ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.26: ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಕನ್ನಡ ಸಾಹಿತ್ಯ ಪರಿಷತ್ ಗೌರವ ಸದಸ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಆಕಾಂಕ್ಷಿ ಡಾ ಮಹೇಂದ್ರ ನಾಥ್ ಶರ್ಮಾ ಅಗ್ರಹ ಮಾಡಿದರು.
ಈ ಸಂಬಂಧ ಅವರು ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ದೇವಾಲಯ ಆವರಣದಲ್ಲಿ ಪ್ರತಿಭಟನೆ ಹಾಗೂ ಬೈಕ್ ಚಲೋ ನಡೆಸಿದರು.
ತಮಿಳುನಾಡು ಸರ್ಕಾರಕ್ಕೆ ದಿಕ್ಕಾರ ಕೂಗಿ ಕಾವೇರಿ ನದಿ ನೀರು ಹರಿಸಬಾರದು ಹಾಗೂ ಸುಪ್ರೀಂ ಕೋರ್ಟ್ ಆದೇಶ ಮರು ಪರಿಶೀಲನೆ ಆಗಬೇಕು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೂಡಲೇ ಕಾವೇರಿ ನೀರು ತಮಿಳು ನಾಡಿಗೆ ಹರಿಯದಂತೆ ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ ಪ್ರಜಾ ಪರಿವರ್ತನ ವೇದಿಕೆ ಕಾರ್ಯ ದರ್ಶಿ ಹಾಗೂ ಸ್ಥಳೀಯ ಕನ್ನಡ ಪರ ಹೋರಾಟಗಾರ ಮಹದೇವು ಪಾಲ್ಗೊಂಡಿದ್ದರು.