ಸುದ್ದಿಮೂಲ ವಾರ್ತೆ ಬಳಗಾನೂರು, ನ.03:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಾಯಿಸಿ ರಾಜ್ಯ ಪೌರ ಕಾರ್ಮಿಕ ಸಂಘದ ಕರೆಯ ಮೇರೆಗೆ ಡಿ.5 ರಿಂದ ಪೌರ ಕಾರ್ಮಿಕರು ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸಲಿದ್ದಾಾರೆ ಎಂದು ಒಕ್ಕೂಟದ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಾಲಾಪುರ ತಿಳಿಸಿದ್ದಾಾರೆ.
ಬುಧವಾರ ಪಪಂ ಮುಖ್ಯಾಾಧಿಕಾರಿಗಳಿಗೆ, ಪಪಂ ಅಧ್ಯಕ್ಷರಿಗೆ ಮುಷ್ಕರದ ಪತ್ರವನ್ನು ಸಂಘದ ಪದಾಧಿಕಾರಿಗಳೊಂದಿಗೆ ನೀಡಿ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದು ಸರ್ಕಾರ ಪೌರ ಸೇವಾ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಾಯಿಸಿದರು.
ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆೆ ಗಳು ಪೌರ ಸೇವಾ ನೌಕರರ ಮುಷ್ಕರಕ್ಕೆೆ ಬೆಂಬಲ ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾಾರೆ.
ಪೌರಸೇವಾ ನೌಕರರ ಅನಿರ್ದಿಷ್ಟಾಾವಧಿ ಮುಷ್ಕರಕ್ಕೆ ಬೆಂಬಲಿಸಲು ಮಲ್ಲಿಕಾರ್ಜುನ ಹಾಲಾಪುರ ಮನವಿ

