ಸುದ್ದಿಮೂಲ ವಾರ್ತೆ ಬೆಂಗಳೂರು, ಜ.07:
ವಾಯುವ್ಯ ಕರ್ನಾಟಕ ಸಾರಿಗೆ ದೂರದ ಪ್ರಯಾಣಗಳ ಬಸ್ ದರವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಆಯ್ದ ಮಾರ್ಗಗಳಲ್ಲಿ ಮಾತ್ರ ದರ ಇಳಿಕೆಯಾಗಿದೆ. ಕೆಲವು ದೂರ ಮಾರ್ಗದಲ್ಲಿ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆೆಯಲ್ಲಿ ಕಡಿಮೆಯಾಗಿದೆ. ಈ ಹಿನ್ನೆೆಲೆಯಲ್ಲಿ ಹುಬ್ಬಳ್ಳಿಿಯಿಂದ ವಿವಿಧ ದೂರದ ಪ್ರಮುಖ ಸ್ಥಳಗಳ ನಡುವೆ ಸಂಚರಿಸುವ ಪ್ರತಿಷ್ಠಿಿತ ಸಾರಿಗೆ ಬಸ್ಗಳ ಪ್ರಯಾಣ ದರದಲ್ಲಿ ಇಳಿಕೆ ಮಾಡಲಾಗಿದೆ.
ಅಲ್ಲದೆ ಬೆಂಗಳೂರುನಿಂದ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್ಗಳ ಪ್ರಯಾಣ ದರವನ್ನು ಕೂಡ ಇಳಿಕೆ ಮಾಡಲಾಗಿದೆ.
ಒಂದೇ ಟಿಕೆಟನ್ಲ್ಲಿ 4 ಅಥವಾ ಹೆಚ್ಚು ಆಸನಗಳನ್ನು ಕಾಯ್ದಿಿರಿಸಿದರೆ ಪ್ರಯಾಣದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಮಾರ್ಗ ಎಷ್ಟು ಕಡಿಮೆ
ಮಾರ್ಗ ಹಿಂದಿನ ದರ ಈಗಿನ ದರ
ಹುಬ್ಬಳಿ-ಶಿರಡಿ 1657 1628
ಧಾರವಾಡ-ಶಿರಡಿ 1576 1560
ಬೆಳಗಾವಿ-ಶಿರಡಿ 1410 1390
ಹುಬ್ಬಳ್ಳಿಿ-ಪಿಂಪ್ರಿಿ 1180 1088
ಧಾರವಾಡ-ಪಿಂಪ್ರಿಿ 1079 1020
ಬೆಳಗಾವಿ-ಪಿಂಪ್ರಿಿ 890 870
ಹುಬ್ಬಳ್ಳಿಿ-ಪಣಜಿ 449 364
ಧಾರವಾಡ-ಪಣಜಿ 376 340
ಹುಬ್ಬಳ್ಳಿಿ-ವಾಸ್ಕೋೋ 501 394
ಧಾರವಾಡ-ವಾಸ್ಕೋೋ 423 370

