ಸುದ್ದಿಮೂಲ ವಾರ್ತೆ ಕಲಬುರಗಿ, ೆ.03:
ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆೆ ಮಾರ್ಗ ನೀಡಿದ ಕನ್ನಡದ ಪ್ರಖ್ಯಾಾತ ದೊರೆ ನೃಪತುಂಗ ಅಮೋಘವರ್ಷ ಆಡಳಿತದ ‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಾಧಿಕಾರ ಅಥವಾ ಪ್ರತಿಷ್ಠಾಾನ ಸ್ಥಾಾಪಿಸುವಂತೆ ಹಿರಿಯ ಸಾಹಿತಿ, ಪತ್ರಕರ್ತ, ನಟ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿಿನ ಕಲಬುರಗಿ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿಿ ಮುನ್ನೂರ್ ಸೇಡಂ ಅವರು ಸರಕಾರಕ್ಕೆೆ ಮನವಿ ಮಾಡಿದ್ದಾರೆ.
ಈ ಕುರಿತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ ಸಾಮ್ರಾಾಜ್ಯದಲ್ಲಿ ಕನ್ನಡಕ್ಕೆೆ ಮೇರು ಕೀರ್ತಿ ತಂದಿರುವ ಶ್ರೀವಿಜಯನ ಕವಿರಾಜಮಾರ್ಗದ ಮೂಲಕ ಕನ್ನಡ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರಕ್ಕೆೆ ಬಹುದೊಡ್ಡ ಕೊಡುಗೆ ಎನಿಸಿದ್ದು, ಕನ್ನಡವನ್ನು ವಿಶ್ವಮಾನ್ಯತೆ ದರ್ಜೆಗೇರಿಸಿರುವ ಹಿನ್ನೆೆಲೆಯಲ್ಲಿ ರಾಷ್ಟಕೂಟ ಹೆಸರಿನಲ್ಲಿ ಪ್ರಾಾಧಿಕಾರ ಅಥವಾ ಪ್ರತಿಷ್ಠಾಾನ ಸ್ಥಾಾಪಿಸುವ ಮೂಲಕ ಕನ್ನಡದ ಸಾರಸ್ವತಲೋಕದ ಕಾರ್ಯಗಳಿಗೆ ಇಂಬು ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಕಾವ್ಯ ಕ್ಷೇತ್ರಕ್ಕೊೊಂದು ರಾಜಮಾರ್ಗವನ್ನು ಹಾಕಿಕೊಟ್ಟ ರಾಷ್ಟ್ರಕೂಟ ಹೆಸರಿನಲ್ಲಿ ಸರಕಾರವು ಸಂಸ್ಥೆೆಯೊಂದನ್ನು ಸ್ಥಾಾಪಿಸಿ, ಆ ಮೂಲಕ ಕಾವ್ಯ ಕ್ಷೇತ್ರವನ್ನು ಹಾಗೂ ಇತಿಹಾಸದ ಇನ್ನಷ್ಟು ಹೊಳಹುಗಳನ್ನು ಒಳಗೊಂಡಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಬಹುದು. ಕನ್ನಡ ಸಾಹಿತ್ಯದ ಮೊದಲ ಲಾಕ್ಷಣಿಕ ಗ್ರಂಥ ಎಂಬ ಕಾರಣಕ್ಕಾಾಗಿ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರದಲ್ಲಿ ರಾಷ್ಟ್ರಕೂಟ ಹೆಸರಿನಲ್ಲಿ ಪ್ರಶಸ್ತಿಿಯೊಂದನ್ನು ಸ್ಥಾಾಪಿಸಬೇಕು ಹಾಗೂ ರಾಷ್ಟ್ರಕೂಟರ ಆಡಳಿತದಲ್ಲಿ ರಾಜಧಾನಿಯಾಗಿದ್ದ ಮಳಖೇಡ (ಮಾನ್ಯಖೇಟ)ವನ್ನು ವಿಶ್ವಮಾನ್ಯತೆಯ ಮಟ್ಟಕ್ಕೆೆ ಅಭಿವೃದ್ಧಿಿಪಡಿಸಬೇಕು ಎಂದು ಅವರು ಕೋರಿದ್ದಾರೆ.
‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ

