ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.24:
ಕಸಬಾ ಹೋಬಳಿಯ ಬಾಗಳಿ ಗ್ರಾಾಮದಲ್ಲಿ ಶುಕ್ರವಾರ ಮಧ್ಯಾಾಹ್ನ ಶಾರ್ಟ್ ಸರ್ಕೂಟ್ ಉಂಟಾಗಿ 11 ಕೆವಿ ವಿದ್ಯುತ್ ತಂತಿಯ ಪಕ್ಕದ ಕಣದಲ್ಲಿದ್ದ ಮೆಕ್ಕೆೆಜೋಳದ ಕಣಿಯ ರಾಶಿಗಳು ಮತ್ತು ರಾಗಿ ತೆನೆಯ ಬಣವೆಯ ಮೇಲೆ ಬೆಂಕಿ ಹರಿದು 8 ಎಕರೆ ಮೆಕ್ಕೆೆಜೋಳ ಹಾಗೂ 6 ಎಕರೆಯಷ್ಟು ರಾಗಿ ತೆನೆಯ ಬಣವೆಯು ಸುಟ್ಟು ಕರಕಲಾಗಿವೆ.
ಗ್ರಾಾಮದ ರೈತಾರಾದ ಹುಲ್ಲುಮನಿ ಜಾತಪ್ಪ ಹಾಗೂ ನಾಗರಾಜ ಎಂಬ ಸೋದರರಿಗೆ ಸೇರಿದ ಮೆಕ್ಕೆೆಜೋಳದ ರಾಶಿ ಹಾಗೂ ರಾಗಿ ತೆನೆಯ ಬಣವೆಗಳಾಗಿದ್ದು ವಿದ್ಯುತ್ ಸರ್ಕ್ಯೂಟ್ ಬೆಂಕಿಯಿಂದಾಗಿ ಅಂದಾಜು 13 ಲಕ್ಷಕ್ಕೂ ಹೆಚ್ಚು ಮೌಲ್ಯದ ರಾಶಿಗಳು ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಉಂಟು ಮಾಡಿದೆ. ಮೆಕ್ಕೆೆಜೋಳ ಮತ್ತು ರಾಗಿ ಬಣವೆಗೆ ಬಿದ್ದಿರುವ ಬೆಂಕಿ ನಂದಿಸಲು ಗ್ರಾಾಮಸ್ಥರು ಕೈಜೋಡಿಸಿದರೂ ಬೆಂಕಿ ನಂದಿಸುವುದರೊಳಗೆ ಜೋಳ ಮತ್ತು ರಾಗಿ ಬಣವೆ ಹಾಗೂ ಎತ್ತಿಿನ ಬಂಡಿ ಸೇರಿದಂತೆ ಕಣದಲ್ಲಿ ಒಕ್ಕಲತನ ಮಾಡಲು ಇಟ್ಟಿಿದ್ದ ಕೃಷಿ ಸಲಕರಣೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ವಿಷಯ ತಿಳಿದ ಅಗ್ನಿಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಆಕಸ್ಮಿಿಕ ಘಟನೆಗೆ ನೊಂದ ರೈತ ಜಾತಪ್ಪ ಮಾತನಾಡಿ ಸಾಲ ಸೂಲ ಮಾಡಿ ಬೆಳೆಯನ್ನು ಬೆಳೆದಿದ್ದೆವು, ಅದರಲ್ಲಿ ಅತಿವೃಷ್ಠಿಿ ಮಳೆಯಿಂದ ಕೆಲ ಬೆಳೆಯು ಹಾನಿಯಾಗಿತ್ತು, ಉಳಿದ ಮೆಕ್ಕೆೆಜೋಳ ಮತ್ತು ರಾಗಿ ತೆನೆಯ ಬಣವೆಗಳ ಮೇಲೆ ಹಳೆಯ ವಿದ್ಯುತ್ ತಂತಿಯು ಹರಿದು ಉಳಿದ ಎಲ್ಲಾ ಬೆಳೆಯ ರಾಶಿಯು ಸುಟ್ಟು ಕರಕಲಾಗಿ ಹೋಯಿತು, ಕೃಷಿಗೆ ಮಾಡಿದ ಸಾಲವನ್ನು ತೀರಿಸುವ ಮತ್ತು ಕುಟುಂಬ ನಿರ್ವಹಣೆಯ ಚಿಂತೆಯಾಗಿದೆ ಸಂಬಂಧಿಸಿದ ಇಲಾಖೆಯವರು ನಷ್ಟದ ಪ್ರಮಾಣಕ್ಕೆೆ ತಕ್ಕಂತೆ ಸೂಕ್ತ ಪರಿಹಾರ ಒದಗಿಸಬೇಕೆಂದು ನೋವನ್ನು ವ್ಯಕ್ತಪಡಿಸಿದರು.
ಈ ಘಟನೆ ಸಂಬಂಧ ಹರಪನಹಳ್ಳಿಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ 13 ಲಕ್ಷ ಮೌಲ್ಯದ ಮೆಕ್ಕೆಜೋಳ ತೆನೆಯ ರಾಶಿ ಭಸ್ಮ

