ಸುದ್ದಿಮೂಲ ವಾರ್ತೆ ನವದೆಹಲಿ, ಜ.06:
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಪ್ರಧಾನಿ ನರೇಂದ್ರ ಮೋದಿ ಯಾಕೆ ತಲೆಬಾಗುತ್ತಿಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಿಲ್ಲ. ಇದು ರಾಷ್ಟ್ರಕ್ಕೆೆ ಹಾನಿಕಾರಕವಾಗಿದೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ, ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಾಳಿನಡೆಸಿದ್ದಾರೆ.
ರಷ್ಯಾಾದಿಂದ ತೈಲ ಖರೀದಿಸುವುದನ್ನು ವಿರೋಧಿಸಿ ಟ್ರಂಪ್ ನೀಡಿರುವ ಮತ್ತೊೊಂದು ಹೇಳಿಕೆ ಸಂಬಂಧ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಾಳಿ ನಡೆಸಿದ್ದಾರೆ.
‘ಕಳೆದ ವರ್ಷ ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ನಂತರ ಭಾರತವು ರಷ್ಯಾಾದ ತೈಲದ ಆಮದನ್ನು ಕಡಿಮೆ ಮಾಡಲು ಇಚ್ಛೆೆಯನ್ನು ತೋರಿಸಿದೆ ಎಂದು ಟ್ರಂಪ್ ಹೇಳಿದ್ದರು. ಆಡಿಯೋ ಕ್ಲಿಿಪ್ನಲ್ಲಿಈ ಹೇಳಿಕೆ ಕೇಳಿಬಂದಿದೆ. ಮೋದಿ ಅವರು ನನ್ನನ್ನು ಸಂತೋಷಪಡಿಸಲು ಬಯಸಿದ್ದರು’ ಎಂದು ಟ್ರಂಪ್ ಆಡಿಯೊ ಕ್ಲಿಿಪ್ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಪ್ರಧಾನಿ ಮೋದಿ ಟ್ರಂಪ್ ಮುಂದೆ ಮೋದಿ ಯಾಕೆ ತಲೆಬಾಗುತ್ತಿಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಿಲ್ಲ. ಅವರು ದೇಶಕ್ಕಾಾಗಿ ನಿಲ್ಲಬೇಕು ಎಂದು ಹೇಳಿದರು.
ಟ್ರಂಪ್ ಏನೇ ಹೇಳಿದರೂ ಮೋದಿ ತಲೆಬಾಗುತ್ತಾಾರೆ. ದೇಶವು ಅವರನ್ನು ಪ್ರಧಾನಿಯಾಗಿ ಆಯ್ಕೆೆ ಮಾಡಿದ್ದು, ಇದು ದೇಶಕ್ಕೆೆ ಹಾನಿಕಾರಕವಾಗಿದೆ ಎಂದಿದ್ದಾರೆ.
’ಮೋದಿ ನನ್ನನ್ನು ಗೌರವಿಸುತ್ತಾಾರೆ ಮತ್ತು ನನ್ನ ಮಾತನ್ನು ಕೇಳುತ್ತಾಾರೆ’ ಎಂದು ಟ್ರಂಟ್ ಹೇಳುವ ಆಡಿಯೋವನ್ನು ನಾನು ಕೇಳಿದ್ದೇನೆ. ಇದರ ಅರ್ಥವೇನು? ಇದರರ್ಥ ಮೋದಿ ಅವರ ನಿಯಂತ್ರಣದಲ್ಲಿದ್ದಾರೆ ಎಂದರ್ಥವೇ ಎಂದು ಖರ್ಗೆ ವಾಗ್ದಾಾಳಿ ನಡೆಸಿದರು.
ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರ ಇತ್ತೀಚಿನ ಬಂಧನದ ಬಗ್ಗೆೆ ಕಳವಳ ವ್ಯಕ್ತಪಡಿಸಿದ ಖರ್ಗೆ, ಇದು ವಸಾಹತುಶಾಹಿ ಪ್ರವೃತ್ತಿಿಗಳು ಮತ್ತು ರಾಷ್ಟ್ರಗಳನ್ನು ಬೆದರಿಸುವ ಪ್ರಯತ್ನ ಎಂದರು.

