ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.8: ಅಧ್ಯಾತ್ಮ ಎಂಬುದು ಮಹಾನ್ ಸರೋವರ. ಅದನ್ನು ಅರಿತರೆ ಜೀವನದಲ್ಲಿ ಎಲ್ಲವೂ ಸಿಕ್ಕಂತೆ ಎಂದು ಶ್ರೀ ಅವಧೂತ ಗ್ಲೋಬಲ್ ಫೌಂಡೇಷನ್ ಅಧ್ಯಕ್ಷ ಮಹೇಂದ್ರನಾಥ ಶರ್ಮಾ ಹೇಳಿದರು.
ಆತ್ಮ ಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಕನ್ನಡ ಭವನದ ನಯನ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಮಹಾತ್ಮಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಸಂವಿಧಾನ ವಿಚಾರ ಸಂಕೀರ್ಣದಲ್ಲಿ ಡಾ ಮಹೇಂದ್ರ ನಾಥ್ ಶರ್ಮಾರವರಿಗೆ ‘ಮಹಾತ್ಮಾ ಗಾಂಧಿ ಸದ್ಭಾವನಾ ಪ್ರಶಸ್ತಿ’ ಕೊಟ್ಟು ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮಹೇಂದ್ರನಾಥ ಶರ್ಮಾ, ಆಧ್ಯಾತ್ಮದಲ್ಲಿ ಎಲ್ಲವೂ ಇಲ್ಲ. ಆದ್ಯ ಎಂದರೆ ಆದ್ಯ ಕರ್ತವ್ಯ. ಆತ್ಮ ಎಂದರೆ ನೀನು ತಿಳಿದುಕೊಳ್ಳಲೇಬೇಕು ಎಂದು. ಹಾಗಾಗಿ ಆಧ್ಯಾತ್ಮವನ್ನು ಅರಿತಕೊಂಡರೆ ಜೀವನ ನೆಮ್ಮದಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಡಿ.ಎಸ್. ವೀರಯ್ಯ ಅವರು ಈಗ ನಮ್ಮ ನಡುವೆ ಇರುವಂತಹ ಅಂಬೇಡ್ಕರ್ ಅನುಯಾಯಿ. ನಾವು ಯಾರು ಅಂಬೇಡ್ಕರ್ ಅವರನ್ನು ನೋಡಿಲ್ಲ. ಆದರೆ, ವೀರಯ್ಯ ಅವರು ಇತ್ತೀಚೆಗೆ ಅಂಬೇಡ್ಕರ್ ಅವರ ಬಗ್ಗೆ ರಚಿಸಿದಂತಹ ಹತ್ತು ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಅವುಗಳನ್ನು ಕೇಳಿದರೆ ಅಂಬೇಡ್ಕರ್ ಕಣ್ಕಟ್ಟುವಂತಿದೆ. ಹೀಗಾಗಿ ಡಿ.ಎಸ್. ವೀರಯ್ಯ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲ. ಅದ್ಭುತ ಸಾಹಿತಿಯೂ ಹೌದು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಡಿ. ಎಸ್ ವೀರಯ್ಯ, ಅಬಕಾರಿ ಡೆಪ್ಯೂಟಿ ಕಮಿಷನರ್ ಬಿ.ಆರ್. ಹಿರೇಮಠ್, ಆತ್ಮಶ್ರೀ ಸಂಸ್ಥೆ ಅಧ್ಯಕ್ಷ ಗುಣವಂತ ಮಂಜು, ವಿವಿಧ ಧಾರ್ಮಿಕ ಸ್ವಾಮೀಜಿಗಳು ಹಾಗೂ ಕನ್ನಡ ಪರ ಹೋರಾಟ ಗಾರರು ಆದ ಗೋವಿಂದ ಹಳ್ಳಿ ಕೃಷ್ಣೆ ಗೌಡರು ಉಪಸ್ಥಿತರಿದ್ದರು.