ಸುದ್ದಿಮೂಲ ವಾರ್ತೆ ಬೀದರ್, ನ.06:
ಜಿಲ್ಲೆಯಲ್ಲಿ ಅತಿವೃಷ್ಟಿಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸಮರ್ಪಕ ಪರಿಹಾರ ಸಿಗುವಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಿ ಈಶ್ವರ್ ಖಂಡ್ರೆೆ ಅವರ ಆಡಳಿತ ವೈಲ್ಯದಿಂದ ಮಹಾಮೋಸ ನಡೆದಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖುಬಾ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಿಕಾ ಪ್ರಕಟಣೆ ಹೊರಡಿಸಿರುವ ಅವರು, ರೈತರ ಬೆಳೆ ಹಾನಿಗೆ ಕೇವಲ 25% ಪರಿಹಾರ ಮಾತ್ರ ದೊರೆತಿದೆ. ರಾಜ್ಯ ಸರ್ಕಾರದಲ್ಲಿ ದುಡ್ಡಿಿಲ್ಲಾ, ನಮಗೆಲ್ಲಾ ಕಡಿಮೆ ಬೆಳೆ ಹಾನಿಯಾಗಿದೆ ಮತ್ತು ಪ್ರತಿ ತಾಲೂಕಿಗೆ ಇಷ್ಟೆೆ ಎಕರೆ ಹಾಳಾಗಿದೆ ಎಂದು ವರದಿ ನೀಡಬೇಕು ಎಂದು ಟಾರ್ಗೆಟ್ ಫಿಕ್ಸ್ ಮಾಡಿ, ಪ್ರತಿ ಊರಿಗೆ, ಹೋಬಳಿಗೆ ಮತ್ತು ತಾಲೂಕಿಗೆ ಇಂತಿಷ್ಟೆೆ ಬೆಳೆ ಹಾನಿ ವರದಿ ಮಾಡಿಕೊಡಬೇಕೆಂದು ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಕೆಳಹಂತದ ಅಧಿಕಾರಿಗಳಿಗೆ ಒತ್ತಡ ಹಾಕಲಾಗಿದೆ.
ರೈತರ ಹಾಳಾದ ಬೆಳೆಗಳಿಗೆ ಪೂರ್ತಿ ಪರಿಹಾರ ಬಂದಿರುವುದಿಲ್ಲ, ಬೆಳೆ ಹಾನಿ ಪರಿಹಾರದಲ್ಲೂ ಸಿದ್ದರಾಮಯ್ಯನವರ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಿ ಈಶ್ವರ ಖಂಡ್ರೆೆ ರೈತರಿಗೆ ಮಹಾ ಮೋಸ ಮಾಡಿದ್ದಾರೆ ಎಂದು ಖೂಬಾ ಆರೋಪಿಸಿದ್ದಾರೆ.
ಸಲ್ ಬಿಮಾ ಯೋಜನೆಯಡಿ ಸದ್ಯ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿಿತಿ ಅಡಿಯಲ್ಲಿ ಬೀದರ ಜಿಲ್ಲೆಯಲ್ಲಿ ತೊಗರಿ ಬೆಳೆ ಆಯ್ಕೆೆಯಾಗಿದ್ದು, ಜಿಲ್ಲೆಯ 78,274 ತೊಗರಿ ಬೆಳೆದಿದ್ದ ರೈತರಿಗೆ ರೂ. 36.74 ಕೋಟಿ ಪರಿಹಾರ ಜಮೆಯಾಗಿದೆ. ಇದು ಸಲ್ ಬಿಮಾ ಯೋಜನೆಯ ನಿಯಮವಾಗಿದೆ, ಇದರಲ್ಲಿ ತಂದೆ ಮಕ್ಕಳ ಪಾತ್ರ (ಸಚಿವ ಈಶ್ವರ್ ಖಂಡ್ರೆೆ -ಸಂಸದ ಸಾಗರ್ ಖಂಡ್ರೆೆ) ಇರುವುದಿಲ್ಲಾ. ಮುಂದಿನ ತಿಂಗಳು ಸ್ಥಳೀಯ ವಿಪತ್ತು ಅಡಿಯಲ್ಲಿ ಉಳಿದ ಎಲ್ಲಾ ಬೆಳೆಗಳ ರೈತರಿಗೆ ಇನ್ನು ಹೆಚ್ಚಿಿನ ಪರಿಹಾರ ಜಮೆಯಾಗಲಿದೆ. ರಾಜ್ಯ ಸರ್ಕಾರ ರೈತರನ್ನು ಕೈಬಿಟ್ಟರು, ಸಲ್ ಭೀಮಾ ಯೋಜನೆ ರೈತರ ಜೊತೆ ನಿಲ್ಲಲಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಖೂಬಾ ತಿಳಿಸಿದ್ದಾರೆ.

