ಶ್ರೀನಿಧಿ ಜೈನ್
ಜೈನ ಧರ್ಮದ 24 ನೇ ತೀರ್ಥಂಕರಾದ ಮಹಾವೀರ ಅವರ ಜನ್ಮ ದಿನವನ್ನು ಮಹಾವೀರ್ ಜಯಂತಿಯಾಗಿ ಆಚರಣೆ ಮಾಡಲಾಗುವುದು. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ವರ್ಷ ಕ್ರಿ.ಪೂ. 599 ಅಥವಾ ಕ್ರಿ.ಪೂ. 615.ಮಹಾವೀರನು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು. ಸಮಾನ್ಯವಾಗಿ ಮಹಾವೀರ ಜಯಂತಿಯು ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಆಚರಿಸಲಾಗುತ್ತದೆ. ಭಗವನ್ ಮಹಾವೀರ ಅವರು ಅಹಿಂಸ ಪರೋಮೊಧರ್ಮ ಎಂಬ ಘೋಷ ವ್ಯಾಕ್ಯವನ್ನು ನೀಡಿದ್ದರು. ಇದರ ಅರ್ಥ ಹಿಂಸೆಯನ್ನು ಮೇಟ್ಟಿನಿಂತಂತಹ ಧರ್ಮ ಎಂದು ಹೇಳಲಾಗುತ್ತದೆ.
ತಾನು ಬದುಕಿ ಪರರನ್ನು ಬದುಕಲು ಬಿಡಿ ಎಂಬ ಮಾತಿನಂತೆ ಮತ್ತೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ಬದುಕುವುದಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತದೆ. ಜೈನ ಧರ್ಮದಲ್ಲಿ ಎರಡು ಪಂಗಡಗಳಿವೆ. ಮೊದಲನೆಯದು ಶ್ವೇತಾಂಬರರು. 23ನೇ ತೀರ್ಥಂಕರರಾದ ಪಾರ್ಶ್ವನಾಥ ತೀರ್ಥಂಕರರ ಅನುಯಾಯಿಗಳು. ಇವರು ಬಿಳಿಯ ಬಟ್ಟೆ ಧರಿಸಿರುತ್ತಾರೆ. ಎರಡನೇಯದು ದಿಗಂಬರರು ಇವರು ಮಹಾವೀರನ ಅನುಯಾಯಿಗಳಾಗಿದ್ದು, ಮೈಮೇಲೆ ಬಟ್ಟೆ ಧರಿಸದೆ ಕಠಿಣ ವ್ರತವನ್ನು ಅನುಸರಿಸುವವರಾಗಿರುತ್ತಾರೆ. ಜೈನ ಧರ್ಮದಲ್ಲಿ ಎರಡು ರೀತಿಯಾದಂತಹ ಪಂಗಡಗಳನ್ನುಹೊಂದಿದೆ ಮತ್ತು ಜೈನ ಧರ್ಮವು ತತ್ತ್ವಾರ್ಥ ಸೂತ್ರ ಎಂಬ ಪವಿತ್ರ ಗ್ರಂಥವನ್ನು ಒಳಗೊಂಡಿದೆ.
ಭಗವನ್ ಮಹಾವೀರ, ಬಾಹುಬಲಿ ಇನ್ನಿತರ ಜೈನ ಧರ್ಮದ ತೀರ್ಥಂಕರರು ಜೀವನದ ಮೇಲಿನ ಆಸೆ ತ್ಯಜಿಸಿ ಘೋರ ತಪಸ್ಸನ್ನು ಕೈಗೊಂಡು ಸಿದ್ದಿ ಗಳಿಸಿದರು. ಮಹಾವೀರ ಬಿಹಾರದ ವೈಶಾಲಿಯ ಕುಂದ ಎಂಬ ಗ್ರಾಮದಲ್ಲಿ ಜನಿಸಿದನು. ಇವನ ಮೂಲ ಹೆಸರು ವರ್ಧಮಾನ. ತಂದೆ ಹೆಸರು ಸಿದ್ದಾರ್ಥ, ತಾಯಿ ಹೆಸರು ತ್ರಿಶಲಾದೇವಿ. ಇವರ ಹೆಂಡತಿಯ ಹೆಸರು ಯಶೋಧೆ. ಇವರ ಮಗಳ ಹೆಸರು ಪ್ರಿಯದರ್ಶಿನಿ. ಪುಟ್ಟ ಕುಟುಂಬವನ್ನು ಹೊಂದಿದ್ದ ಮಹಾವೀರನು ತನ್ನ ತಂದೆ ತಾಯಿಯರ ಆಕಸ್ಮಿಕ ಮರಣದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ 30 ನೇ ವಯಸ್ಸಿನಲ್ಲಿ ಸಂಸಾರಿಕ ಜೀವನವನ್ನು ತ್ಯಜಿಸಿದನು.
