ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ಜಿಲ್ಲೆಯ ಯುವಕರು ಭಾರತೀಯ ಸೇನೆಗೆ ಸೇರುವ ಮೂಲಕ ದೇಶ ಸೇವೆಯಲ್ಲಿ ಮುನ್ನಡೆಯಬೇಕು, ಶಿಸ್ತು, ಧೈರ್ಯ ಮತ್ತು ದೇಶಭಕ್ತಿಿಯೇ ಸೈನಿಕನ ಅಸ ವಿದ್ಯಾಾರ್ಥಿ ದೆಸೆಯಿಂದಲೇ ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧತೆ ಆರಂಭಿಸಿ ಎಂದು ಭಾರತೀಯ ಸೈನ್ಯದ ಮೇಜರ ಭರತ್ ಭೂಷಣ್ ಸಲಹೆ ನೀಡಿದರು.
ನಗರದ ವೇದಾಂತ ಪದವಿ ಮಹಾವಿದ್ಯಾಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಿಕೊಂಡಿದ್ದ ಪರಿಷತ್ ನಡೆ ಯುವಕರ ಕಡೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ದೇಶದ ರಕ್ಷಣೆಯಲ್ಲಿ ಯುವಕರ ಪಾತ್ರ ಕುರಿತು ಮಾತನಾಡಿದರು. ಕರ್ನಾಟಕದ ಹಲವು ಭಾಗಗಳಿಂದ ಸೈನ್ಯಕ್ಕೆೆ ಸಾವಿರಾರು ಮಕ್ಕಳು ಸೇರಿದರೆ ರಾಯಚೂರಿನ ಯುವಕರು ಮಾತ್ರ ಕಾಣಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸೈನ್ಯಕ್ಕೆೆ ಹೆಚ್ಚಿಿನ ಸಂಖ್ಯೆೆಯಲ್ಲಿ ಸೇರುವಂತೆ ತಿಳಿಸಿದರು.
ಪಿಯುಸಿ ವಿದ್ಯಾಾಭ್ಯಾಾಸದ ನಂತರ ಎನ್ಡಿಎ ಪರೀಕ್ಷೆಗಳು ಸೇರಿದಂತೆ ಸೈನ್ಯದ ವಿವಿಧ ಪರೀಕ್ಷೆಗಳು ಯಾವ ರೀತಿಯಲ್ಲಿ ಇರುತ್ತದೆ.ಅಲ್ಲದೇ ಅಪರೇಷನ್ ಸಿಂಧೂರ ಹಾಗೂ ಸೈನ್ಯದ ಇತರ ಮುಖ್ಯವಾದ ಅಪರೇಷನ್ ಗಳಲ್ಲಿ ಯಾವ ರೀತಿಯಾಗಿ ಸೈನ್ಯ ಭಾಗವಹಿಸಿತು ಎಂಬುದನ್ನು ವಿವರಿಸಿದರು.
ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯಸ್ವಾಾಮಿ ಕುಕನೂರು ಮಾತನಾಡಿ ಯುವಕರು ಇಂದು ಸರಿಯಾದ ಮಾರ್ಗದಲ್ಲಿ ನಡೆಯಬೇಕಿದ್ದು ದೇಶದ ಭದ್ರತೆ ಕೇವಲ ಗಡಿಗಳ ರಕ್ಷಣೆಗೆ ಸೀಮಿತವಲ್ಲ; ಆಂತರಿಕ ಭದ್ರತೆಯೇ ರಾಷ್ಟ್ರದ ಸ್ಥಿಿರತೆಗೆ ಮೂಲಸ್ತಂಭ. ಉಗ್ರವಾದ, ಸಂಘಟಿತ ಅಪರಾಧ, ಸೈಬರ ಅಪಾಯಗಳು ಮತ್ತು ಸಮಾಜದಲ್ಲಿ ಅಸಮಾನತೆಗಳು ಆಂತರಿಕ ಭದ್ರತೆಗೆ ಸವಾಲುಗಳಾಗಿವೆ. ಇವುಗಳನ್ನು ಎದುರಿಸಲು ಜಾಗೃತ ನಾಗರಿಕತ್ವ, ಯುವಜನರ ಸಕ್ರಿಿಯ ಪಾತ್ರ ಮತ್ತು ಶಿಸ್ತುಬದ್ಧ ಸೇವೆ ಅಗತ್ಯ ಅಲ್ಲದೇ ಸಾಹಿತ್ಯ ಪರಿಷತ್ ಇಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ಯುವಜನರನ್ನು ತಲುಪುತ್ತಿಿರುವದು ಶ್ಲಾಾಘನೀಯ ಎಂದು ತಿಳಿಸಿದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವಿಜಯ ರಾಜೇಂದ್ರ, ಕಾಲೇಜಿನ ಆಡಳಿತಾಧಿಕಾರಿ ರಾಕೇಶ್ ರಾಜಲಬಂಡಿ, ಮ್ಯಾಾಕ್ಸ್ವೆಲ್ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ವೆಂಕಟೇಶ್ವರಲು, ಸಾಹಿತ್ಯ ಪರಿಷತ್ತಿಿನ ಪದಾಧಿಕಾರಿಗಳಾದ ಅಮರೇಶ್ ಆಶಿಹಾಳ್, ದೇವೇಂದ್ರಮ್ಮ ಸೇರಿದಂತೆ ಕಾಲೇಜಿನ ಬೋಧಕೇತರ ಸಿಬ್ಬಂದಿಗಳು ಉಪಸ್ಥಿಿತರಿದ್ದರು.
ಕಸಾಪ ಉಪನ್ಯಾಸ ಮಾಲಿಕೆಯಲ್ಲಿ ಮೇಜರ್ ಭರತ್ ಭೂಷಣ್ ಸಲಹೆ ವಿದ್ಯಾರ್ಥಿಯಿದ್ದಾಗಲೆ ಸೇನೆ ಸೇರಲು ತಯಾರಾಗಿ

