ಎಚ್.ಎಂ. ಮಹೇಂದ್ರ ಕುಮಾರ್ ಬಳ್ಳಾಾರಿ, ಜ.03:
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆೆ ಕ್ಷಣಗಣನೆ ಪ್ರಾಾರಂಭವಾಗಿದ್ದು ಕ್ಷುಲ್ಲಕ ಕಾರಣಕ್ಕಾಾಗಿ ಬ್ಯಾಾನರ್ ಗಲಭೆ ನಡೆದು ದಿನಗಣನೆಯ ಹಂತಕ್ಕೆೆ ತಲುಪಿದೆ. ಗುರುವಾರ ಸಂಜೆಯ ಗುಂಪು ಗಲಭೆ, ದೊಂಬಿ, ಗಾಳಿಯಲ್ಲಿ ಗುಂಡು, ಪರಸ್ಪರ ಕಲ್ಲು ತೂರಾಟ, ಬಡಿಗೆಗಳ ಬಡಿದಾಟ ಹೀಗೇ ಏನೆಲ್ಲಾಾ ಗಲಭೆಗಳು ಯುವಕನನ್ನು ಬಲಿ ಪಡೆದು, ಬಿಜೆಪಿ – ಕಾಂಗ್ರೆೆಸ್ ಶಾಸಕರ ಕೆಸರೆರಚಾಟದ ಹಂತ ತಲುಪಿದೆ.
ಮಹರ್ಷಿ ವಾಲ್ಮಿಿಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸರ್ವ ಜನರ ಹಬ್ಬವನ್ನಾಾಗಿಸಲು ನಗರ ಶಾಸಕ ನಾರಾ ಭರತರೆಡ್ಡಿಿ ಅವರು ಜಿಲ್ಲೆೆಯ ಸಮಸ್ತ ವಾಲ್ಮೀಕಿ ಮುಖಂಡರನ್ನು – ಎಲ್ಲಾಾ ಪಕ್ಷಗಳ ಕಾರ್ಯಕರ್ತರನ್ನು ಆಹ್ವಾಾನಿಸಿದ್ದರು. ಎಲ್ಲಾಾ ಪಕ್ಷಗಳವರ ವಾಲ್ಮೀಕಿ ಸಮಾಜದ ಮುಖಂಡರ ವಿವಿಧ ಹಂತಗಳ ಸಭೆಗಳನ್ನೂ, ರಾಜ್ಯಮಟ್ಟದ ಲೀಡರ್ಗಳನ್ನೂ, ವಾಲ್ಮೀಕಿ ಪೀಠದ ಶ್ರೀಗಳನ್ನು ಆಹ್ವಾಾನಿಸಿದ್ದರು. ಒಂದರ್ಥದಲ್ಲಿ ಪರೋಕ್ಷವಾಗಿ ‘ವಾಲ್ಮೀಕಿಗಳ ಮುಖಂಡ’ರಾಗತೊಡಗಿದ್ದರು.
ವಾಲ್ಮೀಕಿ ಪುತ್ಥಳಿಯನ್ನು ಸಾವಿರಾರು ಮತ್ತೈದೆಯರ ಜೊತೆಯಲ್ಲಿ ಪೂರ್ಣಕಳಷ, ಕುಂಬದ ಜೊತೆಯಲ್ಲಿ ಕೋಟೆ ಆಂಜಿನೇಯ ದೇವಸ್ಥಾಾನದಿಂದ ವಾಲ್ಮೀಕಿ ಮಹಿಳೆಯರು ಮತ್ತು ಯುವತಿಯರು, ಪಕ್ಷಾತೀತವಾಗಿ ಮುಖಂಡರು ಸ್ವಾಾಗತಿಸಿದ್ದರು. ಈ ಸಮಾರಂಭದಲ್ಲಿ ಬಿಜೆಪಿಯ ಮಾಜಿ ಸಂಸದ ಸಣ್ಣ ಕ್ಕೀರಪ್ಪ, ಓಬಳೇಶ್ ಇನ್ನಿಿತರರು ಸಕ್ರಿಿಯವಾಗಿ ಪಾಲ್ಗೊೊಂಡಿದ್ದರು. ಕಾಂಗ್ರೆೆಸ್ ಪಕ್ಷದ ವಾಲ್ಮೀಕಿ ಮುಖಂಡರು ಕೂಡ ಪರಸ್ಪರ ಆಲಿಂಗನ ಮಾಡಿಕೊಂಡು, ಸಮಾರಂಭವನ್ನು ನಾಡಹಬ್ಬವಾಗಿ ಆಚರಿಸಲು ಉತ್ಸಾಾಹಿಗಳಾಗಿದ್ದರು.
