ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
2025-26ನೇ ಸಾಲಿನ ರಾಜ್ಯ ವಲಯ ಮುಂದುವರೆದ ಯೋಜನೆಯಡಿ ಸರ್ಕಾರಿ ಶಾಲಾ ಶೌಚಾಲಯ ನಿರ್ಮಾಣಕ್ಕಾಾಗಿ 9000 ಲಕ್ಷ ರೂ.ಗಳ ಅನುದಾನ ನಿಗದಿಯಾಗಿದ್ದು, 6328 ಲಕ್ಷ ರೂ. ಗಳ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಕಾರ್ಯಕ್ಕೆೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನಸಭೆಯ ಕಲಾಪದ ಪ್ರಶ್ನೋೋತ್ತರ ವೇಳೆಯಲ್ಲಿ ಕುಂದಗೋಳ ವಿಧಾನಸಭೆಯ ಸದಸ್ಯರ ಪ್ರಶ್ನೆೆಗೆ ಉತ್ತರಿಸಿದ ಸಚಿವರು ಕುಂದಗೋಳ ಕ್ಷೇತ್ರದ 2 ಸರ್ಕಾರಿ ಶಾಲೆಗಳಿಗೆ 8 ಲಕ್ಷ ರೂ. ಗಳ ಅನುದಾನದಲ್ಲಿ ಶೌಚಾಲಯಕ್ಕೆೆ ಮಂಜೂರು ಮಾಡಲಾಗಿದೆ. ಬಾಕಿ 2671 ಲಕ್ಷ ರೂ.ಗಳ ಅನುದಾನದಲ್ಲಿ ಅಗತ್ಯತೆ ಮತ್ತು ಆದ್ಯತೆಯನುಸಾರ ಶೌಚಾಲಯ ನಿರ್ಮಾಣಕ್ಕೆೆ ಕ್ರಿಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದರು.
ಸಮಗ್ರ ಶಿಕ್ಷಣ-ಕರ್ನಾಟಕ ಯೋಜನೆಯಡಿ 2025-26ನೇ ಸಾಲಿನಲ್ಲಿ ಶಾಲಾ ಶೌಚಾಲಯ ನಿರ್ಮಾಣಕ್ಕಾಾಗಿ 1272 ಲಕ್ಷ ರೂ.ಗಳ ಅನುದಾನ ನಿಗದಿಯಾಗಿದ್ದು, ಅಗತ್ಯತೆ ಮತ್ತು ಆದ್ಯತೆಯನುಸಾರ ಕ್ರಿಿಯಾ ಯೋಜನೆ ಸಿದ್ದಪಡಿಸಿದ್ದು ಅನುಮೋದನೆಗೊಳ್ಳುವ ಪ್ರಕ್ರಿಿಯೆಯಲ್ಲಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಮಧು ಬಂಗಾರಪ್ಪ

