ಜಲಾಶಯಗಳಿಂದ ನದಿಗೆ ಹೆಚ್ಚು ನೀರು ಬಿಡುಗಡೆ
ದಯಾಶಂಕರ ಮೈಲಿ ಮೈಸೂರು, ಜು.21:
ಕಾವೇರಿ ಕಣಿವೆ ಪ್ರದೇಶಗಳಾದ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಭಾನುವಾರ ಮಳೆರಾಯ ಸದ್ಯಕ್ಕೆೆ ತಗ್ಗಿಿ ನಡೆಯುತ್ತಿಿದ್ದಾನೆ. ನಿರಂತರವಾಗಿ ಜೋರು ಸುರಿಯುತ್ತಿಿದ್ದ ಮಳೆ ತುಂತುರು ಮಳೆಗೆ ಸೀಮಿತಗೊಳಿಸಿಕೊಂಡಿದೆ. ಆದ್ದರಿಂದ ಎಲ್ಲೂ ಮಳೆಯಿಂದ ಆಸ್ತಿಿಪಾಸ್ತಿಿ ಮತ್ತು ಪ್ರಾಾಣ ಹಾನಿ ಆದ ಬಗ್ಗೆೆ ವರದಿ ಆಗಿಲ್ಲ.
ಮಳೆ ಪರವಾಗಿಲ್ಲ ಸದ್ಯಕ್ಕೆೆ ತುಂತುರು ಮಳೆಯಷ್ಷೆೆ ಆಗುತ್ತಿಿದೆಯಲ್ಲ ಎನ್ನುವಷ್ಟರ ಮಟ್ಟಿಿಗೆ ಕಡಿಮೆ ಆಗಿದೆ. ಆದರೆ ಬಿರುಗಾಳಿ ಹೆಚ್ಚಿಿನ ವೇಗದಲ್ಲಿ ಬೀಸುತ್ತಿಿದೆ. ಇದು ಚಳಿಯ ವಾತಾವರಣವನ್ನು ಉಂಟು ಮಾಡಿದೆ. ಇದೊಂದು ಬಗೆಯಲ್ಲಿ ಜನರಿಗೆ ತೊಂದರೆ ಆಗಿದೆ. ರೋಗರುಜಿನಗಳು ಹೆಚ್ಚಾಾಗುವ ಸಾಧ್ಯತೆಗಳಿವೆ ಎಂಬ ಆತಂಕ ಎದುರಾಗಿದೆ. ಇಂದು ಕಡೆ ಪ್ರವಾಹ ಮತ್ತೊೊಂದು ಕಡೆ ರೋಗರುಜಿನ ಹರಡುವ ಭೀತಿ ಎದುರಾಗಿದೆ.
ಮೋಡಗಳು ಸೂರ್ಯ, ಚಂದ್ರರನ್ನು ಆಕಾಶದಿಂದ ಇಣುಕಿ ನೋಡಲು ಈ ಕ್ಷಣ ಕೂಡ ಸಹ ಬಿಟ್ಟಿಿಲ್ಲ. ಆ ಪ್ರಮಾಣದಲ್ಲಿ ಮೋಡಗಳು ದಟೈಸಿವೆ. ಮಳೆ ಯಾವ ಕ್ಷಣದಲ್ಲಾದರೂ ಮತ್ತೆೆ ಸುರಿಯುವ ಲಕ್ಷಣಗಳು ಇವೆ. ಮಳೆ ಪ್ರವಾಹದಿಂದ ಆಗುವ ಅನಾಹುತಗಳ ಬಗ್ಗೆೆ ಅಯಾ ಜಿಲ್ಲಾಡಳಿಗಳು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಎಂಬುದನ್ನು ಮರೆಯುವಂತಿಲ್ಲ.
