ಸುದ್ದಿಮೂಲ ವಾರ್ತೆ ರಾಯಚೂರು, ನ.14:
ಸ್ಟಾವೇರ್ ಇಂಜಿನಿಯರ್ಗಳಾಗಿ ವಿದೇಶಕ್ಕೆೆ ಹಾರುವ ಕಾಲ ಈಗ ಬದಲಾಗಿದೆ ನಾವೇ ಕಂಪ್ಯೂೂಟರ್ ತಯಾರಿಸಿ ಮಾರುಕಟ್ಟೆೆ ಮಾಡಿ ಆರ್ಥಿಕವಾಗಿ ಸಬಲರಾಗುವ ತಂತ್ರಜ್ಞಾನದಲ್ಲಿ ಅನೇಕ ಅವಕಾಶಗಳು ವಿುಲವಾಗಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆೆಯ ವಿಜ್ಞಾನಿ ಪ್ರೊೊಘಿ.ಅರಿಂದಮ್ ಘೋಷ್ ಹೇಳಿದರು.
ನಗರದ ಎಲ್ವಿಡಿ ಕಾಲೇಜ್ ಮೈದಾನದಲ್ಲಿ ಲಕ್ಷ್ಮೀವೆಂಕಟೇಶ್ವರ ದೇಸಾಯಿ ಮಹಾವಿದ್ಯಾಾಲಯದ ಅಮೃತ ಹಾಗೂ ಬಿಆರ್ಬಿ ಕಾಲೇಜಿನ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊೊಂಡು ಮಾತನಾಡಿದರು. ರಾಯಚೂರಿನ ಎರಡು ಮಹತ್ವದ ಕೋರ್ಸ್ಗಳ ಹೊಂದಿರುವ ಕಾಲೇಜುಗಳು ಸುದೀರ್ಘವಾಗಿ ವಿದ್ಯೆೆ ನೀಡಿದ್ದು ಒಂದು ವಿಸ್ಮಯದ ಜೊತೆ ಸಂಶೋಧನೆಗೆ ಹಚ್ಚುವ ವಿಜ್ಞಾನ ಕಲಿಸಿದರೆ ಮತ್ತೊೊಂದು ಕಾಲೇಜು ಆರ್ಥಿಕವಾಗಿ ವ್ಯವಹಾರ ಮಾಡಿ ಹಣ ಗಳಿಕೆ ಮಾಡುವುದನ್ನು ಕಲಿಸುತ್ತಿಿವೆ ಎಂದರು.
ಈಗ ಸ್ಟಾವೇರ್ ತಂತ್ರಜ್ಞಾನ ನಿಪುಣ ವಿದ್ಯಾಾವಂತ ಯುವಕರು ವಿದೇಶಕ್ಕೆೆ ಹೋಗಿ ಕೆಲಸ ಮಾಡಿ ಹಣ ಗಳಿಸುವ ಕಾಲ ಬದಲಾಗಿದೆ. ಇಂದು ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದ್ದು ನಾವೇ ಕಂಪ್ಯೂೂಟರ್ ಸೃಷ್ಟಿಿಸಿ ಅದನ್ನು ಮಾರುಕಟ್ಟೆೆಗೆ ಬಿಡುಗಡೆ ಮಾಡಿ ಹಣ ಗಳಿಕೆ ಮಾಡಿ ಶ್ರೀಮಂತರಾಗಬಹುದಾಗಿದೆ. ಇಂದು ಕ್ವಾಾಂಟಮ್ ತಂತಜ್ಞಾನದ ಮೂಲಕ ಮುಂದಿನ 5-10 ವರ್ಷಗಳಲ್ಲಿ ಕರ್ನಾಟಕ ದೇಶದಲ್ಲಿ ಸ್ವತಂತ್ರವಾಗಿ ವಿಜ್ಞಾನ ತಂತ್ರಜ್ಞಾನದಲ್ಲಿ ಮತ್ತಷ್ಟು ಮುಂಚೂಣಿಯಲ್ಲಿರುವಂತೆ ಮಾಡುವ ಕನಸನ್ನು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜ್ ಶ್ರಮಿಸುತ್ತಿಿದ್ದಾಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ವಾಾಂಟಮ್ ತಂತ್ರಜ್ಞಾನದ ಬೆಳವಣಿಗೆಯಲ್ಲಿ ವಿದ್ಯಾಾರ್ಥಿಗಳು, ಪ್ರಾಾಧ್ಯಾಾಪಕರು,ಶಿಕ್ಷಣ ಸಂಸ್ಥೆೆಯವರು ಸಂಘಟಿತವಾಗಿ ಕೈ ಜೋಡಿಸಿದರೆ ಬಹುದೊಡ್ಡ ಸಾಧನೆ ಮಾಡಲು ಸುಲಭವಾಗಿರಲಿದೆ ಮುಂಬರುವ ದಿನಗಳಲ್ಲಿ ಈ ಬಗ್ಗೆೆ ನಿಮ್ಮೊೊಟ್ಟಿಿಗೆ ಹೆಚ್ಚೆೆಚ್ಚು ಕೆಲಸ ಮಾಡುವ ಉತ್ಸಾಾಹ ತೋರಲಿದ್ದೇವೆ ಎಂದು ವಿಶ್ವಾಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಾಟಿಸಿ ಸಾನ್ನಿಿಧ್ಯ ವಹಿಸಿದ್ದ ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿದರು. ನಾನು ನನ್ನದು ಎಂಬ ಸ್ವಾಾರ್ಥತೆ ಇದ್ದರೆ ಜೀವನ ವ್ಯರ್ಥ ಸಮಾಜದ ಬಗ್ಗೆೆ ಕಳಕಳಿ ಹೊಂದಿದವರನ್ನು ಗೌರವಿಸಲಿದೆ. ಹೀಗಾಗಿ, ಪಾರಸಮಲ್ ಸುಖಾಣಿ ರಾಯಚೂರಿನ ಆಸ್ತಿಿ ಎಂದರು.