ಪುತ್ಥಳಿಯ ಅನಾವರಣದ ಕ್ಷಣಗಣನೆ ಪ್ರಾಾರಂಭವಾಗಿತ್ತು. ಹೊಸ ವರ್ಷದ ಆಚರಣೆಯ ಉತ್ಸಾಾಹದಲ್ಲಿದ್ದ ಯುವಕರು ಅನಗತ್ಯವಾಗಿ ‘ಪ್ರಚೋದನೆ’ಗೆ ಒಳಪಟ್ಟು ಕ್ಷುಲ್ಲಕ ವಿಚಾರವನ್ನು ಪ್ರತಿಷ್ಠೆೆಯ ವಿಷಯವನ್ನಾಾಗಿಸಿ ಇಡೀ ಗಲಭೆಗೆ ಕಾರಣವಾಯಿತು. ಪೊಲೀಸ್ ವೈಲ್ಯ ಸ್ಪಷ್ಟವಾಗಿದ್ದರೂ, ಘಟನಾವಳಿಗಳು ಬಿಜೆಪಿ – ಕಾಂಗ್ರೆೆಸ್ ಪಾಳಯದಲ್ಲಿ ತೀವ್ರ ಅಸಮಾಧಾಗಳನ್ನು ಮೂಡಿಸಿ ‘ಸೇರಿಗೆ ಸವ್ವಾಾಸೇರು’ ಎನ್ನುವಂತೆ ಪರಿಸ್ಥಿಿತಿ ನಿರ್ಮಾಣ ಮಾಡಿದೆ.
ಪೊಲೀಸ್ ಮೂಲಗಳ ಪ್ರಕಾರ, ‘ಬ್ಯಾಾನರ್ ಕಟ್ಟುವ ವಿಚಾರ ಘಟನೆ ನಡೆಯುವ 3-4 ಹಿಂದಿನಿಂದಲೇ ನಡೆದಿದೆ. ಆದರೆ, ಬಳ್ಳಾಾರಿ ನಗರ ಶಾಸಕ ನಾರಾ ಭರತರೆಡ್ಡಿಿ ಅವರ ಆಪ್ತ ಗೆಳೆಯ ಸತೀಶ್ ರೆಡ್ಡಿಿ ಈ ವಿಚಾರವನ್ನು ಅನಗತ್ಯವಾಗಿ ಪ್ರತಿಷ್ಠೆೆಯನ್ನಾಾಗಿ ಪರಿಗಣಿಸಿದ್ದೇ ಇಡೀ ಘಟನೆಗೆ ತಿರುವು ಪಡೆಯಿತು. ಓರ್ವ ಯುವಕನ ಜೀವ ಪಡೆಯಿತು. ಸಂಭ್ರಮೋತ್ಸವವಾಗಿ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ – ಅವಘಡಗಳ ಜೊತೆ ತಳಕು ಹಾಕಿಕೊಳ್ಳುವಂತಾಯಿತು’ ಎಂದು ಹೇಳಲಾಗಿದೆ.
ಶಾಸಕ ಜಿ. ಜನಾರ್ಧನರೆಡ್ಡಿಿ ಮತ್ತು ಶಾಸಕ ನಾರಾ ಭರತರೆಡ್ಡಿಿ ಅವರ ಆಪ್ತ ಸತೀಶ್ ರೆಡ್ಡಿಿ ಅವರ ಮಧ್ಯೆೆ ವೈಯಕ್ತಿಿಕ ಪ್ರತಿಷ್ಠೆೆಯ ವಿವಾದವಿದೆ. ಜಿ. ಜನಾರ್ಧನರೆಡ್ಡಿಿ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತರು. ಸಚಿವರಾಗಿ – ಶಾಸಕರಾಗಿ ಸರ್ಕಾರ, ಆಡಳಿತ ಮತ್ತು ಕಾರ್ಯಕರ್ತರು, ಯುವಶಕ್ತಿಿಯ ಮನಸ್ಥಿಿತಿಯನ್ನು ಚೆನ್ನಾಾಗಿ ತಿಳಿದ ಅನುಭವಿಗಳು. ಜಿ. ಜನಾರ್ಧನರೆಡ್ಡಿಿ ಅವರಿಗೆ ಸತೀಶ್ ರೆಡ್ಡಿಿ ಅದ್ಹೇಗೆ ಸರಿ? ಅದ್ಹೇಕೆ, ಜನಾರ್ಧನರೆಡ್ಡಿಿ ಅವರ ವಿರುದ್ಧ ಸತೀಶರೆಡ್ಡಿಿಯ ದ್ವೇಷ? ಎನ್ನುವ ಪ್ರಶ್ನೆೆಗಳಿಗೆ ಎಲ್ಲಿಯೂ ಸ್ಪಷ್ಟವಾದ ಉತ್ತರವಿಲ್ಲ. ಆದರೂ, ಬಳ್ಳಾಾರಿಯ ಇತ್ತೀಚಿನ ಪ್ರತಿ ರಾಜಕೀಯ ವಿವಾದಕ್ಕೆೆ ಈ ಇಬ್ಬರ ‘ವ್ಯಕ್ತಿಿ ಪ್ರತಿಷ್ಠೆೆ’ ಕೇಂದ್ರಬಿಂದು ಎನ್ನುವುದನ್ನು ಸ್ಪಷ್ಟ. ಬ್ಯಾಾನರ್ ವಿಚಾರದಲ್ಲೂ ಇವರ ‘ವ್ಯಕ್ತಿಿ ಪ್ರತಿಷ್ಠೆೆ’ ಮರುಕಳಿಸಿದೆ.
