ಸುದ್ದಿಮೂಲ ವಾರ್ತೆ ದೇವದುರ್ಗ, ಅ.07:
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ನಮ್ಮ ಎಸ್.ಟಿ.ಜನಾಂಗದವರಿಗೆ ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಿ ಹೊಂದಲು ಹಲವಾರು ಯೋಜನೆಗಳಿದ್ದು, ಸುಮಾರು 40ಸಾವಿರ ಕೋಟಿ ಮೀಸಲು ಅನುದಾನವಿದ್ದು, ಸಮಾಜದ ಬಂಧುಗಳು ಸರಕಾರದ ಯೋಜನೆ ಮತ್ತು ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸ್ಥಳೀಯ ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಅವರು ಮಂಗಳವಾರ ತಾಲೂಕ ಆಡಳಿತದಿಂದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯೋೋತ್ಸವದ ಅಂಗವಾಗಿ ಆಯೋಜಿಸಿದ ವೇದಿಕೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ, ಮಹಾನ ಮಾನವತವಾದಿ ಶ್ರೀ ಮಹರ್ಷಿ ವಾಲ್ಮೀಕಿ ಇವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಅವರು, ನಾವು ಬೇಡರು ಹುಟ್ಟಿಿನಿಂದಲೇ ನಾಯಕತ್ವ ಇದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇ ಸರಕಾರ ಬರಲಿ, ಹೋಗಲಿ, ನಮ್ಮ ಪಾಲು ನಮಗೆ ಸರಿಯಾಗಿ ಸಿಗಬೇಕು, ಸರಕಾರದ ವಿವಿಧ ಯೋಜನೆಗಳು ಮತ್ತು ಅನುದಾನವನ್ನು ನಮ್ಮ ಸಮಾಜದವರಿಗೆ ಪ್ರಾಾಮಾಣೀಕವಾಗಿ ಅಧಿಕಾರಿಗಳು ಮುಟ್ಟಿಿಸಬೇಕೆಂದು ಕರೆಮ್ಮ ಜಿ.ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು, ಸಂಪಾದಕರಾದ ಭೀಮರಾಯ ಹದ್ದಿನಾಳ ಉಪನ್ಯಾಾಸ ನೀಡಿದರೆ, ಸಮಾಜದ ತಾಲೂಕ ಅಧ್ಯಕ್ಷ ಮಾನಸಯ್ಯ ನಾಯಕ, ಎ.ಪಿ.ಎಂ.ಸಿ. ಅಧ್ಯಕ್ಷ ಆದನಗೌಡ ಪಾಟೀಲ್, ಗ್ಯಾಾರಂಟಿ ಯೋಜನೆ ಅನುಷ್ಠಾಾನದ ಅಧ್ಯಕ್ಷ ಲಕ್ಷ್ಮಣ ಜ್ಯೋೋತಿ, ತಹಶೀಲ್ದಾಾರ ನಾಗಮ್ಮ ಎಮ್.ಕೆ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿಿ, ಪುರಸಭೆ ಮುಖ್ಯಾಾಧಿಕಾರಿ ಹಂಪಯ್ಯ ಕೆ. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಮಹಾದೇವಯ್ಯ, ತಾಲೂಕ ಪ.ವರ್ಗಗಳ ಕಲ್ಯಾಾಣಾಧಿಕಾರಿ ಮಂಜುಳಾ ಬಿ. ಅಸುಂಡಿ, ವೃತ್ತ ನಿರೀಕ್ಷಕರಾದ ಮಂಜುನಾಥ ಎಸ್. ಶಿವರಾಜ ಪೂಜಾರಿ, ಹನುಮಂತ್ರಾಾಯ ಶಾಖೆ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.