ಮಹಾವೀರನನ್ನು ರತ್ನತ್ರವೆಂದು ಕರೆಯುವುದುಂಟು, ಇವರು ಬೋಧಿಸಿದ ತತ್ವಗಳಲ್ಲಿ ಅಹಿಂಸೆಗೆ ಹೆಚ್ಚಿನ ಮಹತ್ವ ನೀಡಿದ್ದು, ಮಹಾವೀರನುಎಂದು ಘೊಷಿಸಿದ್ದನು. ಹೀಗೆ ಮೂವತ್ತು ವರ್ಷಗಳ ಕಾಲ ಪರಿವ್ರಾಜಕನಾಗಿದ್ದು ಬೋಧನೆ ನೀಡುತ್ತಾ, ಕೇವಲ ಜ್ಞಾನವನ್ನು ಹಂಚುತ್ತಾ ಸಾಗಿದ ಮಹಾವೀರ, ತನ್ನ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಪಾವಾಪುರಕ್ಕೆ ಬಂದು ಆತ್ಮಧ್ಯಾನದಲ್ಲಿ ಲೀನವಾದ. ಕೇವಲ ಜ್ಞಾನ ಪಡೆದ ವರ್ಧಮಾನ ಮಹಾವೀರ ತನ್ನ ಮೊದಲ ಶಿಷ್ಯ ಗೌತಮನಿಗೆ ನೀಡಿದರು.
“”
ಉಪದೇಶದ ಕೆಲವು ಸಾರಗಳು ಈ ಕೆಳಗಿನಂತಿವೆ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಂಡ ಬೆಳಕಿನಲ್ಲಿ ಬಾಳಿದರೆ ಮಾತ್ರ ಅವರಿಗೆ ಮುಕ್ತಿ. ಮನುಷ್ಯನ ಒಳಿತು, ಕೆಡುಕುಗಳಿಗೆ ಅವನೇ ಕಾರಣ. ಅವನ ಉದ್ಧಾರ ಅವನಿಂದಲೇ ಆಗಬೇಕು. ಯಾವುದೇ ಮನುಷ್ಯನ ಉದ್ಧಾರ ಇತರರಿಂದ ಆಗುತ್ತದೆ ಎಂದರೆ ಅದು ಬಂಧನವೇ ಸರಿ. ಗುರುವು ಕೂಡ ಶಿಷ್ಯನನ್ನು ಉದ್ಧರಿಸಲಾರನು. ಗುರುವಿನ ಕುರಿತು ಬೆಳೆಸಿಕೊಳ್ಳುವ ಮೋಹವೂ ಪರಾಧೀನ ಭಾವವೇ ಆಗಿದೆ. ಆದ್ದರಿಂದ ಅದನ್ನು ತೊಡೆದುಹಾಕಬೇಕು ಎಂದು ಹೇಳಿದ್ದರು.
ಮಹಾವೀರನ ಬೋಧನೆ. ಇವುಗಳ ಜೊತೆಗೆ ಸಮ್ಯಕ್ಜ್ಞಾನ, ಸಮ್ಯಕ್ಚಾರಿತ್ರ, ಸಮ್ಯಕ್ ದರ್ಶನಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಮಹಾವೀರ, ಅವನ್ನು ‘ರತ್ನತ್ರಯ’ನೆಂದು ಕರೆಸಿಕೊಂಡನು.
01) ಸಮ್ಯಕ್ಜ್ಞಾನ – ಒಳ್ಳೆಯ ಜ್ಞಾಣ
02) ಸಮ್ಯಕ್ಚಾರಿತ್ರ – ಒಳ್ಳೆಯ ನಡವಳಿಕೆ
03) ಸಮ್ಯಕ್ದರ್ಶನ – ಒಳ್ಳೆಯ ಗ್ರಹಿಕೆ ಎಂಬ 3 ಅಂಶಗಳನ್ನು ಜನರಿಗೆ ಮನವರಿಕೆ ಮಾಡಿದ್ದರು.
ಅಷ್ಟೇ ಅಲ್ಲದೇ ಜೈನ ಧರ್ಮದಲ್ಲಿ ಈ ಕೆಳಗಿನ 5 ತತ್ವಗಳಿಗೆ ಹೆಚ್ಚು ಒತ್ತನ್ನು ನೀಡಿದ್ದಾರೆ.
01) ಸತ್ಯ- ಸುಳ್ಳು ಹೇಳಬಾರದು.
