ಸುದ್ದಿಮೂಲ ವಾರ್ತೆ ರಾಯಚೂರು, ಡಿ.22:
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸುಳ್ಳು ಪ್ರಕರಣಗಳನ್ನು ತನಿಖೆ ಮಾಡಲು ಡಿಸಿಆರ್ಎ ವಿಭಾಗದಿಂದ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಕಚೇರಿ ಸ್ಥಾಾಪಿಸಬೇಕು ಎಂದು ಡಾ. ಅಂಬೇಡ್ಕರ ಪರಿಶಿಷ್ಟ ಜಾತಿಗಳ ಕ್ಕೂಟದ ರಾಜ್ಯಾಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ದಾಖಲಾಗಿರುವ ಸುಳ್ಳು ಪರಿಶಿಷ್ಟ ಜಾತಿ, ಸುಳ್ಳು ಪರಿಶಿಷ್ಟ ಪಂಗಡ ಪ್ರಕರಣಗಳನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿಿದೆ. ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ಸುಳ್ಳು ಪರಿಶಿಷ್ಟ ಜಾತಿ, ಪಂಗಡ ಪ್ರಕರಣಗಳ ಕುರಿತು ದೋಷಾರೋಪಣ ಪಟ್ಟಿಿಯನ್ನು ಅಟ್ರಾಾಸಿಟಿ ನ್ಯಾಾಯಾಲಯಕ್ಕೆೆ ಸಲ್ಲಿಸುವಾಗ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ನಿಯಮಗಳು 1995 ದಲ್ಲಿರುವ ನಿಯಮ 7 (1) ರನ್ನು ಉಲ್ಲಂಘನೆ ಮಾಡುತ್ತಿಿದೆ. ನಿಯಮ 7 ರ ಪ್ರಕಾರ ಎಸ್ಪಿ, ಎಎಸ್ಪಿ, ಡಿಎಸ್ಪಿ ತನಿಖಾಧಿಕಾರಿ ಇರತಕ್ಕದ್ದು. ಆದರೆ ನಮ್ಮ ರಾಯಚೂರು ಜಿಲ್ಲೆಯಲ್ಲಿ ಸುಳ್ಳು ಪರಿಶಿಷ್ಟ ಜಾತಿ, ಸುಳ್ಳು ಪರಿಶಿಷ್ಟ ಪಂಗಡ ಪ್ರಕರಣಗಳ ತನಿಖೆಯು ಸರ್ಕಲ್ ಇನ್ಸೆೆಪೆಕ್ಟರ್ ಅವರಿಂದ ಮಾಡಲಾಗುತ್ತಿಿದೆ. ಇದು ಕಾನೂನಿನ ಪ್ರಕಾರ ತಪ್ಪುು ಮತ್ತು ಇಂತಹ ಪ್ರಕರಣಗಳು ನ್ಯಾಾಯಾಲಯಗಳಲ್ಲಿ ಬಿದ್ದು ಹೊಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯಲ್ಲಿ ಕನಿಷ್ಟ ಮೂವರು ಡಿಎಸ್ಪಿ ಅವರ ನೇಮಕ ಮಾಡಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಸಮಾಜ ಕಲ್ಯಾಾಣ ಸಚಿವರು ಅಸ್ಪೃಶ್ಯತೆಯನ್ನು ನಿಷೇಧ ಮಾಡುವುದರಲ್ಲಿ ವಿಲರಾಗಿದ್ದಾರೆ ಆದ್ದರಿಂದ ಕೂಡಲೇ ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
1932 ರ ಡಾ.ಅಂಬೇಡ್ಕರ್, ಹಿಂದೂ ಮಹಾಸಭಾ ಮತ್ತು ಕಾಂಗ್ರೆೆಸ್ ಪಕ್ಷ ಮಧ್ಯೆೆ ಜರುಗಿದ ಪೂನಾ ಒಪ್ಪಂದ ಪ್ರಕಾರ ಅನುಸೂಚಿತ ಜಾತಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕ (ಅಸ್ಪೃಶ್ಯತೆ) ನಿಷೇಧ ಮಾಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ಭಾರತ ಸಂವಿಧಾನದ ಅನುಚ್ಛೇದ 17 ನ್ನು ಸಂಪೂರ್ಣವಾಗಿ ಜಾರಿ ಮಾಡಬೇಕು. ಅನುಸೂಚಿತ ಜಾತಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕವಾದ ಆಸ್ಪಶ್ಯತೆ ನಿಷೇಧ ಮಾಡಬೇಕೆಂದರೆ ಅನುಸೂಚಿತ ಜಾತಿಯವರಿಗೆ ಹಳ್ಳಿಿಯಲ್ಲಿರುವ ಗ್ರಾಾಮ ದೇವರ, ಗ್ರಾಾಮ ದೇವತೆಯ ದೇವಾಲಯಕ್ಕೆೆ ಪ್ರವೇಶ ಕಲ್ಪಿಿಸಬೇಕು ಇಲ್ಲವಾದಲ್ಲಿ ಗಣರಾಜ್ಯೋೋತ್ಸವ ದಿನವನ್ನು ಆಚರಣೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಸುದ್ದಿಗೋಷ್ಠಿಿಯಲ್ಲಿ ಮೇಘನಾಥ, ಅಂಜಿನೇಯ, ನರಸಿಂಹಲು ಪೋತಗಲ್ ಇತರರಿದ್ದರು.

