ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.28 :ತಾಲೂಕಿನ ನಂದಗುಡಿ ಹೋಬಳಿಯ ಹಳೇಊರು ವಾಲ್ಮೀಕಿ ಯುವಕರ ಬಳಗ ವಾಲ್ಮೀಕಿ ಜಯಂತಿ ಅಂಗವಾಗಿ ಭಾವಚಿತ್ರವನ್ನು ಗಂಧದ ರಥದಲ್ಲಿಟ್ಟು, ಅಲಂಕಾರಿಕ ಹೂಗಳಿಂದ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಚಂದ್ರಪ್ಪ, ಕಮಲ ಶಿವು, ಮಾಜಿ ಸದಸ್ಯ ರವಿ, ಎಂಪಿಸಿಎಸ್ ಸದಸ್ಯ ಗಂಗಾಧರ್, ವಾಲ್ಮೀಕಿ ಯುವಕರ ಬಳಗದ ದಿನ್ನಹಳ್ಳಿ ಶ್ರೀನಿವಾಸ್ ಮಂಜುನಾಥ್, ದಿನೇಶ್, ವೆಂಕಟೇಶ್, ಮುನೇಗೌಡ, ಹರೀಶ್ ಕುಮಾರ್, ಅಪ್ಪಣ್ಣ, ನವೀನ್, ರವಿಕುಮಾರ್, ಮಹೇಶ್, ನರಸಿಂಹ, ನಾಗರಾಜಪ್ಪ ಹಾಗೂ ಯುವಕರು ಇದ್ದರು.