02) ಅಹಿಂಸೆ- ಹಿಂಸೆಯನ್ನು ಮಾಡಬಾರದು
03) ಅಪರಿಗ್ರಹ- ಅವಶ್ಯಕ್ಕಿಂತ ಹೆಚ್ಚು ಸಂಪತ್ತನ್ನು ಹೊಂದ ಬಾರದು.
04) ಬ್ರಹ್ಮಚರ್ಯ- ಪವಿತ್ರತೆಯನ್ನು ಕಾಪಡಿಕೊಳ್ಳುವುದು
05) ಅಸ್ತೇಯ- ಕಳ್ಳತನ ಮಾಡಬಾರದು.
ಈ 5 ತತ್ವಗಳನ್ನು ಹೊರತು ಪಡೆಸಿ ನಡಿದಿದ್ದೇ ಅದಲ್ಲಿ ಆದರಿಂದ ಪಾಪವು ಉಂಟಾದಂತೆ ಎಂದು ನಂಬಿದವರು.
ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ.
ಜೈನ ಧರ್ಮದ ಕೆಲವು ಪದ್ದತಿಗಳು; ಪ್ರಾಣೀ ಪಕ್ಷಿಗಳಿಗೆ ಹಿಂಸೆ ಮಾಡದೇ ಅವು ನಮ್ಮಂತೆ ಜೀವಿ ಬದುಕಲು ಬಿಡಬೇಕು ಮತ್ತು ಜೈನ ಧರ್ಮದ ಎಷ್ಟೋ ಮುನಿಗಳು ಸಂಜೆ 6ರ ನಂತರ ಸಚಾರ ಮಾಡುವುದಿಲ್ಲ. ಕಾರಣ ಸೂರ್ಯ ಮುಳುಗುವಂತಹ ಸಮಯದಲ್ಲಿ ಕಣ್ಣಿಗೆ ಕಾಣದ ಎಷ್ಟೋ ಜೀವ ರಾಶಿಗಳು ಸಂಚರಿಸುತ್ತವೆ. ನಮ್ಮ ಓಡಾಟದಿಂದ ಅವುಗಳ ಜೀವ ಹಾನಿಯಾಗಬಾರದು ಎಂಬ ನಂಬಿಕೆ. ಮೇಲಾಗಿ ಸಂಜೆ 7ರ ಬಳಿಕ ಮೌನ ವ್ರತ ತೆಗೆದುಕೊಳ್ಳುತ್ತಾರೆ. ಚಳಿ, ಮಳೆ ಬೇಸಿಗೆ ಹೀಗೆ ಎಲ್ಲಾ ಕಾಲದಲ್ಲಿಯೂ ತಮ್ಮ ಧರ್ಮದ ಪದ್ದತಿಯನ್ನು ಬಿಡುವುದಿಲ್ಲ.
ಉದಾರಣೆಗೆ ನೋಡುವುದಾದರೆ ಚಳಿಗಾಲದಲ್ಲಿ ದಿಗಂಬರ ಮುನಿಗಳು ಬಟ್ಟೆ ಧರಿಸದಿದ್ದರೂ ಚಳಿ ಎಂಬ ಕಾರಣಕ್ಕೆ ಯಾವ ಹಾಸಿಗೆಯನ್ನೂ ಅವರು ಉಪಯೋಗಿಸುವುದಿಲ್ಲ. ಎಲ್ಲ ಕಾಲದಲ್ಲಿಯು ಅವರು ಬರಿ ನೆಲದ ಮೇಲೆ ಮಲಗುವ ಪದ್ಧತಿ ಇಟ್ಟುಕೊಂಡಿರುತ್ತಾರೆ. ದಿನದಲ್ಲಿ ಒಂದು ಬಾರಿ ಮಾತ್ರ ಅಹಾರ ಸೇವನೆ ಮಾಡುವವರಾಗಿದ್ದು, ಅವರ ಊಟದ ವಿಧಾನವು ಕೂಡ ಕಠಿಣವಾಗಿಯೇ ಇರುತ್ತದೆ. ಆಹಾರದಲ್ಲಿ ಉಪ್ಪು, ಖಾರ ಎಲ್ಲವೂ ಸಹ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗೆಡ್ಡೆ ಗೆಣಸು ಅಂತಹ ಭೂಮಿಯೊಳಗೆ ಬೆಳೆಯುವಂತಹ ತರಕಾರಿಯನ್ನು ಕೂಡ ಇವರು ಸೇವಿಸುವುದಿಲ್ಲ. ಬಹುತೇಕ ಕಠಿಣ ವ್ರತಗಳ ಜೈನ ಧಮರ್ಮದಲ್ಲಿ ಕಂಡುಬರುವುದೇ ವಿಶೇಷ.