ಸುದ್ದಿಮೂಲ ವಾರ್ತೆ ರಾಯಚೂರು, ನ.15:
ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಈ ಭಾಗದಲ್ಲಿ ಶಿಕ್ಷಣಕ್ಕೆೆ ಬುನಾದಿ ಹಾಕಿದ್ದೆೆ ತಾರಾನಾಥ ಶಿಕ್ಷಣ ಸಂಸ್ಥೆೆ ಎಂದು ವಿಜ್ಞಾಾನ ಮತ್ತು ತಂತ್ರಜ್ಞಾಾನ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ನಗರದ ತಾರಾನಾಥ ಶಿಕ್ಷಣ ಸಂಸ್ಥೆೆ ರಾಯಚೂರಿನ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾದ್ಯಾಾಲಯದ ಅಮೃತ ಮಹೋತ್ಸವ ಮತ್ತು ಬಂಕಟಲಾಲ್ ರಾಜಾರಾಮ್ ಬೂಬ್ ವಾಣಿಜ್ಯ ಮಹಾವಿದ್ಯಾಾಲಯದ ವಜ್ರ ಮಹೋತ್ಸವ ಸಮಾರೋಪದಲ್ಲಿ ಪಾಲ್ಗೊೊಂಡು ಮಾತನಾಡಿದರು. ಈ ಭಾಗದಲ್ಲಿನ ಬಡ, ದುರ್ಬಲ ವರ್ಗದವರಿಗೂ ಜ್ಞಾಾನ ಹಂಚುವಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆೆಯ ಸಮರ್ಪಿತ ಸೇವೆ ಅಪಾರವಾದುದು ಎಂದು ಶ್ಲಾಾಘಿಸಿದರು.
ಅಂದಿನ ದಿನಗಳಲ್ಲಿ ಸರ್ಕಾರ ಶಿಕ್ಷಣಕ್ಕಾಾಗಿ ಹೆಚ್ಚಿಿನ ಅನುದಾನ ನೀಡದ ಕಾರಣ ದಾನಿಗಳು ಮುಂದೆ ಬಂದು ಸಹಾಯ ಹಸ್ತ ನೀಡಿ ಸಂಸ್ಥೆೆ ಕಟ್ಟಿಿದ್ದು ಇಲ್ಲಿ ಕಲಿತ ಸಾವಿರಾರು ಸಂಖ್ಯೆೆಯ ವಿದ್ಯಾಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನುಭವದಿಂದ ಕಾರ್ಯನಿರ್ವಸುತ್ತಿಿದ್ದಾಾರೆ. ಇಂತಹ ಪ್ರತಿಷ್ಠಿಿತ ಸಂಸ್ಥೆೆಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ನೀಡುವಲ್ಲಿ ನಾನು ಕೂಡಾ ಸಹಕರಿಸುತ್ತೇನೆ ಎಂದರು.
