ಸುದ್ದಿಮೂಲ ವಾರ್ತೆ
ಮಾಲೂರು,ಮೇ 26: ತಾಲೂಕಿನ ಜನತೆ ಶಾಸಕನಾಗಲು ಮತ್ತೊಂದು ಅವಕಾಶ ಕಲ್ಪಿಸಿದ್ದು ಜನತೆಯ ಪರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಬೇಕೆಂದು ತಾಲೂಕು ಮಟ್ಟದ ಆಡಳಿತ ಅಧಿಕಾರಿಗಳಿಗೆ ಶಾಸಕ ಕೆ.ವೈ. ನಂಜೇಗೌಡ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಹಿಂದೆ ಶಾಸಕನಾಗಿ ಆಡಳಿತ ನಡೆಸಿದ ಅವಧಿಯಲ್ಲಿ ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಕೇವಲ 14 ತಿಂಗಳು ಆಡಳಿತ ಅವಧಿ ಇತ್ತು. ಆ ಸಮಯದಲ್ಲಿ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ತಂದು ತಕ್ಕಮಟ್ಟಿಗೆ ಅಭಿವೃದ್ಧಿಪಡಿಸಿದ್ದೇನೆ. ಈ ಅವಧಿಯಲ್ಲಿ ನಮ್ಮದೇ ಆದ ಕಾಂಗ್ರೆಸ್ ಅಧಿಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ತಾಲೂಕು ಮಟ್ಟದ ಅಧಿಕಾರಿಗಳು ಕೈಜೋಡಿಸಬೇಕು. ಜೊತೆಗೆ ಕಳೆದ ಅವಧಿಯಲ್ಲಿ ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ ಎಂದು ನಮ್ಮ ಗಮನಕ್ಕೂ ಬಂದರೂ ಸಹ ನನ್ನ ಕೈಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರವಿಲ್ಲ ಅಧಿಕಾರಿಗಳು ಸಹ ಸ್ಪಂದಿಸುತ್ತಿರಲಿಲ್ಲ ತಾಲೂಕಿನ ಜನತೆ ಬದಲಾವಣೆ ಬಯಸಿ ಮತ್ತೊಮ್ಮೆ ನನಗೆ ಶಾಸಕನಾಗಲು ಅವಕಾಶ ಕಲ್ಪಿಸಿದ್ದಾರೆ. ಜನರ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದು ಎಲ್ಲಾ ಇಲಾಖೆಗಳಲ್ಲಿ ಪೆಂಡಿಂಗ್ ಇರುವ ಫೈಲ್ಗಳನ್ನು ಕ್ಲಿಯರ್ ಮಾಡುವ ಮೂಲಕ ಜನತೆಯ ಸೇವೆಗೆ ಮುಂದಾಗಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಕೆ ರಮೇಶ್, ಇ ಓ ಮುನಿರಾಜು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.