ಸುದ್ದಿಮೂಲ ವಾರ್ತೆ ರಾಯಚೂರು, ಅ.02:ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸಿ ಅವರ ಜಯಂತ್ಯುತ್ಸವ ಆಚರಿಸಲಾಯಿತು.
ಜಯಂತಿ ಹಿನ್ನೆೆಲೆಯಲ್ಲಿ ಬೆಳಿಗ್ಗೆೆ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಬಳಿ ಲಕ್ಷ್ಮೀದೇವಿ, ಸುನಿತಾ, ನಾಗೇಶ್ವರಿ, ಸಯ್ಯದ್ ಖಾದ್ರಿಿ, ಕೆ.ಇ. ಕುಮಾರ, ವಿದ್ಯಾಾಸಾಗರ ಚಿಣಮಗೇರಿ ಸರ್ವಧರ್ಮ ಪ್ರಾಾರ್ಥನೆ ಮಾಡಿದರುಘಿ. ಗಾಂಧೀಜಿಯವರ ಪ್ರಿಿಯ ಗೀತೆಗಳನ್ನು ಗಾಯಕರು ಪ್ರಸ್ತುತ ಪಡಿಸಿದರು.
ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಾಟಿಸಿದರು. ನಂತರ ಜಿಲ್ಲಾಧಿಕಾರಿ ನಿತೀಶ್ ಕೆ, ಎಸ್ಪಿ ಎಂ.ಪುಟ್ಟಮಾದಯ್ಯ, ಆಯುಕ್ತರಾದ ಜುಬಿನ್ ಮೊಹಪಾತ್ರ, ಐಎಎಸ್ ಪ್ರೊೊಬೇಷನರಿ ಅಧಿಕಾರಿ ಪುರುರಾಜ್ಸಿಂಗ್ ಸೋಲಂಕಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ತಹಶೀಲ್ದಾಾರ್ ಸುರೇಶ ವರ್ಮಾ, ಪಾಲಿಕೆಯ ಉಪ ಆಯುಕ್ತರಾದ ಸಂತೋಷರಾಣಿ ಎಂ ಹಾಗೂ ಇನ್ನಿಿತರರು ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ ಎಂದು ತಿಳಿಸಿದ ಮಹಾತ್ಮ ಗಾಂಧೀಜಿಯವರು ಅತ್ಯಂತ ಸರಳವಾಗಿ ಬದುಕಿ ಬಹುದೊಡ್ಡ ಸಾಮಾಜಿಕ ಸಂದೇಶ ನೀಡಿದರು. ಅವರು ನೀಡಿದ ರಾಜಕೀಯ, ಸಾಮಾಜಿಕ, ಆರ್ಥಿಕ ಮೌಲ್ಯಗಳು ಸದಾಕಾಲ ಪ್ರಸ್ತುತವಾಗಿವೆ ಎಂದರು. ರಾಯಚೂರಿನ ಚಿಂತಕರು ಮತ್ತು ವಿಮರ್ಶಕರಾದ ಪರಮೇಶ್ವರಪ್ಪ ಸಾಲಿಮಠ ಅವರು ಉಪನ್ಯಾಾಸ ನೀಡಿದರು.
ಬಹುಮಾನ ವಿತರಣೆ : ಮಹಾತ್ಮ ಗಾಂಧೀಜಿಯವರ ಜಯಂತ್ಯುತ್ಸವ ಹಿನ್ನೆೆಲೆಯಲ್ಲಿ ವಾರ್ತಾ ಇಲಾಖೆಯಿಂದ ನಡೆಸಿದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾಾರ್ಥಿಗಳಿಗೆ ಇದೆ ವೇಳೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಸ್ಕೌೌಟ್ಸ್ ಮತ್ತು ಗೈಡ್ಸ್ನ ಆರ್ ಎಚ್ ಸಾಗರ, ಬಿಸಿಎಂ ಅಧಿಕಾರಿ ಸುನಿತಾ ಘಟಕಾಂಬಳೆ, ಪಾಲಿಕೆಯ ಕೃಷ್ಣ ಕಟ್ಟಿಿಮನಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಕಸಾಪ ಕಾರ್ಯದರ್ಶಿ ದಂಡಪ್ಪ ಬಿರಾದಾರ, ವಾರ್ತಾ ಇಲಾಖೆಯ ವಾರ್ತಾ ಸಹಾಯಕ ಗವಿಸಿದ್ದಪ್ಪ ಇನ್ನಿಿತರರಿದ್ದರು.
ಜಿಲ್ಲಾಾಡಳಿತದಿಂದ ಮಹಾತ್ಮಗಾಂಧೀಜಿ, ಲಾಲ್ಬಹದ್ದೂರ ಶಾಸಿ ಜಯಂತಿ ಆಚರಣೆ ಗಾಂಧೀಜಿಯವರ ಬದುಕೆ ನಮಗೆಲ್ಲ ಪ್ರೇರಣೆ – ಡಿಸಿ
