ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.09:
ಮಹಿಳೆಯರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆೆ ಅವಕಾಶಗಳು ಸಿಗುವಂತಾಗಲೂ ಕಾರಣಿಭೂತರಾದ ಮಹಾನ್ ವ್ಯಕ್ತಿಿ ಸಂವಿಧಾನ ಶಿಲ್ಪಿಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಎಂದು ಲೇಖಕರು ಮತ್ತು ಬೂಕರ ಪ್ರಶಸ್ತಿಿ ವಿಜೇತರಾದ ದೀಪಾ ಬಸ್ತಿಿ ಹೇಳಿದರು.
ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಾಲಯಲ್ಲಿ ಸಪ್ನ ಬುಕ್ ಹೌಸ್ ಬೆಂಗಳೂರು, ಕುಟುಂಬ ಪ್ರಕಾಶನ ಅರ್ಪಿಸುವ, ಗುಲಬರ್ಗಾ ವಿಶ್ವವಿದ್ಯಾಾಲಯದ ಕನ್ನಡ ಅಧ್ಯಯನ ಸಂಸ್ಥೆೆಯ ಡೀನರು,ಕಲಾನಿಕಾಯ ಹಾಗೂ ನಿರ್ದೇಶಕ ಪ್ರೊೊ.ಎಚ್.ಟಿ. ಪೋತೆ ಅವರು ಬರೆದ ಡಾ. ಬಿ.ಆರ್ ಅಂಬೇಡ್ಕರ್ ಜೀವನ ಕಥನ ಕುರಿತಾದ ಮಹಾಯಾನ ಕಾದಂಬರಿ ಲೋಕಾರ್ಪಣೆಗೊಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದರು ಎಂದರು.
ಯಾವುದೆ ಒಂದು ಕೃತಿ ಅಥವಾ ಕಾದಂಬರಿಯು ಒಂದು ಭಾಷೆಯಿಂದ ಇನ್ನೊೊಂದು ಭಾಷೆಗೆ ಅನುವಾದಗೊಳ್ಳದಿದ್ದರೆ ಇಷ್ಟೊೊಂದು ವೈವಿಧ್ಯಮಯವಾಗಿ ಇರುತ್ತಿಿರಲಿಲ್ಲ ಮತ್ತು ಓದುಗರಿಗೆ ಹೆಚ್ಚಿಿನ ಜ್ಞಾನ ಪಡೆದುಕೊಳ್ಳಲು ಸಾಧ್ಯವಾಗುತ್ತಿಿರಲಿಲ್ಲ.ಎಲ್ಲಾ ಭಾಷೆಗಳಿಗು ಸಮಾನವಾದ ಪ್ರಾಾತಿನಿಧ್ಯ ನೀಡುವುದರ ಜೊತೆಗೆ ಬೇರೆ ಭಾಷೆಯ ಕೃತಿಗಳನ್ನು ಓದುವುದರಿಂದ ನಮ್ಮ ಆಲೋಚನಾ ಶಕ್ತಿಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಸಾಂಸ್ಕೃತಿಕ ರಾಜಕೀಯ ವಿಷಯಗಳು, ಸಾರ್ವಜನಿಕರು ಹೇಳುವ ಕಥೆಗಳು ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಭಾಷಾಂತರ ಮಾಡಬೇಕು. ಉತ್ತರ ಕರ್ನಾಟಕದ ಭಾಷೆಯಲ್ಲಿನ ಕೃತಿಗಳನ್ನು, ಕಾದಂಬರಿಗಳನ್ನು ಹೆಚ್ಚಾಾಗಿ ಬೇರೆ ಬಾಷೆಗೆ ಭಾಷಾಂತರ ಮಾಡಿಲ್ಲ. ಈ ಭಾಗದ ಅನುವಾದಕರು ಕನ್ನಡ ಭಾಷೆಯಲ್ಲಿನ ಹೆಚ್ಚಿಿನ ಕೃತಿಗಳನ್ನು ಬೇರೆ ಭಾಷೆಗೆ ಭಾಷಾಂತರ ಮಾಡಬೇಕು ಎಂದು ಹೇಳಿದರು. ಕನ್ನಡ ಭಾಷೆ ಇಂಗ್ಲೀಷ ಭಾಷೆಗೆ ಅನುವಾದ ಮಾಡವಾಗ ಹೆಚ್ಚಿಿನ ಜಾಗೃತಿವಹಿಸಿ ಅನುವಾದ ಮಾಡಬೇಕು ಎಂದು ಹೇಳಿದರು.
ವಿಮರ್ಶಕರು ಮತ್ತು ಸಾಹಿತಿಗಳಾದ ಎಸ್.ಆರ್. ವಿಜಯ ಶಂಕರ ಅವರು ಪ್ರೊೊ.ಎಚ್.ಡಿ.ಪೋತೆ ಅವರು ಬರೆದ ಮಹಾಯಾನ ಕಾದಂಬರಿ ಪರಿಚಯಿಸಿದರು. ಪ್ರೊೊ.ಎಚ್.ಟಿ. ಪೋತೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊ.ಶಶಿಕಾಂತ ಉಡಿಕೇರಿ, ಪ್ರೊೊ.ವಿಕ್ರಮ ವಿಸಾಜಿ, ಗುಲ್ಬರ್ಗಾ ವಿಶ್ವ ವಿದ್ಯಾಾಲಯದ ಕುಲಸಚಿವ ಪ್ರೊೊ. ರಮೇಶ ಲಂಡನರ್ಕ, ಡಿ.ಎಸ್.ಎಸ್ ಮುಖಂಡ ಡಿ.ಜಿ ಸಾಗರ್, ಕಲಬುರಗಿ ಸಪ್ನಾಾ ಬುಕ್ಹೌಸನ ಮಹಾಂತೇಶ್, ಬರಹಗಾರರು, ಚಿಂತಕರು, ವಿದ್ಯಾಾರ್ಥಿಗಳು ಇದ್ದರು.
ಮಹಾಯಾನ ಕಾದಂಬರಿ ಲೋಕಾರ್ಪಣೆ: ಮಹಿಳೆಯರು ಸದೃಢರಾಗಲು ಸಂವಿಧಾನವೇ ಕಾರಣ – ದೀಪಾ ಬಸ್ತಿ