ಪರಿಸ್ಥಿಿತಿಯನ್ನು ತಿಳಿಗೊಳಿಸಿ ಶಾಂತಿ ನಿರ್ಮಿಸಬೇಕಾಗಿದ್ದ ಪೊಲೀಸರು ಹೊಸಪೇಟೆಯಲ್ಲಿದ್ದ ಶಾಸಕ ನಾರಾ ಭರತರೆಡ್ಡಿಿ ಅವರಿಗೆ ‘ಬಳ್ಳಾಾರಿಗೆ ಬನ್ನಿಿ’ ಎಂದು ದಿಕ್ಕು ತಪ್ಪಿಿಸಿದರೆ? ವಾಲ್ಮೀಕಿ ಜನಾಂಗದಲ್ಲಿ ಹುಟ್ಟದೇ ಇದ್ದರೂ ವಾಲ್ಮೀಕಿಗಳ ಮನಸೂರೆಗೊಂಡಿದ್ದ ನಾರಾ ಭರತರೆಡ್ಡಿಿಗೆ ಕಳಂಕ ತರಲು ಚಿಂತಿಸುತ್ತಿಿದ್ದವರು ಬ್ಯಾಾನರ್ ಹಾಕುವ ವಿವಾದವನ್ನು ಗಲಭೆಗೆ ಯಶಸ್ವಿಿಯಾಗಿ ಬಳಸಿಕೊಂಡರೇ ಎನ್ನುವ ಯಕ್ಷಪ್ರಶ್ನೆೆಗಳಿಗೆ ತನಿಖೆಯಲ್ಲಿ ಸ್ಪಷ್ಟ ಉತ್ತರ ಸಿಗಬೇಕಿದೆ.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಶುಕ್ರವಾರ, ‘ರಾಜಕೀಯ ನಿಂತ ನೀರಲ್ಲ. ಶಾಸಕ ಸ್ಥಾಾನ ಶಾಶ್ವತವಲ್ಲ. ಹರಿಯುವ ನೀರಿನಂತೆ ಇರುವ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ’ ಎಂದು ವೈರಾಗ್ಯದ ಮಾತುಗಳನ್ನಾಾಡಿದ್ದಾಾರೆ. ಆದರೆ, ಗುರುವಾರ ಸಂಜೆ ಘಟನೆ ನಡೆದ ಸ್ಥಳದಲ್ಲಿ ಆಪ್ತರ ಜೊತೆಯಲ್ಲಿದ್ದರೂ ಗಲಭೆ ನಿಲ್ಲಿಸಲಾಗದೇ – ಅಸಹಾಯಕರಾಗಿದ್ದು ಪರಿಸ್ಥಿಿತಿಯ ತೀವ್ರತೆಯನ್ನು ಸಾಕ್ಷೀಕರಿಸಿದ್ದು, ಯುವ ಸಮೂಹದ ಪ್ರಚೋದನೆಯ ಶಕ್ತಿಿಯ ತೀವ್ರತೆಯನ್ನು ತಿಳಿಸುತ್ತದೆ.