ದೇಶಕ್ಕೆೆ ಪುರಾತನ ಕಾಲದಿಂದಲೂ ಜ್ಞಾನದ ಹಸಿವು ಹೆಚ್ಚಿಿದೆ ಅನೇಕ ಸಂತರು ಹುಟ್ಟಿಿ ಬೆಳೆದಿದ್ದಾಾರೆ. ಗ್ರೀಸ್ ದೇಶದ ಇತಿಹಾಸ ನಮ್ಮದಲ್ಲ ಆರ್ಯರ, ಅಲೆಕ್ಸಾಾಂಡರ್ ಇತಿಹಾಸವೇ ಸುಳ್ಳು ಅದನ್ನು ರಾಷ್ಟ್ರೀಯ ಪುರಾತತ್ವ ಇತಿಹಾಸ ಸಂಶೋಧನಾ ಸಂಸ್ಥೆೆ ಸತ್ಯ ಹೇಳದೆ ದಾರಿ ತಪ್ಪಿಿದೆ ಎಂದು ವಾಗ್ದಾಾಳಿ ನಡೆಸಿದ ಅವರು, ಭಾರತದ ಇತಿಹಾಸ ಸರಿಯಾಗಿ ಬರೆದಿಲ್ಲ ಸುಳ್ಳನ್ನೆೆ ಮೆರೆಸಿದ್ದಾಾರೆ ಎಂದು ದೂರಿದರು.
ರಾಯಚೂರು ಆಡಳಿತ ವಲಯದಲ್ಲಿ ಗುಣಮಟ್ಟದ ಕೊರತೆ ಇದ್ದು ಆಯಾಕಟ್ಟಿಿನ ಜಾಗದಲ್ಲಿ ಆಡಳಿತ, ಅಧಿಕಾರ ನಡೆಸುವ ಬಹುತೇಕರಲ್ಲಿ ಬೇಜವಾಬ್ದಾಾರಿ, ಅಸಮರ್ಥತೆ ಇದೆ. ಉತ್ತಮರು ಹೊರಗೆ ಬರುತ್ತಿಿಲ್ಲ. ನಮ್ಮ ಮಕ್ಕಳನ್ನುಘಿ, ಯುವಕರನ್ನು ಸ್ವಾಾರ್ಥರನ್ನಾಾಗಿ ಮಾಡದೆ ಸಮಾಜಮುಖಿಯಾಗಿಸುವ ವಿದ್ಯೆೆ ಧಾರೆ ಎರೆಯಬೇಕಾಗಿದೆ ಎಂದ ಅವರು ಕೇವಲ ಪದವಿ ಪಡೆದರೆ ಸಾಕು ಎಂಬ ದೋರಣೆ ಅಳಿಸಿ ಹಾಕಬೇಕಿದೆ ಸಂಸ್ಕಾಾರದ ಮೂಲಕ ಶೈಕ್ಷಣಿಕ ಕ್ರಾಾಂತಿ ಆಗಬೇಕು. ಈಗ ಏಮ್ಸ್ಗಾಗಿ ನಡೆಯುತ್ತಿಿರುವ ಹೋರಾಟ ಯಶಸ್ವಿಿಯಾಗಿ ಅದಕ್ಕೆೆ ಎಲ್ಲರೂ ಶಕ್ತಿಿ ತುಂಬಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ರಾಯಚೂರು ಕೊಪ್ಪಳದ ಬಹುತೇಕರು ಎಲ್ವಿಡಿ, ಬಿಆರ್ಬಿ ಕಾಲೇಜಿನ ವಿದ್ಯಾಾರ್ಥಿಗಳಾಗಿ ಹೋಗಿದ್ದಾಾರೆ. ಅತ್ಯಂತ ಹಳೆಯದಾದ ಹಮದರ್ದ್ ಶಾಲೆಗೆ ಎಲ್ಲ ಸೌಲಭ್ಯ ಒದಗಿಸಿದ್ದೇವೆ. ವಿಶ್ವ ವಿದ್ಯಾಾಲಯ ಮಟ್ಟದಲ್ಲಿ ನಮ್ಮ ಕೀರ್ತಿ ವಿದ್ಯಾಾರ್ಥಿಗಳು ಮೂಡಿಸಿದ್ದಾಾರೆ. ನ್ಯಾಾಕ್ ಸಮಿತಿಯಿಂದ ಎ ಮತ್ತು ಬಿ ಶ್ರೇಣಿ ಪಡೆದ ಕಾಲೇಜುಗಳು ನಮ್ಮವು