ಕೆಕೆಆರ್ಡಿಬಿಯಿಂದ 5 ಸಾವಿರ ಕೋಟಿ ಅನುದಾನದಲ್ಲಿ 1250 ಕೋಟಿ ಹಣ ಶಿಕ್ಷಣಕ್ಕೆೆ ಮತ್ತು ಆರೋಗ್ಯಕ್ಕೆೆ ಬಳಸಬೇಕೆಂದರೆ. ಈ ಸಂಸ್ಥೆೆಗೆ ದಿ.ಎಮ್. ನಾಗಪ್ಪ ಮತ್ತು ಪಾರಸಮಲ್ ಸುಖಾಣಿ ಅವರ ಶ್ರಮ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮಿಿಕಿ ವಿಶ್ವ ವಿದ್ಯಾಾಲಯದ ಕುಲಸಚಿವ ಎ.ಚನ್ನಪ್ಪ ಸಮಾರೋಪ ಭಾಷಣ ಮಾಡಿ, ಭಾರತೀಯರಾದ ನಾವು ಸಂವಿಧಾನ 21ನೇ ಕಲಂನಲ್ಲಿ ಎಲ್ಲರಿಗೂ ಉಚಿತ ಮತ್ತು ಕಡ್ಡಾಾಯ ಶಿಕ್ಷಣ ವಿಷಯ ಅಳವಡಿಸಿಕೊಂಡಿದ್ದರೂ ಈ ಪ್ರದೇಶದಲ್ಲಿನ ಶೈಕ್ಷಣಿಕ ಸಾಧನೆ ನಿರೀಕ್ಷಿಿತ ಮಟ್ಟದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿರಂತರವಾದ ಶಿಕ್ಷಣವನ್ನು ನೀಡುತ್ತಾಾ ಬಂದಿರುವ ಹಲವು ಶಿಕ್ಷಣ ಸಂಸ್ಥೆೆಗಳಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆೆಯು ಒಂದಾಗಿದೆ ಎಂದು ಸಮಾರೋಪ ನುಡಿಗಳನ್ನಾಾಡಿದರು.
ಲೆಕ್ಕ ಪರಿಶೋಧಕ ಬೆಂಗಳೂರಿನ ಸಿ.ಎ ಮಧುಕರ ಮಾತನಾಡಿ, ಪ್ರಚಲಿತ ದಿನಗಳಲ್ಲಿ ಎಲ್ಲವೂ ಬೆರಳು ತುದಿಯಲ್ಲಿ ಲಭ್ಯವಾಗುತ್ತಿಿದ್ದು ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಯುವಕರು ಶಾಲಾ ಕಾಲೇಜುಗಳನ್ನು ಹೋಗುವುದನ್ನೆೆ ನಿಲ್ಲಿಸಿದ್ದಾಾರೆ ಆದರೆ ಇಷ್ಟೆೆಲ್ಲಾಾ ಅನುಕೂಲಗಳಿದ್ದರೂ ನಮಗೆ ಶಿಕ್ಷಣದ ಅವಶ್ಯಕತೆ ಬಹು ಮುಖ್ಯವಾಗಿದೆ. ಶಿಕ್ಷಣ ಕೇವಲ ತಂತ್ರಾಾಂಶದಿಂದ ಪಡೆಯಲು ಸಾಧ್ಯವಿಲ್ಲ, ಅನುಭವ ಮತ್ತು ಮನೋರಂಜನೆಯ ಮೂಲಕ ಪಡೆಯಬೇಕಾಗಿದೆ. ಈಗ ಭಾರತದ ವಿದ್ಯಾಾರ್ಥಿಗಳಿಗೆ ಅತಿ ಅನುಕೂಲಕರವಾಗಿರುವ ಸಮಯ ಮೌಲ್ಯ ಮತ್ತು ಕೌಶಲ್ಯಭರಿತ ಶಿಕ್ಷಣ ಪಡೆಯುವುದರ ಮೂಲಕ ಭಾರತ ಮತ್ತು ಜಗತ್ತಿಿಗೆ ಸೇವೆಯನ್ನು ಒದಗಿಸಬಹುದೆಂದರು.
ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದಲಿ :
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆೆಯ ವ್ಯಾಾಪ್ತಿಿಯಲ್ಲಿ ಬರುವ 140 ಕಾಲೇಜುಗಳಿವೆ. ಆದರೇ ಕೆಲವು ಕಾಲೇಜುಗಳಲ್ಲಿ ಸರಿಯಾದ ಕಟ್ಟಡ, ಕೊಠಡಿ ಇತರೆ ಸೌಲಭ್ಯಗಳು ಇಲ್ಲದಿದ್ದರೂ, ವಿದ್ಯಾಾರ್ಥಿಗಳು ತಮ್ಮ ಭವಿಷ್ಯ ಮುಂದೇನಾಗುವುದು ಎಂದು ಅರಿವಿಲ್ಲದೇ ವಿದ್ಯಾಾಭ್ಯಾಾಸ ಮಾಡುತ್ತಿಿದ್ದಾಾರೆ ವಿಶ್ವ ವಿದ್ಯಾಾಲಯ ಈ ಬಗ್ಗೆೆ ಗಮನಿಸಬೇಕು ಎಂದರು.
