ಸುದ್ದಿಮೂಲ ವಾರ್ತೆ
ಹೈದರಾಬಾದ್, ಏ.10: ನಾಗಚೈತನ್ಯ ಅವರ ತೆಲುಗು ‘ಕಸ್ಟಡಿ’ ಸಿನಿಮಾವು ಮೇ 12 ರಂದು ರಿಲೀಸ್ ಆಗುತ್ತಿರುವ ಹಿನ್ನೆಲೆ ತೆಲಂಗಾಣದ ಪ್ರಸಿದ್ಧ ರಾಜಕಾರಣಿ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಿ. ಮಲ್ಲಾರೆಡ್ಡಿ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿರುವುದರ ಮೂಲಕ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ನೀಡಿರುತ್ತಾರೆ.
ಮಲ್ಲಾರೆಡ್ಡಿ ಸಂಸ್ಥೆಯ ವಾರ್ಷಿಕೊತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದ ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ ಅವರು ತಮ್ಮ ಮುಂದಿನ ʻಕಸ್ಟಡಿʼ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದು, ಇದೇ ವೇಳೆ ವೇದಿಕೆಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಗೊಳಿಸುವುದರ ಮೂಲಕ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಿಸಿದರು.
ಈ ವೇಳೆ ಮಾತನಾಡಿದ ಮಲ್ಲಾರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ಮೇ 12 ರಂದು ಸಿನಿಮಾ ಬಿಡುಗಡೆಗೊಳ್ಳುತ್ತಿರುವ ಕಾರಣ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದು ಪರೀಕ್ಷೆಗಳಿದ್ದಲ್ಲಿ ಮುಂದುಡಲಾಗುವುದು ಮತ್ತು ವಿಶೇಷ ತರಗತಿಗಳು ಇದ್ದರೆ ಕಾಲೇಜಿಗೆ ಬಂಕ್ ಮಾಡಿ ನಾಗ ಚೈತನ್ಯ ಅವರ ಚಲನಚಿತ್ರವನ್ನು ವೀಕ್ಷಿಸಬೇಕೆಂದು ತಮ್ಮ ವಿದ್ಯಾರ್ಥಿಗಳಿಗೆ ನೇರವಾಗಿ ಹೇಳಿದರು.
ಸಿನಿಮಾ ನೋಡಿ ಎಂದು ಶಾಲೆಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು. ಆದರೆ ಶಾಲಾ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೇನಾ ಮಕ್ಕಳನ್ನು ಶಾಲೆಗೆ ಕಳಿಸುವುದು ಎಂದು ಸಿಟ್ಟಿಗೆದ್ದಿದ್ದಾರೆ.
ಕಸ್ಟಡಿ 2023ರ ತೆಲುಗು ಮತ್ತು ತಮಿಳು ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಕಸ್ಟಡಿ ಸಿನಿಮಾದಲ್ಲಿ ಪೊಲೀಸ್ ಒಬ್ಬ ಶಿವನ ಕಥೆಯನ್ನು ಒಳಗೊಂಡಿದೆ. ನಾಗ ಚೈತನ್ಯ, ನಟನು ತನ್ನ ಕುತ್ತಿಗೆಯಲ್ಲಿ ರುದ್ರಾಕ್ಷಿ ಧರಿಸಿದ್ದು ಮತ್ತು ಪೊಲೀಸ್ ಸಮವಸ್ತ್ರವನ್ನು ಧರಿಸಿರುವುದರ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಆಕ್ಷನ್ ಡ್ರಾಮಾ ಎಂದು ಹೇಳಲಾಗಿದ್ದು. ನಾಯಕಿಯಾಗಿ ಕೃತಿ ಶೆಟ್ಟಿ, ಪ್ರಮುಖ ಪಾತ್ರಗಳಲ್ಲಿ ಪ್ರಿಯಾಮಣಿ, ಸಂಪತ್ ರಾಜ್, ಅರವಿಂದ್ ಸ್ವಾಮಿ, ಪ್ರೇಮ್ಗಿ ಅಮರೇನ್ ಮತ್ತು ವೆನ್ನೆಲಾ ಕಿಶೋರ್ ಸೇರಿದಂತೆ ತಮ್ಮ ಚಿತ್ರದ ತಾರಾಬಳಗ ಇದೆ.