ಎಂದ ಅವರು ಮುಂಬರುವ ದಿನಗಳಲ್ಲಿ ಎಲ್ವಿಡಿ ಕಾಲೇಜು ಒಳಗೊಂಡು ಡಿಮ್ಡ್ ವಿಶ್ವ ವಿದ್ಯಾಾಲಯ ಮಾಡುವ ಕನಸಿದ್ದು ಅದನ್ನು ಮಾಡಿಯೇ ತೀರುವೆ ಎಂದು ಭರವಸೆ ನೀಡಿದ ಅವರು ಮುಂಬರುವ ದಿನಗಳಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿಿದ್ದು ವಿದ್ಯಾಾರ್ಥಿಗಳು, ಪಾಲಕರು, ಉಳ್ಳವರು, ದಾನಿಗಳು ತನು ಮನ ಧನದಿಂದ ಸಹಾಯ ಸಹಕಾರ ನೀಡಲು ಮನವಿ ಮಾಡಿದರು.
ನಷ್ಟದಲ್ಲೂ ಸಿಬ್ಬಂದಿಗೆ ಸೌಕರ್ಯ :
ಎಲ್ವಿಡಿ ಮಹಾವಿದ್ಯಾಾಲಯದಲ್ಲಿ 32 ವಿಭಾಗಗಳಿದ್ದು 325 ಬೋಧಕ-ಬೋಧಕೇತರ ಸಿಬ್ಬಂದಿ ಉತ್ತಮ ಕಾರ್ಯ ಮಾಡುತ್ತಿಿದ್ದಾಾರೆ ತಾರಾನಾಥ ಶಿಕ್ಷಣ ಸಂಸ್ಥೆೆಯಲ್ಲಿ 8 ಅನುದಾನಿತ ಶಿಕ್ಷಣ ಸಂಸ್ಥೆೆಗಳಿದ್ದು 60 ಜನ ಬೋಧಕರು, 20ಜನ ಬೋಧಕೇತರ ಸಿಬ್ಬಂದಿ ಮಾತ್ರ ಅನುದಾನಿತ ವ್ಯಾಾಪ್ತಿಿಯಲ್ಲಿದ್ದಾಾರೆ ಉಳಿದ ಎಲ್ಲರಿಗೂ ಸಂಸ್ಥೆೆ ನಷ್ಠದಲ್ಲಿದ್ದರೂ ಉತ್ತಮ ವೇತನ, ಸೌಲಭ್ಯ ನೀಡುತ್ತಿಿದ್ದೇವೆ ಎಂದರು.
371ಜೆ ಲಾಭ ಸಿಕ್ಕಿಿಲ್ಲ :
ಸಂವಿಧಾನದ 371ಜೆ ವಿಶೇಷ ಸ್ಥಾಾನಮಾನ ಸಿಕ್ಕು 10 ವರ್ಷವಾದರೂ ರಾಯಚೂರು ಜಿಲ್ಲೆೆಗೆ ಲಾಭ ಸಿಕ್ಕಿಿಲ್ಲಘಿ. ಕಲಬುರ್ಗಿ ಪಾಲಾಗಿದ್ದೆೆ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದ ಅವರು, ಆರೋಗ್ಯ ಮತ್ತು ಶಿಕ್ಷಣಕ್ಕೆೆ ಒತ್ತು ನೀಡಬೇಕು ಉನ್ನತ ಅಧಿಕಾರಿಗಳಿಂದ ಹಿಡಿದು ಸರ್ಕಾರಿ ನೌಕರರು ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ತಮ್ಮ ಮಕ್ಕಳ ವಿದ್ಯಾಾಭ್ಯಾಾಸ ಕಲಿಸುವ ಕಾನೂನು ತಂದರೆ ಅಭಿವೃದ್ದಿ ಸಂಸ್ಥೆೆಗಳು ಉಳಿಯಲಿವೆ ಎಂದು ಪ್ರತಿಪಾದಿಸಿದರು.