ಪ್ರಸ್ತುತ ಪರಿಸ್ಥಿಿತಿ ಬಳ್ಳಾಾರಿ ರಾಜಕಿಯ ಬೂದಿಮುಚ್ಚಿಿದ ಕೆಂಡ. ಮಹರ್ಷಿ ವಾಲ್ಮೀಕಿ ವೃತ್ತದಲ್ಲಿಯ ಪುತ್ಥಳಿಯ ಅನಾವರಣಕ್ಕೆೆ ದಿನಗಣನೆ ಪ್ರಾಾರಂಭವಾಗಿದೆ. ಒಡೆದ ಮನಸ್ಸುಗಳಾಗಿದ್ದ ಬಿಜೆಪಿಯ ಬಿ. ಶ್ರೀರಾಮುಲು, ಜಿ. ಜನಾರ್ಧನರೆಡ್ಡಿಿ, ಜಿ. ಸೋಮಶೇಖರರೆಡ್ಡಿಿ ಅವರು ಈ ಘಟನೆಯ ಹಿನ್ನಲೆಯಲ್ಲಿ ‘ಒಗ್ಗಟ್ಟ’ನ್ನು ತೋರಿಸುತ್ತಿಿರುವುದು ಗಾಲಿ ಕುಟುಂಬದ ಆಪ್ತರಿಗೂ, ಬಿಜೆಪಿಯ ಮುಖಂಡರು -ಕಾರ್ಯಕರ್ತರಲ್ಲೂ ಖುಷಿ ಮೂಡಿಸಿ, ಈ ಘಟನೆಯು ಪಕ್ಷವನ್ನು ಬಲಪಡಿಸಲು – ಭವಿಷ್ಯದಲ್ಲಿ ಅಧಿಕಾರಕ್ಕೆೆ ತರಲು ಸೂಕ್ತ ತಂತ್ರಗಾರಿಕೆ ರೂಪಿಸಲು ‘ಮೆಟ್ಟಿಿಲಾಗ’ಬೇಕು ಎನ್ನುವುದು ಅನೇಕರ ಆಶಯವಾಗಿದೆ.
ಕ್ಷುಲ್ಲಕ ಘಟನೆಯಿಂದ ಪಶ್ಚತ್ತಾಾಪಪಟ್ಟಿಿರುವ ನಾರಾ ಭರತರೆಡ್ಡಿಿ ಸಿನಿಮಾ ಶೈಲಿಯ, ಪ್ರಚೋದನಾತ್ಮಕ ಹೇಳಿಕೆಗಳ, ಸಾಮಾಜಿಕ ಜಾಲತಾಣಗಳ ಆಕರ್ಷಣೆಗೆ ಒಳಗಾಗದೇ, ಸವಾಲು-ಪ್ರತಿ ಸವಾಲು; ಆಹ್ವಾಾನ – ಪಂಥಾಹ್ವಾಾನಗಳನ್ನು ಮರೆತು ನೆಲದ ವಾಸ್ತವ ರಾಜಕೀಯ ಭಾಷ್ಯವನ್ನು ಅರ್ಥಮಾಡಿಕೊಂಡು ಯುವ ನಾಯಕತ್ವಕ್ಕೆೆ ಹೊಸ ಅರ್ಥವನ್ನು ನೀಡಬೇಕಿದೆ ಎನ್ನುವುದು ಕಾಂಗ್ರೆೆಸ್ಸಿಿಗರ ಆಶಯವಾಗಿದೆ.
ಮಹರ್ಷಿ ವಾಲ್ಮೀಕಿ ಪುತ್ಥಳಿ ಬ್ಯಾಾನರ್ ಗಲಾಟೆಯು ಅನೇಕರಲ್ಲಿ ಸಾಕಷ್ಟು ಬದಲಾವಣೆ ಮೂಡಿಸಲಿ. ಎಲ್ಲಾಾ ಪಕ್ಷಗಳ ಮುಖಂಡರು ಒಟ್ಟಾಾಗಿ ಪುತ್ಥಳಿಯ ಅನಾವರಣವನ್ನು ನಮ್ಮೆೆಲ್ಲರ ಹಬ್ಬವಾಗಿ – ಸಂಭ್ರಮವಾಗಿ ಆದಷ್ಟು ಶೀಘ್ರದಲ್ಲಿ ನೆರವೇರಿ ಶಾಂತಿ, ಸಮಾಧಾನ ಮತ್ತು ನೆಮ್ಮದಿಯ ದಿನಗಳು ನಮ್ಮೆೆಲ್ಲರದಾಗಲಿ ಎನ್ನುವುದು ಸಾರ್ವಜನಿಕರ ಸದಾಶಯವಾಗಿದೆ.
ಅಷ್ಟೇ ಅಲ್ಲ, ರಾಜಕೀಯ ದೊಂಬಿ, ಗಲಭೆ ಮತ್ತು ವಿಚಾರಗಳಿಗೆ ಯುವಶಕ್ತಿಿ ಅನಗತ್ಯವಾಗಿ ಪ್ರಚೋದನೆಗೆ ಒಳಗಾಗಿ ಜೀವ ಕಳೆದುಕೊಂಡು ಆಶ್ರಿತ ಪೋಷಕರನ್ನು – ಕುಟುಂಬವನ್ನು ದಿಕ್ಕುಕಾಣದಂತೆ ಮಾಡಬಾರದು ಎನ್ನುವುದು ಅನೇಕರ ಒಮ್ಮತದ ಅಭಿಪ್ರಾಾಯವಾಗಿದೆ.

