ಸುದ್ದಿಮೂಲ ವಾರ್ತೆ
ಆನೇಕಲ್,ಸೆ.9:ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು ಇರುವಿಕೆ ಮತ್ತು ಖನಿಜಗಳಿರುವ ಸಾಧ್ಯತೆ ಇದೆ ಎಂದು ಚಂದ್ರಯಾನ-1ರಲ್ಲಿ ನಮಗೆ ಪತ್ತೆಯಾಗಿತ್ತು ಭಾರತ ಉಪಗ್ರಹವನ್ನ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿದೆ.
ಈ ಹಿಂದೆ ರಷ್ಯಾ, ಜಪಾನ್, ಅಮೆರಿಕ, ಇಸ್ರೇಲ್, ಚೀನಾ ಪ್ರಯತ್ನ ಮಾಡಿದ್ದು, ಆದರೆ ಚಂದಿರನ ದಕ್ಷಿಣ ಧ್ರುವದಲ್ಲಿ ಯಾವುದೇ ದೇಶ ಲ್ಯಾಡಿಂಗ್ ಮಾಡಿಲ್ಲ. ಆದರೆ, ಚೀನಾ ಮುಂದಿನ ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವ ತಲುಪಲಿದೆ. ಹಾಗಾಗಿ, ನಾವು ಚಂದ್ರನ ಅಂಗಳದಲ್ಲಿ ಇನ್ನಷ್ಟು ಸಂಶೋಧನೆಗಳನ್ನು ಮಾಡಬೇಕಿದೆ ಎಂದು ಮಾಜಿ ಇಸ್ರೋ ನಿರ್ದೇಶಕ ಮಲೈಸ್ವಾಮಿ ಅಣ್ಣಾದೊರೆ ತಿಳಿಸಿದರು..
ಆನೇಕಲ್ ತಾಲೂಕಿನ ಕಾವಲ ಹೊಸಹಳ್ಳಿ ಅಲಯನ್ಸ್ ಕಾಲೇಜಿನಲ್ಲಿ ಭವಿಷ್ಯಕ್ಕಾಗಿ ಶಿಕ್ಷಣದ ಕ್ರಾಂತಿ ವಿಚಾರ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿವಿಧ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದರನ್ನ ಶಿಕ್ಷಕರು ಅರಿಯಬೇಕು. ಇದಕ್ಕೆ ಪ್ರೋತ್ಸಾಹ ಸಿಗಬೇಕು. ಜೊತೆಗೆ ಮುಂದಿನ ಪೀಳಿಗೆ ಶಿಕ್ಷಣ ವ್ಯವಸ್ಥೆ ಬದಲಾಗೋಣ. ಚಂದ್ರಯಾನ -3 ಯಶಸ್ವಿಯಾದ ಬಳಿಕ ಬೇರೆ ದೇಶಗಳು ಕೂಡ ನಮ್ಮ ಭಾರತದ ಶಿಕ್ಷಣ ಕಡೆ ಮುಖ ಮಾಡುತ್ತಿದೆ. ಶಿಕ್ಷಣದ ಮೇಲೆ ಕೂಡ ಪ್ರಭಾವ ಬೀರಿದೆ ಎಂದರು.