ಸುದ್ದಿಮೂಲ ವಾರ್ತೆ ರಾಯಚೂರು, ೆ.21:
ಎಲ್ಲ ಇಲಾಖೆ ಖಾಲಿ ಹುದ್ದೆಗಳ ಭರ್ತಿ ಮಾಡುವುದಾಗಿ ಹೇಳಿದ್ದ ಸರ್ಕಾರ ಮಾಡಿಲ್ಲ ನಿರುದ್ಯೋೋಗ ಭತ್ಯೆೆ ನೀಡದೆ ಈಗ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡಿ ನಿರುದ್ಯೋೋಗಿಗಳಿಗೆ ಮೋಸ ಮಾಡಿದೆ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆಪಾದಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಾಗರಿಕ ಸೇವಾ ಹುದ್ದೆಗಳು ಸಂಪೂರ್ಣ ಭರ್ತಿಯಾಗುವವರೆಗೆ ಸಂವಿಧಾನದ ಅನುಚ್ಛೇದ 41 ಅನ್ವಯ ನಿರುದ್ಯೋೋಗಿಗಳಿಗೆ ಭತ್ಯೆೆ ಯೋಜನೆ ಜಾರಿಗೊಳಿಸಬೇಕಿತ್ತು ಅದು ಆಗಿಲ್ಲಘಿ. 1971ರಲ್ಲಿ ಎಸ್ಸಿಿ,ಎಸ್ಟಿಿ ಮೀಸಲಾತಿ ವಿಳಂಬದಲ್ಲೂ ಪದವೀಧರರಿಗೆ ತಿಂಗಳಿಗೆ 150 ಹಾಗೂ ಸ್ನಾಾತಕೋತ್ತರ ಪದವೀಧರರಿಗೆ 250 ನಿರುದ್ಯೋೋಗ ಭತ್ಯೆೆ ನೀಡಲಾಗುತ್ತಿಿತ್ತು. ಪ್ರಸ್ತುತ ಬೆಲೆ ಏರಿಕೆ ಮತ್ತು ನಿರುದ್ಯೋೋಗ ಸಮಸ್ಯೆೆ ಗಮನದಲ್ಲಿಟ್ಟು ಪದವೀಧರರಿಗೆ 20 ಸಾವಿರ ಹಾಗೂ ಸ್ನಾಾತಕೋತ್ತರ ನಿರುದ್ಯೋೋಗಿಗಳಿಗೆ 25 ಸಾವಿರ ಭತ್ಯೆೆ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಣಾಳಿಕೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಜಾಹೀರಾತು ನೀಡಿದ್ದರೂ, ವಾಸ್ತವದಲ್ಲಿ ಜನರಿಂದ ಹಣ ವಸೂಲಿ ಮಾಡಲಾಗುತ್ತಿಿದೆ ಎಂದು ಟೀಕಿಸಿದ ಅವರು . ಸಾರ್ವಜನಿಕರು ಜೆಸ್ಕಾಾಂ ಕಚೇರಿಗೆ ಭೇಟಿ ನೀಡಿ ಉಚಿತ ವಿದ್ಯುತ್ ಪ್ರಮಾಣ ಪರಿಶೀಲಿಸಿಕೊಳ್ಳಬೇಕು ಎಂದರು.
ಎಸ್ಸಿ,ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಿಸಿರುವ ವಿಷಯ ಹೈಕೋರ್ಟನಲ್ಲಿ ಪ್ರಶ್ನಿಿಸಿದ್ದು ಶೇ.56 ಮೀಸಲಾತಿಯನ್ನು ಶೇ.50 ಮಿತಿಯೊಳಗೆ ನೇಮಕಾತಿ ನಡೆಸುವಂತೆ ನ್ಯಾಾಯಾಲಯ ಸೂಚಿಸಿದೆ. ಮೀಸಲಾತಿಯನ್ನು ಎಬಿಸಿ ಗುಂಪುಗಳಿಗೆ ಮರು ವಿಂಗಡನೆ ಮಾಡುವಲ್ಲಿ ಸರ್ಕಾರ ಮುಂದಾಗಿಲ್ಲ ಅಲ್ಲದೆ, ಅಫಿಡೆವಿಟ್ ಸಲ್ಲಿಸುತ್ತಿಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2020ರಲ್ಲಿ ರಾಜ್ಯ ಸರ್ಕಾರ ದಲಿತ ಪದ ಬಳಕೆ ಮಾಡಬಾರದೆಂದು ಸುತ್ತೋೋಲೆ ಹೊರಡಿಸಿದ್ದರೂ, ಇಂದಿಗೂ ಪದ ಬಳಕೆ ಮುಂದುವರಿದಿದೆ. ಈ ಸಂಬಂಧ ಕಲಬುರಗಿ ಹೈಕೋರ್ಟಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸುವಂತೆ ನ್ಯಾಾಯಮೂರ್ತಿಗಳು ಸೂಚಿಸಿದ್ದಾರೆ ಎಂದು ಹೇಳಿದರು. ಸಂಘಟನೆಗಳು ದಲಿತ ಪದ ಬಳಕೆ ಮಾಡಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ನರಸಿಂಹಲು ಇದ್ದರು.

