ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಲು ಅನುದಾನದ ಕೊರತೆ ಇಲ್ಲ. ಆದರೆ, ಮಕ್ಕಳ ಸಂಖ್ಯೆೆಯ ಬಗ್ಗೆೆಎಸ್ಡಿಎಂಸಿಗಳು ವಿವರ ನೀಡುವುದು ತಡೆವಾಗಿದ್ದೇ ಪೂರೈಕೆ ವಿಳಂಬಕ್ಕೆೆ ಕಾರಣ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದ ವಿಧಾನಸಭೆಯ ಪ್ರಶ್ನೋೋತ್ತರ ಕಲಾಪದಲ್ಲಿ ಹುಬ್ಬಳ್ಳಿಿ-ಧಾರವಾಡ ಕೇಂದ್ರೀೀಯ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಚುಕ್ಕೆೆ ಗುರುತಿನ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಶೂ-ಸಾಕ್ಸ್ ವಿತರಣೆಗಾಗಿ 117 ಕೋಟಿ ರೂ. ಮೀಸಲಿಡಲಾಗಿದೆ. ಹಣದ ಕೊರತೆ ಇಲ್ಲ ಎಂದರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆೆಗೆ ಅನುಗುಣವಾಗಿ ಶೂ-ಸ್ಸಾೃ್ ವಿತರಣೆ ಜವಾಬ್ದಾಾರಿಯನ್ನು ಎಸ್ಡಿಿಎಂಸಿಗಳಿಗೆ ವಹಿಸಲಾಗಿದೆ. ಅವರು ಮಕ್ಕಳ ಸಂಖ್ಯೆೆಯನ್ನು ನೀಡಬೇಕು. ಅದಕ್ಕೆೆ ತಕ್ಕಂತೆ ಅವರ ಖಾತೆಗೇ ಹಣ ಜಮೆ ಮಾಡಲಾಗುತ್ತದೆ. ಆದರೆ, ಮಕ್ಕಳ ದಾಖಲಾತಿ ಆಗಸ್ಟವರೆಗೂ ನಡೆಯುತ್ತದೆ. ಬಳಿಕ ಎಸ್ಡಿಿಎಂಸಿಗಳು ಅದರ ವಿವರವನ್ನು ಸಲ್ಲಿಕೆ ಮಾಡುವಲ್ಲಿ ವಿಳಂಬ ಅಗಿದೆ. ಇದರಿಂದ ಕೆಲವು ಕಡೆ ವಿತರಣೆ ತಡವಾಗಿ ಆಗಿದೆ.
ಸದ್ಯಕ್ಕೆೆ ಬಹುತೇಕ ರಾಜ್ಯಾಾದ್ಯಂತ ಶೂ-ಸಾಕ್ಸ್ ವಿತರಣೆ ಪೂರ್ಣಗೊಂಡಿದೆ. ಎಲ್ಲಿಯಾದರೂ ನಿರ್ದಿಷ್ಟ ದೂರುಗಳು ಇದ್ದರೆ ಅಂತಹ ಕಡೆಗಳಲ್ಲಿ ಶೀಘ್ರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
ಹುಬ್ಬಳ್ಳಿಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಪ್ರಾಾಥಮಿಕ ಶಾಲಾ ಶಿಕ್ಷಕರ ಹಾಗೂ ಸರ್ಕಾರಿ ಪ್ರೌೌಢ ಶಾಲಾ ಶಿಕ್ಷಕರ ವಿಷಯವಾರು ಹಾಗೂ ಭಾಷಾವಾರು ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲು ಅನುಮತಿ ನೀಡಲಾಗಿದೆ. 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ 5000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿಿದೆ. ಶಾಲೆಗಳಲ್ಲಿ ಸ್ಮಾಾರ್ಟ್ ಕ್ಲಾಾಸ್, ಕಂಪ್ಯೂೂಟರ್ ಲ್ಯಾಾಬ್, ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಮಕ್ಕಳ ಶೂ – ಸ್ಸಾೃ್ ಪೂರೈಕೆ ವಿಳಂಬಕ್ಕೆ ಎಸ್ಡಿಎಂಸಿಗಳೇ ಕಾರಣ: ಮಧು ಬಂಗಾರಪ್ಪ