ಇಂದಿನ ಶಿಕ್ಷಣದ ಪದ್ದತಿಯಲ್ಲಿ ಬಹಳಷ್ಟು ಸುಧಾರಣೆ ಆಗಬೇಕಾಗಿದೆ ಸರ್ಕಾರದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿಿರುವ ನೌಕರರ ಮಕ್ಕಳು ಕಡ್ಡಾಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಅಭ್ಯಾಾಸ ಮಾಡಬೇಕೆಂದು ಹೇಳಿದರು. ಮಹಾವಿದ್ಯಾಾಲಯದ ಆವರಣದಲ್ಲಿ ಒಳಾಂಗಣ ಕ್ರೀೆಡಾಂಗಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು ಈ ನಿರ್ಮಾಣಕ್ಕಾಾಗಿ ತಮ್ಮೆೆಲ್ಲರ ಸಹಾಯ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಇದೇ ವೇಳೆ ಬಿ.ಆರ್.ಬಿ ಕಾಲೇಜಿನ 1983-84ನೇ ಸಾಲಿನ ಹಳೆಯ ವಿದ್ಯಾಾರ್ಥಿಗಳು ಅಧ್ಯಕ್ಷ ಪಾರಸಮಲ್ ಸುಖಾಣಿ ಅವರಿಗೆ ಸನ್ಮಾಾನಿಸಿ ಗೌರವಿಸಿದರು.
್ಯೂಷನ್ 2ಎಸ್-2025 ಕಲಾ ಮತ್ತು ವಿಜ್ಞಾಾನ ಭಾಗಗಳಿಂದ ವಸ್ತು ಪ್ರರ್ದಶನ, ಕ್ರೀಡಾಕೂಟ ವಿಜೇತ ವಿದ್ಯಾಾರ್ಥಿಗಳಿಗೆ ನಗದು ಬಹುಮಾನ,ಪದಕ, ಟ್ರೋೋಫಿ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಸ್ಟ್ಯಾಾಂಡ್ ಅಪ್ ಕಾಮಿಡಿಯ ರಾಘವೇಂದ್ರ ಆಚಾರ್ಯ ಇವರು ಹಾಸ್ಯ ಮಾಡುವ ಮೂಲಕ ಎಲ್ಲರ ಮನರಂಜಿಸಿದರು. ಜೊತೆಗೆ ವಿದ್ಯಾಾರ್ಥಿಗಳು ಮತ್ತು ಪ್ರಾಾಧ್ಯಾಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಿಯಾಗಿ ಜರುಗಿದವು.
ವೇದಿಕೆಯ ಮೇಲೆ ಸಂಸ್ಥೆೆಯ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಖಜಾಂಚಿ ಪುರುಷೋತ್ತಮದಾಸ ಇನ್ನಾಾಣಿ, ಎಲ್ವಿಡಿ ಕಾಲೇಜಿನ ವ್ಯವಸ್ಥಾಾಪಕ ಮಂಡಳಿ ಕಾರ್ಯದರ್ಶಿ ಜಟ್ರಂ ಶ್ರೀನಿವಾಸ, ಪ್ರಾಾಚಾರ್ಯರಾದ ಶರಣಗೌಡ ಬಿ.ಹೆಚ್, ಬಿಆರ್ಬಿ ಕಾಲೇಜಿನ ಪ್ರಾಾಚಾರ್ಯ ಸಂದೀಪ ಕಾರಭಾರಿ , ಸಂಸ್ಥೆೆ ಪದಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳಿದ್ದರು.