ಏಳೆಂಟು ದಿನಗಳಿಂದ ಸುರಿದ ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆೆ ಸರ್ಕಾರ ಕೂಡಲೇ ವರದಿ ತರಿಸಿಕೊಂಡು ಪರಿಹಾರ ನೀಡುವ ಕಾರ್ಯ ತ್ವರಿತವಾಗಿ ಆರಂಭವಾಗಬೇಕಿದೆ. ಮೂರು ಜಿಲ್ಲೆಗಳ ಲಕ್ಷಾಂತರ ಎಕರೆಯಲ್ಲಿ ಇದ್ದ ಹೊಗೆಸೊಪ್ಪುು, ಶುಂಠಿ, ಬಾಳೆ, ರಾಗಿ ಬೆಳೆಗಳಿಗೆ ಹಾನಿ ಆಗಿದೆ. ರೈತಾಪಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಗ್ರಾಾಮೀಣ ಭಾಗದಲ್ಲಿ ಹೆಚ್ಚು ಮನೆಗಳು ಹಾನಿ ಆಗಿವೆ. ಇನ್ನೂ ಗೋಡೆ ಮನೆ, ಕೊಟ್ಟಿಿಗೆ ಗೋಡೆಗಳು ಕುಸಿಯುವುದು ನಿಂತಿಲ್ಲ. ಈ ಬಗ್ಗೆೆ ಸರ್ಕಾರ ಗಮನಹರಿಸಿ,
ವಸತಿ ಕಲ್ಪಿಿಸಿಕೊಡಬೇಕು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ರಸ್ತೆೆಗಳ ಕಳಪೆ ಕಾಮಗಾರಿ ಬಟಾಬಯಲು :
ಮಳೆರಾಯ ರಸ್ತೆೆಗಳ ಕಳಪೆ ಕಾಮಗಾರಿಯನ್ನು ಬಟಾಬಯಲು ಮಾಡಿದ್ದಾನೆ. ನಗರ ಮತ್ತು ಗ್ರಾಾಮೀಣ ಪ್ರದೇಶದಲ್ಲಿ ಮಳೆಯಿಂದ ಡಾಂಬರು ರಸ್ತೆೆಗಳೆಲ್ಲಾ ಮಳೆಗೆ ಕಳೆದು ಹೋಗಿವೆ. ಗುಂಡಿಮಯವಾಗಿ ಜನರು ಮತ್ತು ವಾಹನಗಳು ಸಂಚರಿಲಾಗದ ದುಸ್ಥಿಿತಿ ಇದೆ. ರಸ್ತೆೆಯಲ್ಲಿ ಮಳೆ ನಿರ್ಮಾಣ ಮಾಡಿರುವ ಗುಂಡಿಗಳಲ್ಲಿ ನೀರು ನಿಂತಿರುವ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತಿಿವೆ. ಮಳೆ ಸುದೀರ್ಘವಾಗಿ ಬಿಡುವು ನೀಡಿದ ನಂತರ ರಸ್ತೆೆಗಳ ಡಾಂಬರೀಕರಣ ಕಾರ್ಯವನ್ನು ಸ್ಥಳೀಯ ಸಂಸ್ಥೆೆಗಳು ಕೈಗೆತ್ತಿಿಕೊಳ್ಳಬೇಕಾಗಿದ್ದು ಅದಕ್ಕೆೆ ಬೇಕಾದ ಹಣವನ್ನು ಸರ್ಕಾರ ತ್ವರಿತವಾಗಿ ಬಿಡುಗಡೆ ಮಾಡಬೇಕಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ನಂಜನಗೂಡು, ಪಿರಿಯಾಪಟ್ಟಣ ತಾಲೂಕುಗಳು, ಹಾಸನ ಜಿಲ್ಲೆಯ ಅರಕಲಗೂಡು, ಸಕಲೇಶಪುರ, ಬೇಲೂರು ತಾಲೂಕುಗಳು ಮತ್ತು ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ, ಕುಶಾಲನಗರದಲ್ಲಿ ಮಳೆಯಿಂದ ಹೆಚ್ಚು ಹಾನಿ ಆಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಎಲ್ಲೆಲ್ಲೂ ಜಲರಾಶಿ :
ಕಬಿನಿ, ಹಾರಂಗಿ, ಹೇಮಾವತಿ ಹಾಗು ಕೆಆರ್ಎಸ್ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮ ಎಲ್ಲೆಲ್ಲೂ ಜಲರಾಶಿ. ನದಿ, ತೊರೆಗಳಲ್ಲಿ ಹಾಲ್ನೊೊರೆಯಂತೆ ನೀರು ಚಿಮ್ಮಿಿ ಹರಿಯುವ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತಿಿದೆ.
ಕಾವೇರಿ, ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹಿನ್ನೆೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಿಕಾಂತ ರೆಡ್ಡಿಿ ಮತ್ತು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿಿದ್ದು, ಪ್ರವಾಹ ಪರಿಸ್ಥಿಿತಿ ಬಗ್ಗೆೆ ಮಾಹಿತಿ ಪಡೆದುಕೊಳ್ಳುತ್ತಿಿದ್ದಾರೆ.
ಟಿ.ನರಸೀಪುರ ತಾಲೂಕಿನ ತಾಲ್ಲೂಕಿನ ಕೆಂಡನಕೊಪ್ಪಲು, ಗುಂಜಾನರಸಿಂಹಸ್ವಾಾಮಿ ದೇವಸ್ಥಾಾನ, ತಲಕಾಡು ಸೇರಿದಂತೆ ಮತ್ತು ನಂಜನಗೂಡಿನ ಶ್ರೀನಂಜುಡೇಶ್ವರ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹದ ಭೀತಿ ಮುಂದುವರಿದಿದೆ. ಹಾಗೆಯೇ ಮಂಡ್ಯ ಜಿಲ್ಲೆಯ ರಂಗನತಿಟ್ಟು ಮತ್ತಿಿತರ ಕಡೆ ಪ್ರವಾಹ ಇದ್ದು, ಕೊಡಗು ಜಿಲ್ಲೆಯ ತಲಕಾವೇರಿ, ಕುಶಾಲನಗರ ಸೇರಿದಂತೆ ಹಲವೆಡೆ ಪ್ರವಾಹ ಇದೆ.