ಸುದ್ಧಿ ಮೂಲ ವಾರ್ತೆ.
(ನಂದಗುಡಿ)ಹೊಸಕೋಟೆ,ಆ.22:ನರೇಗಾ ಮೂಲಕ ಹೊಲದಲ್ಲಿ ಸಸಿನೆಡುವುದು, ದನ ಮತ್ತು ಕುರಿ ದೊಡ್ಡಿಗಳ ನಿರ್ಮಾಣ, ಹೊಲದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಕಷಿ ಹೊಂಡ ನಿರ್ಮಾಣ ಸೇರಿ ನಾನಾ ಯೋಜನೆಗಳಿವೆ. ಉದ್ಯೋಗ ಖಾತರಿಯ ಕೂಲಿ ಕಾರ್ಡ್ ಪಡೆಯದೇ ಇರುವ ಕಾರ್ಮಿಕರು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಮಾಹಿತಿ ಮತ್ತು ಶಿಕ್ಷಣ ತಾಲೂಕು ಸಂಯೋಜಕರಾದ ಮುದುಕುಮಾರ್ ಹೇಳಿದರು.
ಅವರು ಹೊಸಕೋಟೆ ತಾಲ್ಲೂಕಿನ ನಂದಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೋಜ್ಗಾರ್ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು.ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಿಗಬಹುದಾದ ಸೌಲಭ್ಯ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಕುರಿತು ವಿವರಿಸಿದರು.
ಜೊತೆಗೆ ನರೇಗಾ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಆಯುಕ್ತಾಲಯದಿಂದ ಹೆಚ್ಚಿದಲಾದ ನರೇಗಾದಡಿಯ ಕಾಮಗಾರಿಗಳ ಧನ ಸಹಾಯದ ಕುರಿತು ಮಾಹಿತಿ ನೀಡಿದರು.
ಹಾಗೇನೆ ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಉದ್ಯೋಗ ಚೀಟಿ ಪಡೆಯಬೇಕು. ಆ ಮೂಲಕ ಉದ್ಯೋಗ ಹಾಗೂ ವೈಯಕ್ತಿಕ ಕಾಮಗಾರಿ ಪಡೆದುಕೊಳ್ಳಲು ಗ್ರಾಮ ಪಂಚಾಯತಿಗೆ ಫಾರ್ಮ್ ಸಂಖ್ಯೆ 6 ರಲ್ಲಿ ಅರ್ಜಿ ಸಲ್ಲಿಸಬೇಕು.
ತದನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉದ್ಯೋಗ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 100 ದಿನ ಕೂಲಿ ಕೆಲಸ ಕೊಡಲು ಹಾಗೂ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗೆ ಸಿಗಬೇಕಾದ ವೈಯಕ್ತಿಕ ಕಾಮಗಾರಿ ಒದಗಿಸಲು ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್ ನರೇಗಾ ಗ್ರಾಮ ತಾಂತ್ರಿಕ ಸಹಾಯಕರಾದ ನಂದನ್ ಕುಮಾರ್ ಗಣಕಯಂತ್ರ ನಿರ್ವಹಣ ನಯನ ಪಂಚಾಯಿತಿ ಕಾಯಕ ಮಿತ್ರ ದಿವ್ಯ ಹಾಗೂ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.