋ ಪಟುವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರ ನೀಡಿದ ಕಲ್ಪತರು ವಿದ್ಯಾ ಸಂಸ್ಥೆಗೆ ಚಿರಋಣಿ ಎಂದರು. ಕಾರ್ಯಕ್ರಮದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಸಾಧನೆಗೈದ ವೀಣಾ ಎಂ. ರವರು ಅಂತರ ರಾಷ್ಟಿಯ 12ನೇ ಸೌತ್ ಏಷಿಯನ್ ಖೋ-ಖೋನಲ್ಲಿ 2016ರ ಸಾಲಿನಲ್ಲಿ ಬಂಗಾರದ ಪದಕ ಪಡೆದವರು ಸುಮಾರು ೪೬ ಬಾರಿ ನ್ಯಾಷನಲ್ ಲೆವೆಲ್ ಖೋ-ಖೋ ಆಡಿದವರು ಇವರು ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದರು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯದ ತಂಡದವರು, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಬಿ.ಎಂ.ಎಸ್.ಸಿ.ಇ. ತಂಡದವರು ಹಾಗು ತೃತೀಯ ಸ್ಥಾನ ಬೆಂಗಳೂರಿನ ಎಂ.ವಿ.ಜೆ.ಐ.ಟಿ ತಂಡದವರು ಗಳಿಸಿರುತ್ತಾರೆ. ವಿಜೇತ ತಂಡದವರಿಗೆ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ಮತ್ತು ಉಪಾಧ್ಯಕ್ಷರಾದ ಬಿ.ಎಸ್.ಉಮಾಶ್, ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್, ಕಾರ್ಯದರ್ಶಿ ಟಿ.ಯು.ಜಗದೀಶ್ಮೂರ್ತಿ, ಲೋಕೇಶ್ವರವರು, ವೀಣಾ.ಎಂ.ರವರು, ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜ್, ಕಾರ್ಯದರ್ಶಿಗಾಳಾದ ಸುಧಾಕರ್.ಹೆಚ್.ಜಿ. ಹಾಗು ಪ್ರಾಂಶುಪಾಲರಾದ ಡಾ.ಜಿ.ಡಿ.ಗುರುಮೂರ್ತಿ ಕೆ.ಐ.ಟಿ. ದೈಹಿಕ ಶಿಕ್ಷಣ ನಿರ್ದೇಶಕ ಜಯಂತ್.ಎ.ಎಸ್. ಕ್ರೀಡಾಆಯೋಜಕರು ಹಾಗೂ ಕ್ರೀಡಾಪಟುಗಳು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ವಿಷೇಶ ಆಹ್ವಾನಿತರಾಗಿ ಅಂತರರಾಷ್ಟೀಯ ಖೋ-ಖೋ ಪಟು ಹಾಗೂ ಝಾನ್ಸಿ ರಾಣಿ ಲಕ್ಮೀಬಾಯಿ ಪ್ರಶಸ್ತಿ ವಿಜೇತೆ ವೀಣಾ.ಎಂ. ಭಾಗವಹಿಸಿದ್ದರು