ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ತುಂಗಭದ್ರಾಾ ಎಡದಂಡೆ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಲು ಕಾಲುವೆ ದುರಸ್ತಿಿಘಿ, ಗ್ಯಾಾಂಗ್ಮನ್ಗಳ ನೇಮಕ ಸೇರಿ ವಿವಿಧ ಸಮಸ್ಯೆೆಗಳ ಪರಿಹಾರಕ್ಕಾಾಗಿ ಒಗ್ಗಟ್ಟಿಿನ ಹೋರಾಟ ರೂಪಿಸುವ ಜೊತೆಗೆ ಕೆಳ ಭಾಗದ ರೈತರ ಬೃಹತ್ ಸಮಾವೇಶ ಮಾಡಲು ಇಂದು ಮಟಮಾರಿಯಲ್ಲಿ ನಡೆದ ರೈತರ ಸಭೆಯಲ್ಲಿ ನಿರ್ಧರಿಸಲಾಯಿತು.
ಇಂದು ಬೆಳಿಗ್ಗೆೆ 11 ಗಂಟೆಗೆ ಮಟಮಾರಿಯಲ್ಲಿ ತಾ.ಪಂ ಮಾಜಿ ಸದಸ್ಯ ಉರುಕುಂದಪ್ಪ ನಾಯಕರ ನಿವಾಸ ಬಳಿ ಎಡದಂಡೆ ಕಾಲುವೆ ರೈತರ ಹೋರಾಟ ಸಮಿತಿ ರಚಿಸುವ ಹಿನ್ನೆೆಲೆಯಲ್ಲಿ ತಾಲೂಕಿನ ಮಟಮಾರಿ, ಪೂರತಿಪ್ಲಿಿ, ಮರ್ಚೆಟಹಾಳ ಗ್ರಾಾಮ ಪಂಚಾಯತ್ ಗಳ ವ್ಯಾಾಪ್ತಿಿಯಲ್ಲಿ ಬರುವ ಗ್ರಾಾಮಗಳ ರೈತರ, ಮುಖಂಡರ ಸಭೆ ನಡೆಸಲಾಯಿತು. ಕಾಲುವೆಯ ಡಿಸ್ಟ್ರಿಿಬ್ಯೂಟರಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಬೇಕು, ಹಿಂಗಾರು ಹಂಗಾಮಿನಲ್ಲಿ ನೀರು ಹರಿಸದ ಕಾರಣ ಕಾಲುವೆಗಳ ದುರಸ್ತಿಿ ಆರಂಭಿಸಬೇಕು, ಅರೆಬರೆ ಕೆಲಸ ಪೂರ್ಣಗೊಳಿಸಬೇಕು, ಗ್ಯಾಾಂಗ್ಮನಗಳ ನೇಮಿಸಲು ಸಚಿವ, ಶಾಸಕರ, ಅಧಿಕಾರಿಗಳ ಗಮನ ಸೆಳೆಯಲು ಸಂಘಟಿತ ಹೋರಾಟ, ಸಭೆ, ಸಮಾರಂಭಗಳ ಮಾಡಲು ಚರ್ಚಿಸಲಾಯಿತು.
ತುಂಗಭದ್ರಾಾ ಎಡದಂಡೆ ಕಾಲುವೆ ರೈತರ ಹೋರಾಟ ಸಮಿತಿ ರಚಿಸಿ ೆ.8ರಂದು ರಾಯಚೂರಿನಲ್ಲಿ ಕೆಳ ಭಾಗದ ರೈತರ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಇನ್ನುಳಿದ ಆರು ಗ್ರಾಾಮ ಪಂಚಾಯಿತಿಗಳ ವ್ಯಾಾಪ್ತಿಿಯ ಗ್ರಾಾಮಗಳ ಮುಖಂಡರ ಸಭೆಗಳನ್ನು ಈ ತಿಂಗಳೊಳಗೆ ನಡೆಸಲು ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಹೈಕ ಜನಾಂದೋಲನ ಕೇಂದ್ರ ಸಂಸ್ಥಾಾಪಕ ರಾಘವೇಂದ್ರ ಕುಷ್ಟಗಿ, ಬಿ. ಬಸವರಾಜ, ಆರ್. ಬಸವರಾಜ್, ಲಿಂಗಪ್ಪ ಪೂಜಾರಿ, ಲಕ್ಷ್ಮಣರಾವ್, ಉರುಕುಂದಪ್ಪ ನಾಯಕ, ಸತ್ಯನಾರಾಯಣ ಸಾಹುಕಾರ, ಯಂಕನ ಗೌಡ,
ಶ್ರೀನಿವಾಸ್ ನಾಯಕ, ವೆಂಕಟೇಶ್ ನಾಯಕ, ಲಕ್ಷ್ಮಣ್ ನಾಯಕ, ಬಿ. ರಾಮಣ್ಣ, ಶಿವರಾಜ್ ಪಾಟೀಲ್, ಉಮೇಶ್ ಪಾಟೀಲ್, ಲಕ್ಷ್ಮಣ ನಾಯಕ, ಶಾಸಪ್ಪ ನಾಯಕ, ವೆಂಕಯ್ಯ ನಾಯಕ ಸೇರಿ 80ಕ್ಕೂ ಅಧಿಕ ರೈತರಿದ್ದರು.
ಮಟಮಾರಿಯಲ್ಲಿ ಕೆಳ ಭಾಗದ ರೈತರ ಸಭೆ ಕಾಲುವೆ ದುರಸ್ತಿ, ಸಮಸ್ಯೆಗಳ ಪರಿಹಾರಕ್ಕೆ ೆ.8ರಂದು ಸಮಾವೇಶಕ್ಕೆ ನಿರ್ಧಾರ