ಕೆಕೆಆರ್ಡಿಬಿ ಮೂಲಕ 5 ಸಾವಿರ ಕೋಟಿ ಈ ಭಾಗಕ್ಕೆೆ ನೀಡುತ್ತಿಿರುವುದಾಗಿ ಸರ್ಕಾರ ಹೇಳುತ್ತಿಿದೆ ಆ ಹಣ ಯಾವುದಕ್ಕೆೆ ಉಪಯೋಗವಾಗುತ್ತಿಿದೆ ಎನ್ನುವ ಅವಲೋಕನ ಮಾಡಲಿ. ರಾಯಚೂರಿಗೆ ವರ್ತುಲ ರಸ್ತೆೆಯಿಲ್ಲಘಿ, ವಿಮಾನ ನಿಲ್ದಾಾಣವಾಗಿಲ್ಲಘಿ, ಇಎಸ್ಐ ಆಸ್ಪತ್ರೆೆ ಇಲ್ಲ . ಈ ಎಲ್ಲವೂ ಕಲಬುರ್ಗಿಗೆ ಸೀಮಿತವಾಗಿವೆ ಎಂದರು.
ಇದೇ ವೇಳೆ ಕಾಲೇಜಿಗೆ ಭೂ ದಾನ ಮಾಡಿದ ದಾನಿಗಳಿಗೆ, ಕಟ್ಟಡ ಕಟ್ಟಿಿಸಿದ ದೇಣಿಗೆದಾರರಿಗೆ, ಕಾಲೇಜಿನ ಹಳೆಯ ವಿದ್ಯಾಾರ್ಥಿ ಎ ಪಾಪಾರೆಡ್ಡಿಿ ಅವರಿಗೆ ಹಾಗೂ ವಿಶ್ವ ವಿದ್ಯಾಾಲಯ ಮಟ್ಟದಲ್ಲಿ ರ್ಯಾಾಂಕ್ ಪಡೆದ ವಿದ್ಯಾಾರ್ಥಿ ಪಾಲಕರಿಗೆ ಸನ್ಮಾಾನಿಸಿ ಗೌರವಿಸಲಾಯಿತು.
ಕಾಲೇಜಿನ ಆವರಣದಲ್ಲಿ ವಿದ್ಯಾಾರ್ಥಿಗಳು ತಯಾರಿಸಿದ ಕೆಂಪುಕೋಟೆ, ವಿಧಾನಸೌಧ, ಪರಿಸರ ಕಾಳಜಿ ಸೇರಿ ವಿವಿಧ ಪ್ರಾಾತ್ಯಕ್ಷಿಿಕೆಗಳು ಗಮನ ಸೆಳೆದವು. ಇದೇ ವೇಳೆ ನಿಧನರಾದ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರ ಗೌರವಾರ್ಥ ವೌನಾಚರಣೆ ಮಾಡಿ ಸಂತಾಪ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ, ಉಪಮೇಯರ್ ಸಾಜಿದ್ ಸಮೀರ್, ತಾರಾನಾಥ ಶಿಕ್ಷಣ ಸಂಸ್ಥೆೆ ಖಜಾಂಚಿ ಪುರುಷೋತ್ತಮದಾಸ್ ಇನ್ನಾಾಣಿ, ಬಿಆರ್ಬಿ ಆಡಳಿತ ಮಂಡಳಿಯ ಅಧ್ಯಕ್ಷ ದವಲ್ಸಾಬ್ ಜೋಬನಪುತ್ರಘಿ, ಕಾರ್ಯದರ್ಶಿ ಚೇತನದೋಕಾ,ಪ್ರಾಾಚಾರ್ಯರಾದ ಸಂದೀಪ ಕಾರಬಾರಿ,ಶರಣಗೌಡ ಬಿಎಚ್. ಇತರರಿದ್ದರು.
ಸಂಸ್ಥೆೆಯ ಉಪಾಧ್ಯಕ್ಷ ಪವನ್ಕುಮಾರ ಸುಖಾಣಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರೆ, ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ ಸ್ವಾಾಗತಿಸಿದರು, ಕಾರ್ಯದರ್ಶಿ ಜಟ್ರಂ ಶ್ರೀನಿವಾಸ ವಂದಿಸಿದರು.
ಎಲ್ವಿಡಿಯ ಅಮೃತ-ಬಿಆರ್ಬಿ ಕಾಲೇಜುಗಳ ವಜ್ರಮಹೋತ್ಸವ ಸಮಾರಂಭ ತಂತ್ರಜ್ಞಾನದ ಮೂಲಕ ಸಬಲರಾಗಲು ವಿುಲ ಅವಕಾಶಗಳಿವೆ-ಪ್ರೊೊಘಿ.ಅರಿಂದಮ್ ಘೋಷ್

